Ashada Sale 2025: ಆಫರ್... ಆಫರ್! ಆಷಾಡಕ್ಕೆ ಭರ್ಜರಿ ಸೇಲ್
Ashada Sale 2025: ಎಲ್ಲೆಡೆ ಆಷಾಡದ ಸೇಲ್ ಶುರುವಾಗಿದೆ. ಕಳೆದ ಸೀಸನ್‌ನಲ್ಲಿ ಆಗಮಿಸಿದ್ದ ಎಲ್ಲಾ ಬಗೆಯ ಫ್ಯಾಷನ್‌ವೇರ್‌ಗಳಿಂದ ಹಿಡಿದು ಗೃಹಪಯೋಗಿ ವಸ್ತುಗಳು ಈ ಸೇಲ್‌ನಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್. ಈ ಕುರಿತಂತೆ ಇಲ್ಲಿದೆ ವರದಿ.
ಎಲ್ಲೆಡೆ ಆಷಾಡದ ಸೇಲ್ ಭರದಿಂದ ಸಾಗಿದೆ. ಕಳೆದ ಸೀಸನ್‌ನ ಸೇಲ್ ಜತೆ ಆಷಾಡದ ಸೇಲ್ ಕೂಡ ಸೇರಿಕೊಂಡಿದೆ. ಕಳೆದ ಸೀಸನ್‌ನಲ್ಲಿ ಬಿಡುಗಡೆಯಾದ ಸಾಕಷ್ಟು ಉಡುಪುಗಳು, ಸೀರೆಗಳು, ಆಕ್ಸೇಸರೀಸ್ ಹಾಗೂ ಫುಟ್‌ವೇರ್ ಸೇರಿದಂತೆ ವಾರ್ಡ್ರೋಬ್‌ಗೆ ಸಂಬಂಧಪಟ್ಟ ಎಲ್ಲಾ ಸಾಮಗ್ರಿಗಳ ಮೇಲೆ ಭಾರಿ ಡಿಸ್ಕೌಂಟ್ಸ್ ನೀಡಲಾಗುತ್ತದೆ. ಅಂದ ಹಾಗೆ, ಆಷಾಡ ಮಾಸದಲ್ಲಿ ಶಾಪಿಂಗ್ ಮಾಡುವವರು ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಸೆಳೆಯುವ ಸಲುವಾಗಿ ಆರಂಭದಲ್ಲಿ ಸೀಸನ್ ಸೇಲ್ಎನ್ನಲಾದ ಈ ಕಾನ್ಸೆಪ್ಟ್ ಆಷಾಡದ ಸೇಲ್ ಆಗಿ ಪರಿವರ್ತನೆಯಾಗುತ್ತದೆ. ಗ್ರಾಹಕರನ್ನು ಜಾಹೀರಾತುಗಳ ಮೂಲಕ ಸೆಳೆಯಲಾಗುತ್ತದೆ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್.
ಸ್ಟಾಕ್ ಕ್ಲಿಯರೆನ್ಸ್ ಸೇಲ್ ಸದುಪಯೋಗ
ಇನ್ನು ಸ್ಟಾಕ್ ಕ್ಲಿಯರೆನ್ಸ್ ಸೇಲ್‌ಗಳಲ್ಲಿ ಕೊಂಚ ಬುದ್ದಿ ಉಪಯೋಗಿಸಿದಲ್ಲಿ ಸಾಕಷ್ಟು ಹಣ ಉಳಿತಾಯ ಮಾಡಬಹುದು. ಹಾಗೆಂದು ಕಂಡ ಕಂಡ ಉಡುಪುಗಳನ್ನು ಕೊಂಡರೆ ಲಾಭಕ್ಕಿಂತ ನಷ್ಟವೇ ಹೆಚ್ಛಾಗಬಹುದು. ಹಾಗಾಗಿ ತಮಗೆ ಅಗತ್ಯವಿರುವ ಉಡುಪುಗಳನ್ನು ಖರೀದಿಸಿದಾಗ ಉಳಿತಾಯವಾಗಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಉದಾಹರಣೆಗೆ, ನೈಟ್‌ವೇರ್, ಡೈಲಿ ಮನೆಯಲ್ಲಿ ಧರಿಸಬಹುದಾದ ಉಡುಪುಗಳು ಹಾಗೂ ಡೆನೀಮ್ ಡ್ರೆಸ್‌ಗಳು, ಪ್ಯಾಂಟ್ ಹಾಗೂ ಮಕ್ಕಳ ಉಡುಪುಗಳು ಕ್ಲಿಯರೆನ್ಸ್ ಸೇಲ್‌ನಲ್ಲಿ ಕೊಂಡಲ್ಲಿ ಲಾಭವಾದೀತು. ಟ್ರೆಂಡ್‌ಗೆ ಸೂಟ್ ಆಗದಿದ್ದರೂ ಕೂಡ ಮನೆಯಲ್ಲೆ ಇವನ್ನು ಧರಿಸಬಹುದಾಗಿರುವುದರಿಂದ ಹೆಚ್ಚೆನೂ ಡಿಫರೆನ್ಸ್ ಅನಿಸುವುದಿಲ್ಲ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್.
ಆಷಾಡ ಸೀರೆ ಸೇಲ್
ಮುಂಬರುವ ಶ್ರಾವಣಕ್ಕೆ ಅದರಲ್ಲೂ ಫೆಸ್ಟೀವ್ ಸೀಸನ್‌ಗೆ ಹೊಸ ವಿನ್ಯಾಸದ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹಾಗಾಗಿ ಈ ಕಳೆದ ಸೀಸನ್‌ನಲ್ಲಿ ಬಿಡುಗಡೆಯಾದ ನಾನಾ ವೆರೈಟಿ ಸೀರೆಗಳಿಗೆ ಇದೀಗ ಸೇಲ್ ಘೋಷಿಸಲಾಗಿದೆ. ಸೀರೆ ಪ್ರೇಮಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಸೀಸನ್‌ಗೆ ಟ್ರೆಂಡಿಯಾಗಿರದಿದ್ದರೂ ಮಿಕ್ಸ್ ಮ್ಯಾಚ್ ಮಾಡಿ ಧರಿಸುವ ಅವಕಾಶವಿರುವುದರಿಂದ ಪ್ರತಿ ಬಾರಿ ಆಷಾಡ ಸೀರೆ ಸೇಲ್ ಕಾನ್ಸೆಪ್ಟ್ ಎಲ್ಲೆಡೆ ಯಶಸ್ವಿಯಾಗಿಯೇ ನಡೆಯುತ್ತದೆ. ಖರೀದಿಸುವವರ ಸಂಖ್ಯೆಯೂ ಜಾಸ್ತಿ ಇರುತ್ತದೆ ಎನ್ನುತ್ತಾರೆ ಸೀರೆ ಮಾರಾಟಗಾರರು.
ಮಾಲ್‌ಗಳಲ್ಲಿ ಕಿಡ್ಸ್‌ವೇರ್‌ಗೆ ಡಿಸ್ಕೌಂಟ್ಸ್
ಈ ಆಷಾಡದಲ್ಲಿ, ಉಡುಪುಗಳು ಹಾಗೂ ಆಕ್ಸೆಸರೀಸ್‌ಗಳ ಮೇಲೆ ಮಾಲ್‌ಗಳಲ್ಲಿ ಮಾತ್ರವಲ್ಲ, ಶಾಪಿಂಗ್ ಸ್ಟೋರ್‌ಗಳಲ್ಲೂ ಡಿಸ್ಕೌಂಟ್ಸ್ ನೀಡುತ್ತಿರುವುದು ಎಲ್ಲೆಡೆ ಕಾಣಬಹುದು ಕಾರಣ ಎನ್ನುತ್ತಾರೆ ಮಾಲ್‌ವೊಂದರ ಸೇಲ್ಸ್ ಮ್ಯಾನೇಜರ್.
ಸೇಲ್ ಖರೀದಿಗೆ ಟಿಪ್ಸ್
- ಖರೀದಿಸುವ ಉಡುಪುಗಳ ಗುಣಮಟ್ಟ ತಿಳಿದುಕೊಂಡು ಕೊಳ್ಳಿ.
- ಆನ್‌ಲೈನ್‌ನಲ್ಲಿ ಖರೀದಿಸುವ ಮುನ್ನ ಎಚ್ಚರವಿರಲಿ.
- ಸೇಲ್ಸ್ ಎಲ್ಲೆಲ್ಲಿದೆ? ಎಂಬುದರ ಬಗ್ಗೆ ಜಾಹೀರಾತುಗಳಿಂದ ಮಾಹಿತಿ ಪಡೆಯಬಹುದು.
- ಸೇಲ್‌ಗಳಲ್ಲಿ ಕೊಳ್ಳುವ ಪ್ರಾಡಕ್ಟ್‌ಗಳಿಗೆ ಎಕ್ಸ್‌ಚೇಂಜ್ ಸೌಲಭ್ಯ ಇರುವುದಿಲ್ಲ.