ಸಂದರ್ಶನ: ಶೀಲಾ ಸಿ. ಶೆಟ್ಟಿ
ಕಿರುತೆರೆ ನಟ ರಾಮ್ ಪವನ್ ಶೇಟ್ ರೆಡ್ ಬ್ಲೇಜರ್‌ನಲ್ಲಿ ಮಾನ್ಸೂನ್ ಲುಕ್‌ನಲ್ಲಿ (Celebrity Monsoon Fashion 2025) ಕಾಣಿಸಿಕೊಂಡಿದ್ದಾರೆ. ಸೀಸನ್‌ಗೆ ತಕ್ಕಂತೆ ಬದಲಾಗಿರುವ ಅವರ ಈ ಫ್ಯಾಷನ್ ಸ್ಟೇಟ್‌ಮೆಂಟ್, ಫಾಲೋವರ್‌ಗಳನ್ನು ಆಕರ್ಷಿಸಿದೆ. ಮನೆದೇವ್ರು, ಜೋಡಿ ಹಕ್ಕಿ, ಬ್ರಹ್ಮಗಂಟು, ಕಣ್ಮಣಿ, ಗಿಣಿರಾಮ, ಭೈರವಿ ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿರುವ ಮೂಲಕ ಜನಮನ್ನಣೆ ಗಳಿಸಿರುವ ರಾಮ್ ಪವನ್ ಶೇಟ್ ತಮ್ಮ ಸೀಸನ್ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳ ಬಗ್ಗೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ ಸಾರಾಂಶ ಇಲ್ಲಿದೆ.
ವಿಶ್ವವಾಣಿ ನ್ಯೂಸ್: ಮಾನ್ಸೂನ್ ಸೀಸನ್‌ನಲ್ಲಿ ಬದಲಾದ ನಿಮ್ಮ ಲುಕ್ ಬಗ್ಗೆ ಹೇಳಿ?
ರಾಮ್ ಪವನ್ ಶೇಟ್: ಸೀಸನ್‌ಗೆ ತಕ್ಕಂತೆ ಒಂದಿಷ್ಟು ಲುಕ್‌ನಲ್ಲಿ ಬದಲಾವಣೆ ತಂದಿದ್ದೇನೆ. ರೆಡ್ ಜಾಕೆಟ್ ಶೈಲಿಯ ಬ್ಲೇಜರ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಸಾಕಷ್ಟು ಮಂದಿಗೆ ಈ ಲುಕ್ ಇಷ್ಟವಾಗಿದೆ.
ವಿಶ್ವವಾಣಿ ನ್ಯೂಸ್: ನೀವು ಧರಿಸಿರುವ ಬ್ಲೇಜರ್ ವಿಶೇಷತೆಯೇನು?
ರಾಮ್ ಪವನ್ ಶೇಟ್: ಡೀಪ್ ರೆಡ್‌ನ ಈ ಬ್ಲೇಜರ್ ಟೈಲರ್ಡ್ ಫಿಟ್ ವಿನ್ಯಾಸ ಹೊಂದಿದೆ. ಈ ಪಾಪ್ ಕಲರ್ ಸದ್ಯ ಟ್ರೆಂಡ್‌ನಲ್ಲಿದೆ. ಇನ್ನು, ಇದಕ್ಕೆ ಧರಿಸಿರುವ ಡಾರ್ಕ್ ಕಲರ್ಡ್ ಬ್ಲ್ಯಾಕ್ ಪ್ಯಾಂಟ್ ವೈಬ್ರೆಂಟ್ ಬ್ಲೇಜರನ್ನು ಹೈಲೈಟ್ ಮಾಡಿದೆ.

ವಿಶ್ವವಾಣಿ ನ್ಯೂಸ್: ಬ್ಲೇಜರ್‌ನಲ್ಲಿ ಹೈಲೈಟ್ ಆದ ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್‌ಗಳೇನು?
ರಾಮ್ ಪವನ್ ಶೇಟ್: ಟ್ರಾನ್ಸಪರೆಂಟ್ ಐ ವೇರ್ ಕ್ಲಾಸಿ ಲುಕ್ ನೀಡಿದೆ. ಜತೆಗೆ ಕಿವಿಯ ಸ್ಟಡ್ಸ್ , ವಾಚ್, ಬ್ರೇಸ್‌ಲೆಟ್ ನೆಕ್ ಚೈನ್ ನನ್ನ ಈ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸಾಥ್ ನೀಡಿದೆ.
ವಿಶ್ವವಾಣಿ ನ್ಯೂಸ್: ನಿಮ್ಮ ಯೂನಿಕ್ ಫ್ಯಾಷನ್‌ನಲ್ಲಿ ಏನಿದೆ?
ರಾಮ್ ಪವನ್ ಶೇಟ್: ನ್ಯೂಟ್ರಲ್ ಶೇಡ್ಸ್ ನನ್ನ ಯೂನಿಕ್ ಫ್ಯಾಷನ್‌ನಲ್ಲಿ ಸೇರಿದೆ.
ವಿಶ್ವವಾಣಿ ನ್ಯೂಸ್: ನಿಮ್ಮ ಫಾಲೋವರ್ಸ್‌ಗೆ ನೀವು ನೀಡುವ ಫ್ಯಾಷನ್ ಟಿಪ್ಸ್ ಏನು?
ರಾಮ್ ಪವನ್ ಶೇಟ್:
- ಔಟ್‌ಫಿಟ್ ಧರಿಸಿದಾಗ ನಿಮ್ಮಲ್ಲಿರುವ ಆತ್ಮವಿಶ್ವಾಸ ನಿಮ್ಮನ್ನು ಹೈ ಲೈಟ್ ಆಗುವಂತೆ ಮಾಡುತ್ತದೆ.
- ಸ್ಮಾರ್ಟ್ ಸ್ಟೈಲಿಂಗ್ ಕಾನ್ಸೆಪ್ಟ್ ಅಳವಡಿಸಿಕೊಳ್ಳಿ.
- ಮಾನ್ಸೂನ್‌ಗೆ ಹೊಂದುವಂತಹ ಪವರ್ ಕಲರ್ಸ್ ಆಯ್ಕೆ ಮಾಡಿ.
- ಬೋಲ್ಡ್ ಕಲರ್‌ಗಳು ನಿಮ್ಮನ್ನು ಫ್ಯಾಷನೆಬಲ್ ಆಗಿ ಕಾಣುವಂತೆ ಬಿಂಬಿಸುತ್ತವೆ.
- ಸೀಸನ್‌ಗೆ ತಕ್ಕಂತೆ ಫ್ಯಾಷನ್ ಟ್ರೆಂಡ್ ಫಾಲೋ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Monsoon Fashion 2025: ಮಾನ್ಸೂನ್ ಮಳೆ ಗಾಳಿಗೆ ಮರಳಿದ ಫ್ಯಾಷನ್ ಪ್ರಿಯರ ಟರ್ಟಲ್ ನೆಕ್ ಡ್ರೆಸ್