Kids Fashion 2025: ಮಕ್ಕಳ ಸ್ಟೈಲಿಂಗ್‌ಗೆ ಸೇರಿದ ಕಲರ್‌ಫುಲ್ ಫಂಕಿ ಸನ್ ಗ್ಲಾಸ್
Kids Fashion 2025: ಈ ಹಿಂದೆ ದೊಡ್ಡವರಿಗೆ ಮಾತ್ರ ಸೀಮಿತವಾಗಿದ್ದ ಕಲರ್‌ಫುಲ್ ಫ್ರೇಮ್ ಇರುವಂತಹ ಸನ್‌ಗ್ಲಾಸ್‌ಗಳು, ಇದೀಗ ಮಕ್ಕಳ ಸ್ಟೈಲಿಂಗ್‌ಗೂ ಕಾಲಿಟ್ಟಿವೆ. ಈಗಾಗಲೇ ನಾನಾ ಬ್ರಾಂಡ್‌ಗಳಲ್ಲಿ ದೊರೆಯುತ್ತಿರುವ ಇವುಗಳ ವಿನ್ಯಾಸ ಹಾಗೂ ಆಯ್ಕೆ ಹೇಗೆ? ಬಳಸಬಹುದೇ? ಎಂಬುದರ ಬಗ್ಗೆ ಕಿಡ್ಸ್ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.
ಮಕ್ಕಳ ಸ್ಟೈಲಿಂಗ್‌ಗೆ ಇದೀಗ ಕಲರ್‌ಫುಲ್ ಸನ್‌ಗ್ಲಾಸ್‌ಗಳು ಸೇರಿಕೊಂಡಿವೆ. ಹೌದು, ಇದೀಗ ಮಕ್ಕಳ ಫಂಕಿ ಸನ್‌ಗ್ಲಾಸ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಧರಿಸಿದಾಗ ನೋಡಲು ಮುದ್ದು ಮುದ್ದಾಗಿ ಬಿಂಬಿಸುತ್ತಿವೆ.
ಮಕ್ಕಳಿಗೆ ಕಲರ್‌ಫುಲ್ ಫ್ರೇಮ್‌ನ ಸನ್‌ಗ್ಲಾಸ್‌ಗಳು
ಕಲರ್‌ಫುಲ್ ಫ್ರೇಮ್ ಇರುವಂತಹ ಮಿನಿ ಸನ್‌ಗ್ಲಾಸ್‌ಗಳು, ಪುಟ್ಟ ಮಕ್ಕಳಿಗೂ ಮುದ್ದಾದ ಚಿಣ್ಣರಿಗೂ ಬಗೆಬಗೆಯ ವಿನ್ಯಾಸದಲ್ಲಿ ಬಂದಿವೆ. ನಾನಾ ಬ್ರ್ಯಾಂಡ್‌ಗಳಲ್ಲಿ ದೊರೆಯುತ್ತಿರುವ ಇವು ಆಯಾ ವಿನ್ಯಾಸ ಹಾಗೂ ಅದರಲ್ಲಿರುವ ಗ್ಲಾಸ್‌ಗೆ ತಕ್ಕಂತೆ ಬೆಲೆ ಹೊಂದಿರುತ್ತವೆ. ಅಷ್ಟೇಕೆ! ನೋಡಲು ಆಕರ್ಷಕವಾದ ಕ್ಯೂಟ್ ಡಿಸೈನ್‌ಗಳಲ್ಲೂ ಲಭ್ಯವಿದೆ ಎನ್ನುತ್ತಾರೆ ಮಾರಾಟಗಾರರು.
ಮಕ್ಕಳ ಸನ್‌ಗ್ಲಾಸ್ ವೆರೈಟಿ
ಇದೀಗ ಮಕ್ಕಳಿಗೆ ದೊರೆಯುತ್ತಿರುವ ಸನ್‌ಗ್ಲಾಸ್‌ಗಳಲ್ಲಿ ಬಿಳಿ, ಹಳದಿ, ಪಿಂಕ್, ಬ್ಲ್ಯೂ, ವೈಟ್, ರೆಡ್ ಹೀಗೆ ಬಣ್ಣಬಣ್ಣದ ಫ್ರೇಮ್‌ಗಳಿಗೆ ಹೆಚ್ಚು ಮಾನ್ಯತೆ ಇರುವುರಿಂದ ಫಂಕಿ ಶೈಲಿಯ ಕ್ಯಾಟ್ ಐ ಶೇಪ್, ಹಾರ್ಟ್ ಶೇಪ್, ಓವಲ್, ರೆಕ್ಟಾಂಗಲ್, ರೌಂಡ್ ಶೇಪ್ನವು ಹೆಚ್ಚು ಚಾಲ್ತಿಯಲ್ಲಿವೆ.
ಸ್ಟ್ರೀಟ್‌ನಲ್ಲಿ ದೊರೆಯುವ ಸನ್‌ಗ್ಲಾಸ್ ಬೇಡ!
ಬೀದಿ ಬದಿಯ ಅಂಗಡಿಗಳಲ್ಲಿ ನಾನಾ ಬಗೆಯ ಸನ್‌ಗ್ಲಾಸ್‌ಗಳು ದೊರೆಯುತ್ತಿವೆ. ಕಡಿಮೆ ದೊರೆಯುತ್ತಿರುವ ಇವನ್ನು ಬಳಸುತ್ತಿರುವವರು ಹೆಚ್ಚಾಗಿದ್ದಾರೆ. ಹೆಚ್ಚು ಸಮಯ ಮಕ್ಕಳಿಗೆ ಇವನ್ನು ಹಾಕಿದಲ್ಲಿ ಕಣ್ಣಿನ ಸಮಸ್ಯೆಯಾಗಬಹುದು. ಹಾಗಾಗಿ ಇವನ್ನು ಕೊಳ್ಳುವ ಮುನ್ನ ಯೋಚಿಸಿ. ಹೆಚ್ಚು ಸಮಯ ಮಕ್ಕಳಿಗೆ ಹಾಕಬೇಡಿ ಎನ್ನುತ್ತಾರೆ ಐ ಸ್ಪೆಷಲಿಸ್ಟ್ ವಿನುತಾ.
ನಿಮ್ಮ ಮಕ್ಕಳ ಸನ್ ಗ್ಲಾಸ್ ಆಯ್ಕೆಗೆ ಟಿಪ್ಸ್
- ಉತ್ತಮ ಗುಣಮಟ್ಟದ ಬ್ರಾಂಡೆಡ್ ಕಂಪನಿಯ ಸನ್‌ಗ್ಲಾಸ್ ಆಯ್ಕೆ ಮಾಡಿ.
- ಬೀದಿ ಬದಿಯಲ್ಲಿ ಕೊಳ್ಳುವ ಸನ್‌ಗ್ಲಾಸ್‌ನಿಂದ ಕಣ್ಣಿಗೆ ಅಪಾಯ ಎಂಬುದು ತಿಳಿದಿರಲಿ.
- ಆದಷ್ಟೂ ಫೋಟೋಶೂಟ್‌ಗಾಗಿ ಮಾತ್ರ ಬಳಸಿ.
- ಜಾಸ್ತಿ ಹೊತ್ತು ಮಕ್ಕಳಿಗೆ ಸನ್‌ಗ್ಲಾಸ್ ಬಳಸಲು ನೀಡದಿರಿ.