ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kids Hoodies Fashion 2025: ಚಿಣ್ಣರನ್ನು ಕ್ಯೂಟ್ ಆಗಿ ಬಿಂಬಿಸುವ ಹೂಡಿ ಫ್ಯಾಷನ್

ಈ ಸೀಸನ್‌ನಲ್ಲಿ ಮುದ್ದು ಕಂದಮ್ಮಗಳನ್ನು ಹಾಗೂ ಚಿಣ್ಣರನ್ನು ಕ್ಯೂಟಾಗಿ ಬಿಂಬಿಸುವ ವೈವಿಧ್ಯಮಯ ಹೂಡಿ ಫ್ಯಾಷನ್‌ವೇರ್ಸ್ ನಾನಾ ಡಿಸೈನ್‌ನಲ್ಲಿ ದೊರೆಯುತ್ತಿವೆ. ಇವುಗಳ ಆಯ್ಕೆ ಹೇಗೆ? ಯಾವ್ಯಾವ ಶೈಲಿಯವು ಸದ್ಯ ಟ್ರೆಂಡಿಯಾಗಿವೆ? ಎಂಬುದರ ಬಗ್ಗೆ ಕಿಡ್ಸ್ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

ಚಿಣ್ಣರನ್ನು ಕ್ಯೂಟ್ ಆಗಿ ಬಿಂಬಿಸುವ ಹೂಡಿ ಫ್ಯಾಷನ್

ಚಿತ್ರಗಳು: ಮಾಸ್ಟರ್ ಹಿತಾರ್ಥ್, ಬೇಬಿ ಮಾಡೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಸೀಸನ್‌ನಲ್ಲಿ ಮುದ್ದು ಕಂದಮ್ಮಗಳನ್ನು ಹಾಗೂ ಚಿಣ್ಣರನ್ನು ಕ್ಯೂಟಾಗಿ ಬಿಂಬಿಸುವ ಹೂಡಿ ಫ್ಯಾಷನ್‌ವೇರ್‌ಗಳು (Kids Hoodies Fashion 2025) ಟ್ರೆಂಡಿಯಾಗಿದೆ. ಮಕ್ಕಳನ್ನು ಬೆಚ್ಚಗಿಡುವ ಇವು ಕ್ಯೂಟ್ ಎಂದೆನಿಸುವ ನಾನಾ ವೈವಿಧ್ಯಮಯ ಡಿಸೈನ್‌ನಲ್ಲಿ ಬಂದಿವೆ. ಕಾರ್ಟೂನ್ ಹೂಡಿ, ಫರ್ ಹೂಡಿ, ಬಟನ್ ಹೂಡಿ, ಜಿಪ್ ಹೂಡಿ, ಟೀ ಶರ್ಟ್ ಸ್ಟೈಲ್ ಹೂಡಿ, ವುಲ್ಲನ್ ಹೂಡಿ, ಪ್ಲೀಝ್ ಹೂಡಿ, ಪಾಲಿಸ್ಟಾರ್ ಹೂಡಿ, ಕಾರ್ಟೂನ್ ಕ್ಯಾರೆಕ್ಟರ್ ಪ್ರಿಂಟ್ಸ್ ಹೂಡಿ, ಕ್ಯಾಪ್-ಟೋಪಿ ಹೂಡಿ ಸೇರಿದಂತೆ ನಾನಾ ಬಗೆಯವು ಚಾಲ್ತಿಯಲ್ಲಿವೆ. ಇವುಗಳಲ್ಲಿ ಹೆಣ್ಣು ಮಕ್ಕಳಿಗಾಗಿ, ಯೂನಿಕಾರ್ನ್ ಹಾಗೂ ಬಾರ್ಬಿ ಪ್ರಿಂಟ್ಸ್ ಇರುವಂತವು ಹೆಚ್ಚು ಟ್ರೆಂಡಿಯಾಗಿವೆ. ಇನ್ನು ಗಂಡು ಮಕ್ಕಳ ಹೂಡಿಗಳಲ್ಲಿ ಸೂಪರ್ ಹೀರೋ ಕಾರ್ಟೂನ್ ಪ್ರಿಂಟ್ಸ್, ಆವೆಂಜರ್ಸ್ ಪ್ರಿಂಟ್ಸ್ ಸೇರಿದಂತೆ ಲೈಟ್ ಹಾಗೂ ಡಾರ್ಕ್ ಕಲರ್‌ನವು ಚಾಲ್ತಿಯಲ್ಲಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ಧಮನ್. ಅವರ ಪ್ರಕಾರ, ಮಕ್ಕಳ ಹೂಡಿಗಳಲ್ಲಿ, ಬ್ರ್ಯಾಂಡೆಡ್‌ನವು ಬಲು ದುಬಾರಿ. ಲೋಕಲ್ ಬ್ರ್ಯಾಂಡ್‌ನವು ಮಾತ್ರ ಕೈಗೆಟಕುವ ಬೆಲೆಯಲ್ಲಿ ದೊರಕುತ್ತಿವೆ ಎನ್ನುತ್ತಾರೆ.

21

ಕಂಫರ್ಟಬಲ್ ಹೂಡಿ ಫ್ಯಾಬ್ರಿಕ್‌ಗೆ ಆದ್ಯತೆ

ಚಿಕ್ಕ ಮಕ್ಕಳಿಗೆ ಖರೀದಿಸುವ ಹೂಡಿಗಳು ಸಾಫ್ಟ್ ಫ್ಯಾಬ್ರಿಕ್ ಹೊಂದಿರಬೇಕು. ಫಿನಿಶಿಂಗ್ ಚೆನ್ನಾಗಿರಬೇಕು. ನೋಡಲು ಸ್ಟೈಲಿಶ್ ಆಗಿ ಕಂಡರೆ ಸಾಲದು, ದೇಹವನ್ನು ಬೆಚ್ಚಗಿಡಬೇಕು. ಇದಕ್ಕಾಗಿ ಚಳಿಗಾಲಕ್ಕೆ ಬೆಚ್ಚಗಿಡುವ ಫ್ಯಾಬ್ರಿಕ್‌ನ ಹೂಡಿಗಳನ್ನೇ ಆಯ್ಕೆ ಮಾಡಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

22

ಹೂಡಿ ಆಯ್ಕೆ ಮಾಡುವಾಗ ಗಮನಿಸಿ

ತೀರಾ ದೊಗಲೆ ಹೂಡಿ ಆಯ್ಕೆ ಬೇಡ. ತೀರಾ ಫಿಟ್ ಆಗಿರುವುದು ಬೇಡ. ದೊಗಲೆಯಾಗಿದ್ದಲ್ಲಿ ಗಾಳಿಯಾಡಬಹುದು, ಚಳಿಯಾಗಬಹುದು. ಇನ್ನು ಟೈಟಾಗಿದ್ದಲ್ಲಿ ಮೈ ರ‍್ಯಾಶಸ್ ಆಗಬಹುದು. ಉಸಿರುಗಟ್ಟಿಸಬಹುದು. ಹಾಗಾಗಿ ಬ್ರಿತಬಲ್ ಹೂಡಿಗಳನ್ನು ಖರೀದಿಸಿ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ಸ್.

23

ಮಕ್ಕಳ ಹೂಡಿ ಖರೀದಿಸುವವರಿಗೆ ಟಿಪ್ಸ್

* ಚಿಣ್ಣರಿಗೆ ಯೂನಿಸೆಕ್ಸ್ ಡಿಸೈನ್ ಆಯ್ಕೆ ಬೇಡ.

* ಬೆಚ್ಚಗಿರುವಂತಹದ್ದನ್ನು ಆಯ್ಕೆ ಮಾಡಿ.

* ಚಿತ್ರಗಳಿರುವಂತವನ್ನು ಖರೀದಿಸಿ. ಚಿಣ್ಣರಿಗೆ ಇಷ್ಟವಾಗುವುದು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Stars Valentines Day Fashion 2025: ಹೀಗಿತ್ತು ಸೆಲೆಬ್ರೆಟಿಗಳ ವ್ಯಾಲೆಂಟೈನ್ಸ್ ಡೇ ಫ್ಯಾಷನ್!