Stars Valentines Day Fashion 2025: ಹೀಗಿತ್ತು ಸೆಲೆಬ್ರೆಟಿಗಳ ವ್ಯಾಲೆಂಟೈನ್ಸ್ ಡೇ ಫ್ಯಾಷನ್!
Stars Valentines Day Fashion 2025: ಬಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ನಾನಾ ಕ್ಷೇತ್ರದ ಸೆಲೆಬ್ರೆಟಿಗಳ ವ್ಯಾಲೆಂಟೈನ್ಸ್ ಡೇಯ ಫ್ಯಾಷನ್ ಸ್ಟೇಟ್‌ಮೆಂಟ್ಸ್ ವಿಧವಿಧವಾಗಿತ್ತು. ಕೆಲವರು ರೆಡ್ ಡ್ರೆಸ್‌ನಲ್ಲಿ ಮಿಂಚಿದರೆ, ಇನ್ನು ಕೆಲವರು ಸಿಂಗಲ್ ಆದ್ರೂ ಟ್ರೆಂಡಿಯಾದ ಫ್ಯಾಷೆನಬಲ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡರು. ಈ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

ನಟಿ ಪ್ರಿಯಾಂಕಾ-ಉಪೇಂದ್ರ ದಂಪತಿ ಹಾಗೂ ಸಂಗಾತಿಯೊಂದಿಗೆ ನಿರೂಪಕಿ ಚೈತ್ರಾ ವಾಸುದೇವನ್.

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ಡೇಯಂದು ನಾನಾ ಕ್ಷೇತ್ರದ ಸೆಲೆಬ್ರೆಟಿಗಳು ತಮ್ಮದೇ ಆದ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಲ್ಲಿ (Stars Valentines Day Fashion 2025) ಕಾಣಿಸಿಕೊಂಡರು. ಮದುವೆಯಾದ ಸೆಲೆಬ್ರೆಟಿಗಳು ತಮ್ಮ ಸಂಗಾತಿಯೊಂದಿಗೆ ಫ್ಯಾಷೆನಬಲ್ ಆಗಿ ಕಾಣಿಸಿಕೊಂಡರೆ, ಇನ್ನು ಸಿಂಗಲ್ ಆಗಿರುವವರು, ಇನ್ನೊಂದು ರೀತಿಯಲ್ಲಿ ಕಾಣಿಸಿಕೊಂಡರು. ಸ್ನೇಹಿತೆಯರು ಗ್ಯಾಲೆಂಟೈನ್ಸ್ ಲುಕ್‌ನಲ್ಲಿ ಕಾಣಿಸಿಕೊಂಡರು. ಒಟ್ಟಿನಲ್ಲಿ, ವ್ಯಾಲೆಂಟೈನ್ಸ್ ಡೇಯ ಫ್ಯಾಷನ್ ಲುಕ್ ವೈವಿಧ್ಯಮಯವಾಗಿತ್ತು. ಒಂದಿಷ್ಟು ಮಾನಿನಿಯರು ರೆಡ್ ಡ್ರೆಸ್‌ನಲ್ಲಿ ಮಿಂಚಿದರೆ, ಇನ್ನು ಕೆಲವರು, ಟ್ರೆಂಡಿ ಔಟ್‌ಫಿಟ್‌ಗಳ ಫ್ಯಾಷೆನಬಲ್ ಲುಕ್‌ನಲ್ಲಿ ಮಿನುಗಿದರು. ಈ ಎಲ್ಲದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

ಬಾಲಿವುಡ್ ಸೆಲೆಬ್ರೆಟಿಗಳ ಫ್ಯಾಷನ್ ರಂಗು
ಎಂದಿನಂತೆ, ಬಾಲಿವುಡ್‌ನ ಸ್ಟಾರ್ ಕಪಲ್‌ಗಳಾದ ನಿಕ್-ಪ್ರಿಯಾಂಕಾ ಚೋಪ್ರಾ, ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ, ರಿತೇಶ್-ಜೆನಿಲಿಯಾ, ಫರ್ಹಾನ್ ಅಖ್ತಾರ್-ಶಿಬಾನಿ, ರಾಜ್‌ಕುಮಾರ್ ಯಾದವ್-ಪತ್ರಲೇಖಾ, ಅಜಯ್ ದೇವಗನ್-ಕಾಜೋಲ್ ಸೇರಿದಂತೆ ಹಲವರು ಜೋಡಿಗಳು ಫ್ಯಾಷೆನಬಲ್ ಕಾಣಿಸಿಕೊಂಡು ತಮ್ಮದೇ ಆದ ಕಪಲ್ ಫ್ಯಾಷನ್ ವೇರ್‌ಗಳಲ್ಲಿ ಮಿಂಚಿದರು. ಬಹುತೇಕರು ವೆಸ್ಟನ್‌ವೇರ್‌ಗಳಿಗೆ ಆದ್ಯತೆ ನೀಡಿದ್ದರು. ಕೆಲವರು ಫೋಟೋ ಬದಲು ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಅಪ್‌ಡೇಟ್ ಮಾಡುವ ಮೂಲಕ ತಮ್ಮ ವ್ಯಾಲೆಂಟೈನ್ ಲವ್ ವ್ಯಕ್ತಪಡಿಸಿದರು.

ಸ್ಯಾಂಡಲ್‌ವುಡ್ ತಾರೆಯರ ವ್ಯಾಲೆಂಟೈನ್ಸ್ ಫ್ಯಾಷನ್
ಸ್ಯಾಂಡಲ್‌ವುಡ್‌ನ ಸ್ಟಾರ್ ಕಪಲ್‌ಗಳಾದ ಪ್ರಿಯಾಂಕ ಉಪೇಂದ್ರ, ಹರ್ಷಿಕಾ-ಭುವನ್, ಅನು-ರಘು-ಮುಖರ್ಜಿ, ನಿರೂಪಕಿ ಚೈತ್ರಾ ವಾಸುದೇವನ್ ಸೇರಿದಂತೆ ಹಲವರು ಎಥ್ನಿಕ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂಗಾತಿಯೊಂದಿಗಿನ ಫ್ಯಾಷೆನಬಲ್ ಫೋಟೋಗಳನ್ನು ಹಾಕಿಕೊಂಡು ಸಂಭ್ರಮಿಸಿದರು. ಅಭಿಮಾನಿಗಳನ್ನು ಸೆಳೆದರು.

ಸಿಂಗಲ್ಸ್ ವ್ಯಾಲೆಂಟೈನ್ಸ್ ಲುಕ್
ನಟಿ ಊರ್ವಶಿ ಸೇರಿದಂತೆ ಇನ್ನು ಮದುವೆಯಾಗದ ನಟಿಯರು ಅಥವಾ ಡಿವೋರ್ಸ್ ಆಗಿರುವಂತಹ ಊರ್ಮಿಳಾ ಮಾತೊಂಡ್ಕರ್ ಸೇರಿದಂತೆ ಕಮಿಟ್ ಆಗದ ಸಿಂಗಲ್ ಆಗಿರುವ ಬಾಲಿವುಡ್ –ಸ್ಯಾಂಡಲ್‌ವುಡ್-ಟೆಲಿವುಡ್ ಸೆಲೆಬ್ರೆಟಿಗಳು ಕೂಡ ವ್ಯಾಲೆಂಟೈನ್ಸ್ ಡೇ ಸೆಲೆಬ್ರೆಟ್ ಮಾಡಿದರು. ಕೆಲವರು ತಮ್ಮ ಗರ್ಲ್ ಫ್ರೆಂಡ್ಸ್ ಜತೆಗೂಡಿ ಗ್ಯಾಲೆಂಟೈನ್ಸ್ ಡೇ ಆಚರಿಸಿದರು. ಒಟ್ಟಾರೆ, ಒಬ್ಬೊಬ್ಬರು ಒಂದೊಂದು ಶೈಲಿಯಲ್ಲಿ ತಮ್ಮದೇ ಫ್ಯಾಷನ್ ಲುಕ್‌ನಲ್ಲಿ ಕಾಣಿಸಿಕೊಂಡರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Water Melon Jewel Fashion 2025: ಹುಡುಗಿಯರ ಕಿವಿಯನ್ನು ಅಲಂಕರಿಸುತ್ತಿರುವ ಕಲ್ಲಂಗಡಿ ಆಕ್ಸೆಸರೀಸ್