ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Krishna Janmastami 2026: ಕೃಷ್ಣ ಜನ್ಮಾಷ್ಟಮಿಗೆ ರಾಧಾಳಂತೆ ಕಾಣಿಸಲು ಇಲ್ಲಿವೆ 5 ಐಡಿಯಾ

Krishna Janmastami 2026: ಕೃಷ್ಣ ಜನ್ಮಾಷ್ಟಮಿಗೆ ನೀವು ರಾಧಾಳಂತೆ ಸುಂದರವಾಗಿ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳಬೇಕೇ?, ಇದಕ್ಕಾಗಿ ಒಂದಿಷ್ಟು ಟ್ರೆಡಿಷನಲ್‌ ಆಗಿ ಕಾಣಿಸಿಕೊಳ್ಳುವ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಕೃಷ್ಣ ಜನ್ಮಾಷ್ಟಮಿಗೆ ರಾಧಾಳಂತೆ ಕಾಣಿಸಲು ಇಲ್ಲಿವೆ 5 ಐಡಿಯಾ

ಚಿತ್ರಗಳು: ಲಾಸ್ಯ, ನಟಿ -

Profile
Siddalinga Swamy Sep 1, 2026 5:32 PM

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕೃಷ್ಣ ಜನ್ಮಾಷ್ಟಮಿಗೆ (Krishna Janmastami 2026) ನೀವು ರಾಧಾಳಂತೆ ಸುಂದರವಾಗಿ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಆದರೆ, ಇದಕ್ಕಾಗಿ ಒಂದಿಷ್ಟು ಟ್ರೆಡಿಷನಲ್‌ ಆಗಿ ಕಾಣಿಸಿಕೊಳ್ಳುವ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Grand Lehenga Selection

ಟ್ರೆಡಿಷನಲ್‌ ಲುಕ್‌ ನೀಡುವ ಲೆಹೆಂಗಾ

ಟ್ರೆಡಿಷನಲ್‌ ಲೆಹೆಂಗಾ ಅಥವಾ, ಲಂಗ-ದಾವಣಿ ಆಯ್ಕೆ ಮಾಡಿ. ಇದು ಧರಿಸಿದಾಗ ನೋಡಲು ಥೇಟ್‌ ರಾಧಾಳಂತೆ ಕಾಣಿಸುವ ಉಡುಗೆ ಆಯ್ಕೆ ಮಾಡಿ, ಧರಿಸಿ.

Traditional look

ಗ್ರ್ಯಾಂಡ್‌ ಲೆಹೆಂಗಾ ಸೆಲೆಕ್ಷನ್

ಲೆಹೆಂಗಾ ಸಿಂಪಲ್ಲಾಗಿರಬಾರದು. ದುಪಟ್ಟಾ ಲಂಗ-ಬ್ಲೌಸ್‌ ಎಲ್ಲವೂ ಹೆವಿ ವರ್ಕ್‌ನದ್ದಾಗಿರಬೇಕು. ಗ್ರ್ಯಾಂಡ್‌ ಲುಕ್‌ ನೀಡುವಂತಿರಬೇಕು. ಜ್ಯುವೆಲ್‌ ಬ್ಲೌಸ್‌ ಆದರೆ ಉತ್ತಮ. ಬೀಡ್ಸ್, ಕ್ರಿಸ್ಟಲ್‌ ಇಲ್ಲವೇ ಕುಂದನ್‌ ಕಲಾಂಕಾರಿ ಹೊಂದಿರುವ ಡಿಸೈನ್‌ ಇದ್ದಲ್ಲಿ ಗ್ರ್ಯಾಂಡ್‌ ಆಗಿ ಕಾಣಿಸುವು ದು.

Grand Lehenga

ಟೆಂಪಲ್‌ ಜ್ಯುವೆಲರಿ/ಟ್ರೆಡಿಷನಲ್‌ ಆಭರಣ ಧರಿಸಿ

ಈ ಲೆಹೆಂಗಾಗೆ ಆದಷ್ಟೂ ಟೆಂಪಲ್‌ ಇಲ್ಲವೇ ಟ್ರೆಡಿಷನಲ್‌ ಆಂಟಿಕ್‌ ಆಭರಣಗಳನ್ನು ಧರಿಸಿ. ಇವು ನೋಡಲು ತೇತ್ರಾಯುಗದ ರಾಧೆಯಂತೆ ಬಿಂಬಿಸುವುದು. ಗೋಲ್ಡ್‌ ಅಥವಾ ಇಮಿಟೇಷನ್‌ ಆಭರಣ ಧರಿಸಬಹುದು.

ಮೇಕಪ್‌ ಅಂದವಾಗಿರಲಿ

ಟ್ರೆಡಿಷನಲ್‌ ಉಡುಗೆಗೆ ಹೊಂದುವಂತಹ ಮೇಕಪ್‌ ಮಾಡಿ. ಕಣ್ಣಿಗೆ ಕಾಡಿಗೆ, ಹಣೆಗೆ ಬಿಂದಿ, ತುಟಿಗೆ ಬಣ್ಣ ಎಲ್ಲವೂ ಧರಿಸಿರುವ ಉಡುಗೆಗೆ ಮ್ಯಾಚ್‌ ಆಗಲಿ. ಗ್ಲಾಸಿ ಹಾಗೂ ಸ್ಮೋಕಿ ಮೇಕಪ್‌ ಬೇಡ!

Jewel Fashion 2026: ಜ್ಯುವೆಲ್ ಫ್ಯಾಷನ್‌ಗೆ ಮರಳಿದ ಅಜ್ಜಿ ಕಾಲದ ಕಾಸಿನ ಸರ

ಹೇರ್‌ಸ್ಟೈಲ್‌ಗೆ ಜಡೆ ಬಿಲ್ಲೆ ಧರಿಸಿ

ರಾಧಾ ಲುಕ್‌ಗಾಗಿ ಉದ್ದುದ್ದ ಜಡೆ ಹೆಣೆಯಿರಿ, ಟ್ರೆಡಿಷನಲ್‌ ಹೇರ್‌ ಆಕ್ಸೆಸರೀಸ್‌ ಧರಿಸಿ. ಜಡೆ ಬಿಲ್ಲೆ ಧರಿಸಿ. ನೋಡಲು ಚೆಂದನಾಗಿ ಕಾಣಿಸುವುದು. ಮಾರುಕಟ್ಟೆಯಲ್ಲಿ ದೊರೆಯುವ ಹೂಬಿಲ್ಲೆ ಅಥವಾ ಗಜ್ರಾಗಳನ್ನೂ ಕೂಡ ಧರಿಸಬಹುದು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)