ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monsoon jewel Fashion 2025: ಮಾನ್ಸೂನ್ ಫ್ಯಾಷನ್ ಜ್ಯುವೆಲರಿಯಲ್ಲಿ ಮಿನಿ ಛತ್ರಿಗಳ ಹಂಗಾಮ!

Monsoon jewel Fashion 2025: ಮಾನ್ಸೂನ್ ಫ್ಯಾಷನ್ ಜ್ಯುವೆಲರಿಗಳಲ್ಲಿ ಇದೀಗ ಮಿನಿ ಛತ್ರಿಗಳ ಥೀಮ್ ಇರುವಂತಹ ಕಾನ್ಸೆಪ್ಟ್ ಟ್ರೆಂಡಿಯಾಗಿದೆ. ಈ ವಿನ್ಯಾಸದಲ್ಲಿ ಕಿವಿಯೊಲೆಗಳು, ಪೆಂಡೆಂಟ್ ಹಾಗೂ ಉಂಗುರಗಳು ಬಿಡುಗಡೆಗೊಂಡಿವೆ. ಈ ಬಗ್ಗೆ ಇಲ್ಲಿದೆ ವರದಿ.

ಚಿತ್ರಕೃಪೆ: ಇನ್ಸ್ಟಾಗ್ರಾಮ್
1/5

ಮಾನ್ಸೂನ್ ಫ್ಯಾಷನ್ ಜ್ಯುವೆಲರಿಗಳಲ್ಲಿ ಇದೀಗ ಛತ್ರಿಗಳ ಹಂಗಾಮ ಹೆಚ್ಚಾಗಿದೆ. ಇದೇನಿದು? ಛತ್ರಿಗಳಿಗೂ ಫ್ಯಾಷನ್ ಜ್ಯುವೆಲರಿಗಳಿಗೂ ಏನು ಸಂಬಂಧ ಎಂದು ಕೊಂಡಿರಾ! ಛತ್ರಿಗಳ ಥೀಮ್ ಇರಿಸಿಕೊಂಡಂತಹ ಫ್ಯಾಷನ್ ಜ್ಯುವೆಲರಿಗಳು, ಫ್ಯಾಷನ್ ಜ್ಯುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿದ್ದು, ಯುವತಿಯರನ್ನು ಸೆಳೆಯತೊಡಗಿವೆ.

2/5

ನಾನಾ ಡಿಸೈನ್‌ನ ಇಯರಿಂಗ್ಸ್

ಊಹೆಗೂ ಮೀರಿದ ವಿನ್ಯಾಸದ ಜ್ಯುವೆಲರಿಗಳು ಕಾಣಿಸಿಕೊಂಡಿವೆ. ಛತ್ರಿಯ ಚಿತ್ತಾರವಿರುವ ಹ್ಯಾಂಗಿಂಗ್ಸ್, ಕಿವಿಯೊಲೆ, ಸ್ಟಡ್ಸ್, ಉಂಗುರ, ಬ್ರೇಸ್ಲೆಟ್, ಫಿಂಗರ್‌ರಿಂಗ್‌ಗಳು ಜ್ಯುವೆಲರಿ ಡಿಸೈನರ್‌ಗಳ ಕೈಗಳಲ್ಲಿ ಬಗೆಬಗೆಯ ರೂಪ ಪಡೆದು ಎಂಟ್ರಿ ನೀಡಿವೆ. ನೋಡಲು ಡಿಫರಂಟ್ ಲುಕ್ ನೀಡುವ ಈ ಫ್ಯಾಷನ್ ಜ್ಯುವೆಲರಿಗಳು ಜೆನ್ ಜಿ ಹುಡುಗಿಯರನ್ನು ಹೆಚ್ಚು ಆಕರ್ಷಿಸಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.

3/5

ಅತ್ಯಾಕರ್ಷಕ ಛತ್ರಿಗಳ ಕಿವಿಯೋಲೆ

ಅಗಲವಾದ ಕಲರ್‌ಫುಲ್ ಛತ್ರಿ, ಛತ್ರಿಯ ಮೇಲೆ ನೀರಿನ ಡ್ರಾಪ್ ಬೀಳುತ್ತಿರುವಂತಹ ಕ್ರಿಸ್ಟಲ್ ಅಂಬ್ರೆಲ್ಲಾ ಹ್ಯಾಂಗಿಂಗ್ಸ್, ಲೈಟ್ವೇಟ್ ಮೆಟೀರಿಯಲ್‌ನಲ್ಲಿ ಮಾಡಿದ ಇಯರಿಂಗ್ಸ್ ಹೆಚ್ಚು ಪಾಪುಲರ್ ಆಗಿವೆ. ಇನ್ನು, ಪರ್ಲ್, ಮೆಟಲ್, ಸ್ಟೋನ್, ಕಾಟನ್, ಟೆರಾಕೋಟ್, ವುಡನ್, ಸಿಲ್ವರ್, ಗೋಲ್ಡ್ ಕವರ್ಡ್ ಪ್ಯಾಟರ್ನ್‌ನಲ್ಲಿಯೂ ನಾನಾ ಛತ್ರಿ ಚಿತ್ತಾರದ ಹ್ಯಾಂಗಿಂಗ್ಸ್ ಬಿಡುಗಡೆಗೊಂಡಿವೆ. ಫಂಕಿ ಲುಕ್‌ಗೆ ಸಾಥ್ ನೀಡುತ್ತಿವೆ. ಛತ್ರಿ ಮೇಲೆ ಮಳೆಯ ಹನಿ, ಮೋಡದ ನಡುವೆ ಹಾರುತ್ತಿರುವ ಛತ್ರಿ ಹೀಗೆ ನಾನಾ ಬಗೆಯವು ಹುಡುಗಿಯರನ್ನು ಅಲಂಕರಿಸುತ್ತಿವೆ.

4/5

ಮಲ್ಟಿ ಡಿಸೈನ್‌ನ ಛತ್ರಿಯ ಫಿಂಗರ್ ರಿಂಗ್

ಇನ್ನು, ವಿವಿಧ ವಿನ್ಯಾಸ ವಿರುವ ಉಂಗುರಗಳು ಕೂಡ ಫಂಕಿ ಜ್ಯುವೆಲರಿ ಕೆಟಗರಿಯಲ್ಲಿ ಬಿಡುಗಡೆಯಾಗಿವೆ. ಅದರಲ್ಲೂ ಬ್ಲ್ಯೂ ಹಾಗೂ ವೈಟ್ ಕ್ರಿಸ್ಟಲ್ ಸ್ಟೋನ್‌ಗಳಿಂದ ಮಾಡಿರುವ ಛತ್ರಿಯ ಕಾಕ್ಟೈಲ್ ಡಿಸೈನ್‌ನ ಉಂಗುರುಗಳು ಹುಡುಗಿಯರನ್ನು ಆಕರ್ಷಿಸಿವೆ ಎನ್ನುತ್ತಾರೆ ಮಾರಾಟಗಾರರಾದ ಲಕ್ಷ್ಮಣ್.

5/5

ಆನ್‌ಲೈನ್‌ನಲ್ಲಿ ಲಭ್ಯ

  • ಆನ್‌ಲೈನ್‌ನಲ್ಲಿ ಬಗೆಬಗೆಯ ಛತ್ರಿ ಡಿಸೈನ್‌ನ ಫ್ಯಾಷನ್ ಜ್ಯುವೆಲರಿಗಳನ್ನು ಕಾಣಬಹುದು ಎನ್ನುತ್ತಾರೆ ಜ್ಯುವೆಲ್ ಡಿಸೈನರ್.
  • ಕಮರ್ಷಿಯಲ್ ಸ್ಟ್ರೀಟ್ ಸುತ್ತಾ ಮುತ್ತಾ ಅಂಬ್ರೆಲಾ ಫ್ಯಾಷನ್ ಜ್ಯುವೆಲರಿಗಳು ಕೊಳ್ಳಲು ಲಭ್ಯ.
  • ಆನ್‌ಲೈನ್‌ನಲ್ಲಿ ಸಾಕಷ್ಟು ಡಿಸೈನ್ಸ್ ಲಭ್ಯ.
  • ಕ್ಯಾಶುವಲ್ ಉಡುಪಿಗೆ ಸಖತ್ತಾಗಿ ಕಾಣುತ್ತವೆ.

ಶೀಲಾ ಸಿ ಶೆಟ್ಟಿ

View all posts by this author