-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ 6ನೇ ದಿನದ ಬಣ್ಣ ಹಸಿರು ವರ್ಣದಲ್ಲಿ (Navaratri Fashion 2026) ನೀವೂ ಕೂಡ ಹಸಿರುಮಯವಾಗಬಹುದು. ಹೌದು, ಹಸಿರಿನಲ್ಲೂ ನಾನಾ ಶೇಡ್ಗಳಿವೆ. ಸ್ತ್ರೀಯರು ಅವರವರ ಅಭಿರುಚಿಗೆ ತಕ್ಕಂತೆ ಕಲರ್ ಹಾಗೂ ವಿನ್ಯಾಸವನ್ನು ಆಯ್ಕೆ ಮಾಡಿಕೊಂಡು ಒಂದಿಷ್ಟು ಫ್ಯಾಷನ್ ಟಿಪ್ಸ್ ಫಾಲೋ ಮಾಡಿದಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಹಸಿರು ವರ್ಣದಲ್ಲಿ ಆಕರ್ಷಕ ಲುಕ್
ನವರಾತ್ರಿಯ ಈ ಫೆಸ್ಟಿವ್ ಸೀಸನ್ನಲ್ಲಿ ಈಗಾಗಲೇ ಫ್ಯಾಷನ್ಲೋಕವು ನಾನಾ ಬಗೆಯ ಹಸಿರು ಡಿಸೈನರ್ವೇರ್ ಹಾಗೂ ಸೀರೆಗಳನ್ನು ಬಿಡುಗಡೆಗೊಳಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಂಗ್ ಟಿಪ್ಸ್
ಅಷ್ಟು ಮಾತ್ರವಲ್ಲದೇ, ಸ್ಟೈಲಿಸ್ಟ್ಗಳು ಕೂಡ ಮಹಿಳೆಯರು ತಮ್ಮ ಬಳಿಯಿರುವ ಹಸಿರು ಸೀರೆಯಲ್ಲೇ ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು ಅಥವಾ ವಾರ್ಡ್ರೋಬ್ನಲ್ಲಿರುವ ಹಸಿರು ಔಟ್ಫಿಟ್ಗೆ ಹೇಗೆ ಹೊಸ ಲುಕ್ ನೀಡಬಹುದು ಎಂಬುದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಹಸಿರು ಸೀರೆಯ ನಯಾ ಲುಕ್
ಮಹಿಳೆಯರೇ, ನಿಮ್ಮ ಬಳಿ ರೇಷ್ಮೆಯ ಹಸಿರು ಸೀರೆ ಇದ್ದಲ್ಲಿ ಹೊಸ ಶೈಲಿಯಲ್ಲಿ ಡ್ರೇಪಿಂಗ್ ಮಾಡಿ. ಇಲ್ಲವೇ ಹೊಸ ಡಿಸೈನರ್ ಬ್ಲೌಸ್ ಧರಿಸಿ. ಸೀರೆಗೆ ನಯಾ ಲುಕ್ ದೊರೆಯುವುದು ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಜ್ಯುವೆಲರಿ ಮ್ಯಾಚ್ ಮಾಡಿ
ಅವರು ಹೇಳುವಂತೆ, ಜ್ಯುವೆಲರಿಗಳನ್ನು ಅಷ್ಟೇ! ಡಿಫರೆಂಟ್ ಆಗಿ ಇರುವುದನ್ನು ಧರಿಸಿ. ಕಳೆದ ಬಾರಿ ಗೋಲ್ಡ್ ಜ್ಯುವೆಲರಿ ಧರಿಸಿದ್ದಲ್ಲಿ, ಈ ಬಾರಿ ಟೆರ್ರಾಕೋಟಾ ಅಥವಾ ಆಕ್ಸಿಡೈಸ್ಡ್ ಆಭರಣಗಳನ್ನು ಧರಿಸಿ. ಇದು ಹಳೆಯ ಹಸಿರು ಸೀರೆಗೆ ಹೊಸ ಲುಕ್ ನೀಡುತ್ತದೆ ಎನ್ನುತ್ತಾರೆ.
Navaratri Saree Fashion 2026: ನಾರಿಯರ ನವರಾತ್ರಿಯ ಸಂಭ್ರಮಕ್ಕೆ ನವ ವರ್ಣದ ಸೀರೆಗಳು
ಮೇಕೋವರ್ ಆಕರ್ಷಕವಾಗಿರಲಿ
ಇನ್ನು, ಪ್ರತಿನಿತ್ಯದ ಹೇರ್ಸ್ಟೈಲ್ ಹೊರತಾಗಿ ಹೊಸತನ್ನು ಪ್ರಯೋಗ ಮಾಡಿ. ಹಣೆಗೆ ಅಗಲವಾದ ಬಿಂದಿ ಇಡಿ. ಹೂ ಮುಡಿಯಿರಿ. ಮೇಕಪ್ ಹಿತ ಮಿತವಾಗಿರಲಿ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)