Navaratri Saree Fashion 2026: ನಾರಿಯರ ನವರಾತ್ರಿಯ ಸಂಭ್ರಮಕ್ಕೆ ನವ ವರ್ಣದ ಸೀರೆಗಳು
Navaratri Celebration: ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ನವವರ್ಣದ ಲಿಸ್ಟ್ ನಿಗದಿಯಾಗಿದೆ. ಆಯಾ ದಿನಕ್ಕೆ ತಕ್ಕಂತೆ ನವರಾತ್ರಿಯ ಸಂಭ್ರಮಕ್ಕೆ ಯಾವ್ಯಾವ ಕಲರ್‌ನ ಸೀರೆಗಳನ್ನು ಉಡಬೇಕು? ಎಂಬುದರ ಬಗ್ಗೆ ಫ್ಯಾಷನಿಸ್ಟಾ ಶ್ವೇತಾ ನಂದಕುಮಾರ್ ಇಲ್ಲಿ ತಿಳಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ವಿವರ.
ಚಿತ್ರಗಳು: ಶ್ವೇತಾ ನಂದಕುಮಾರ್, ಫ್ಯಾಷನಿಸ್ಟಾ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ನವವರ್ಣದ ಲಿಸ್ಟ್ ನಿಗದಿಯಾಗಿದೆ. ಆಯಾ ದಿನಕ್ಕೆ ತಕ್ಕಂತೆ ನವರಾತ್ರಿಯ ಸಂಭ್ರಮಕ್ಕೆ (Navaratri Saree Fashion 2026) ಯಾವ್ಯಾವ ಕಲರ್‌ನ ಸೀರೆಗಳನ್ನು ಉಡಬೇಕು? ಎಂಬುದರ ಬಗ್ಗೆ ಫ್ಯಾಷನಿಸ್ಟಾ ಶ್ವೇತಾ ನಂದಕುಮಾರ್ ಇಲ್ಲಿ ತಿಳಿಸಿದ್ದಾರೆ.
ವರ್ಣರಂಜಿತ ಆರೆಂಜ್ ವರ್ಣದ ಸೀರೆ
ಅಕ್ಟೋಬರ್ 11ರ ಭಾನುವಾರದಂದು, ಬೆಳಕು ಹಾಗೂ ಜ್ಞಾನದ ಪ್ರತೀಕವಾದ ಆರೆಂಜ್ ವರ್ಣದ ಸೀರೆಗಳನ್ನು ಉಡಬಹುದು. ಈ ಕಲರ್ ಸೀರೆಗಳು ಎಂತಹವರನ್ನು ಹೈಲೈಟ್ ಮಾಡುತ್ತವೆ.
ಬಿಳಿ ಸೀರೆಯಲ್ಲಿ ಕಾಣಿಸಿಕೊಳ್ಳಿ
ಅಕ್ಟೋಬರ್ 12 ರಂದು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ವೈಟ್ ಕಲರ್‌ನ ಸೆಮಿ ಸಿಲ್ಕ್, ಟುಸ್ಸಾರ್, ಬನಾರಸ್, ಅರ್ಗಾನ್ಜಾ, ಟಿಶ್ಯೂ, ಜಾರ್ಜೆಟ್, ಸೆಮಿ ಕ್ರೇಪ್ ಡಿಸೈನರ್ ಸೀರೆಗಳನ್ನು ಉಡಬಹುದು. ಇವಕ್ಕೆ ಪರ್ಲ್ ಆಭರಣಗಳನ್ನು ಮ್ಯಾಚ್ ಮಾಡಬಹುದು.
ಕೆಂಪು ವರ್ಣದಲ್ಲಿ ಅಂದವಾಗಿ ಕಂಗೊಳಿಸಿ
ಅಕ್ಟೋಬರ್ 13 ರಂದು ಕೆಂಪು ಕಲರ್. ಈ ಸೀಸನ್ ಟ್ರೆಂಡ್‌ನಲ್ಲಿರುವ ಸಿಲ್ವರ್ ಹಾಗೂ ಗೋಲ್ಡನ್ ಬಾರ್ಡರ್ ಇರುವಂತಹ ರೇಷ್ಮೆ ಹಾಗೂ ಜಾರ್ಜೆಟ್ ಸೀರೆಗಳನ್ನು ಉಡಬಹುದು.
ರಾಯಲ್ ಬ್ಲ್ಯೂ ಅಥವಾ ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಳ್ಳಿ
ಅಕ್ಟೋಬರ್ 14 ರಂದು ಡಿವೈನ್ ಎನರ್ಜಿ ಪ್ರತಿನಿಧಿಸುವ ನೀಲಿ ಅಥವಾ ರಾಯಲ್ ಬ್ಲ್ಯೂ ವರ್ಣದ ಸೀರೆಯುಟ್ಟು ಸಂಭ್ರಮಿಸಬಹುದು. ಇವಕ್ಕೆ ಸ್ಟೇಟ್ಮೆಂಟ್ ಜ್ಯುವೆಲರಿಗಳನ್ನು ಧರಿಸಬಹುದು.
ಹಳದಿ ಬಣ್ಣದಲ್ಲಿ ಹೈಲೈಟ್ ಆಗಿ
ಅಕ್ಟೋಬರ್ 15 ರಂದು ಹಳದಿ ವರ್ಣದ ಡಿಸೈನರ್ ಸೀರೆ, ಸಿಲ್ಕ್ ಸೀರೆ ಹೀಗೆ ಯಾವುದಾದರೂ ಸರಿಯೇ, ನಿಮ್ಮ ಇಷ್ಟದ ಸೀರೆಯುಟ್ಟು ಹೈಲೈಟ್ ಆಗಿ.
ಪರಿಸರ ಪ್ರೇಮಿಗಳ ಹಸಿರು ಸೀರೆ
ಅಕ್ಟೋಬರ್ 16 ರಂದು ಪರಿಸರವನ್ನು ಪ್ರತಿನಿಧಿಸುವ ಹಸಿರು ಬಣ್ಣದ ಸೀರೆಯಲ್ಲಿ ಕಾರುಬಾರು . ಈ ಕಲರ್‌ನ ನಾನಾ ಶೇಡ್‌ಗಳ ಸೀರೆಗಳಲ್ಲಿ ಕಾಣಿಸಿಕೊಳ್ಳಬಹುದು.
ಬೂದಿ ಬಣ್ಣದ ಸೀರೆಗಳು
ಅಕ್ಟೋಬರ್ 17ರಂದು ಡಲ್ ಕಲರ್ ಎನ್ನಲಾಗುವ ಬೂದು ಬಣ್ಣಕ್ಕೆ ಆದ್ಯತೆ. ಈ ದಿನ ಈ ಕಲರ್‌ನ ಸೀರೆಯಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಳ್ಳಿ.
ನೇರಳೆ ಸೀರೆಯ ಅಂದ
ಅಕ್ಟೋಬರ್ 18ರಂದು ನೇರಳೆ ಬಣ್ಣ. ಈ ಬಣ್ಣ ಕೂಡ ಮುಖದ ಅಂದವನ್ನು ಹೈಲೈಟ್ ಮಾಡುತ್ತದೆ.
ಪೀಕಾಕ್ ಗ್ರೀನ್ ಸೀರೆಯ ಕಮಾಲ್
ಪೀಕಾಕ್ ಬ್ಲ್ಯೂನಲ್ಲಿ ಡಬ್ಬಲ್ ಶೇಡ್ ಹೊಂದಿರುವ ಸೀರೆಗಳು ಇಂದು ಟ್ರೆಂಡಿಯಾಗಿವೆ. ಅವನ್ನು ಅಕ್ಟೋಬರ್ 19 ರಂದು ಉಟ್ಟು ಸಂಭ್ರಮಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)