-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ರಕ್ಷಾ ಬಂಧನಕ್ಕೆ (Raksha Bandan Fashion 2026) ಬಗೆಬಗೆಯ ಟ್ರೆಂಡಿ ಔಟ್‌ಫಿಟ್‌ಗಳು ಆಗಮಿಸಿವೆ. ಟ್ರೆಡಿಷನಲ್ ಪ್ರಿಯರಿಗೆ ಹಾಗೂ ವೆಸ್ಟರ್ನ್ ಔಟ್‌ಫಿಟ್ ಪ್ರಿಯರಿಗೂ ಪ್ರಿಯವಾಗುವಂತಹ ಡಿಸೈನ್‌ನವು ಚಾಲ್ತಿಯಲ್ಲಿವೆ. ಅವುಗಳನ್ನು ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು ಎಂಬುದರ ಬಗ್ಗೆ ಇಲ್ಲಿದೆ ವಿವರ.
ಟ್ರೆಡಿಷನಲ್ ಡಿಸೈನರ್‌ವೇರ್ಸ್
ಅಣ್ಣ-ತಂಗಿ, ಅಕ್ಕ-ತಮ್ಮ ಹೀಗೆ ಸಹೋದರ-ಸಹೋದರಿಯರು ಇಬ್ಬರೂ ಟ್ರೆಡಿಷನಲ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುವುದು ಇತ್ತೀಚಿನ ಟ್ರೆಂಡ್. ಈ ಲುಕ್ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ. ಹಬ್ಬದ ಮೆರುಗು ನೀಡುತ್ತದೆ. ಇದಕ್ಕಾಗಿ ಸಹೋದರಿಯರು ಸೀರೆ, ಲೆಹೆಂಗಾ, ಗಾಗ್ರಾ ಧರಿಸಬಹುದು. ಇವರಿಗೆ ಮ್ಯಾಚ್ ಆಗುವಂತೆ ಸಹೋದರರು ಶೆರ್ವಾನಿ ಧರಿಸಬಹುದು.
ಸಲ್ವಾರ್ ಕಮೀಝ್ ಹಾಗೂ ಜುಬ್ಬಾ ಪೈಜಾಮ
ಹೆಣ್ಣುಮಕ್ಕಳು ಸಲ್ವಾರ್ ಕಮೀಝ್ ಧರಿಸಿದಲ್ಲಿ ಪುರುಷರು ಕೊಂಚ ವರ್ಕ್ ಇರುವಂತಹ ಜುಬ್ಬಾ- ಪೈಜಾಮ ಧರಿಸಬಹುದು. ಈ ಲುಕ್ ಕೂಡ ಚೆನ್ನಾಗಿ ಕಾಣಿಸುತ್ತದೆ. ಇಬ್ಬರ ಉಡುಪುಗಳು ಕೂಡ ಮ್ಯಾಚ್ ಆಗುತ್ತವೆ.
ಇಂಡೋ-ವೆಸ್ಟರ್ನ್ ಸ್ಟೈಲಿಂಗ್
ಸಹೋದರ-ಸಹೋದರಿಯರಿಬ್ಬರೂ ಫಂಕಿ ಲುಕ್ ಪ್ರಿಯರಾದಲ್ಲಿ ಇಬ್ಬರೂ ಕೂಡ ಸೆಮಿ ಎಥ್ನಿಕ್ ಡಿಸೈನರ್‌ವೇರ್ ಧರಿಸಬಹುದು. ಸಹೋದರಿ ವೆಸ್ಟರ್ನ್ ಕ್ರಾಪ್ ಟಾಪ್‌ಗೆ ಲಾಂಗ್ ಸ್ಕರ್ಟ್, ಇದಕ್ಕೆ ಹೊಂದುವ ಫಂಕಿ ಜ್ಯುವೆಲ್ ಹಾಗೂ ಹೇರ್‌ಸ್ಟೈಲ್ ಮಾಡಬಹುದು. ಇನ್ನು ಸಹೋದರರು ಕೂಡ ಟೀ ಶರ್ಟ್ಗೆ ಫಂಕಿ ಲುಕ್ ನೀಡುವ ವ್ರಿಸ್ಟ್ ಬ್ಯಾಂಡ್, ನೆಕ್‌ಚೈನ್ ಹಾಗೂ ಹೇರ್‌ಸ್ಟೈಲ್ ಮ್ಯಾಚ್ ಮಾಡಬಹುದು.
Raksha Bandhan 2026: ಊಹೆಗೂ ಮೀರಿದ ಡಿಸೈನ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ರಾಖಿಗಳು
ಟ್ವಿನ್ನಿಂಗ್ ಮಾಡಿ, ನೋಡಿ
ಕ್ಯಾಶುವಲ್ ಹಾಗೂ ಎಥ್ನಿಕ್ ಎರಡೂ ಬಗೆಯಲ್ಲೂ ಟ್ವಿನ್ನಿಂಗ್ ಮಾಡಬಹುದು. ಇದು ಜೆನ್ ಜಿಯ ಫ್ಯಾಷನ್ ಮಂತ್ರ ಕೂಡ. ಕ್ಯಾಶುವಲ್ ಧರಿಸುವುದಾದಲ್ಲಿ ಮೊದಲೇ ಮಾತನಾಡಿಕೊಂಡು ಒಂದೇ ವರ್ಣದ ಹಾಗೂ ಡಿಸೈನ್‌ನ ಉಡುಪುಗಳನ್ನು ಚೂಸ್ ಮಾಡಬೇಕು. ಎಥ್ನಿಕ್ ಆದಲ್ಲಿ ಒಂದೇ ವರ್ಣದ್ದಾದರೇ ಓಕೆ. ಉದಾಹರಣೆಗೆ, ಗೋಲ್ಡನ್ ವರ್ಣದ ಲೆಹೆಂಗಾ ಧರಿಸಿದಲ್ಲಿ, ಸಹೋದರ ಕೂಡ ಗೋಲ್ಡನ್ ವರ್ಣದ ಕುರ್ತಾ ಧರಿಸಬೇಕಾಗುತ್ತದೆ.
(ಲೇಖಕಿ, ಫ್ಯಾಷನ್ ಪತ್ರಕರ್ತೆ)