ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saree Fashion 2025: ಮಲ್ಟಿ ಶೇಡ್‌ ಸೀರೆ ಪ್ರಿಯರಿಗೆ ಇಲ್ಲಿದೆ 5 ಸಿಂಪಲ್‌ ಟಿಪ್ಸ್

Trendy Sarees: ಮಲ್ಟಿ ಶೇಡ್‌ ಸೀರೆಗಳು ಇತ್ತೀಚೆಗೆ ಮರಳಿ ಟ್ರೆಂಡಿಯಾಗಿವೆ. ನೋಡಲು ಆಕರ್ಷಕವಾಗಿ ಕಾಣಿಸಲು ಈ ಸೀರೆಗಳನ್ನು ಆಯ್ಕೆ ಮಾಡುವುದು ಹೇಗೆ? ಸ್ಟೈಲಿಂಗ್‌ ಹೇಗೆ? ಎಂಬುದರ ಬಗ್ಗೆ ಮಿಸೆಸ್‌ ಇಂಡಿಯಾ ಗ್ಯಾಲಕ್ಸಿ ರನ್ನರ್‌ ಅಪ್‌ (2017), ಫ್ಯಾಷನ್‌ ಎಕ್ಸ್‌ಪರ್ಟ್ ಮತ್ತು ಮಾಡೆಲ್‌ ಪ್ರಿಯಾ ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

ಚಿತ್ರಗಳು: ಪ್ರಿಯಾ ಪ್ರಶಾಂತ್‌ ಕುಮಾರ್‌, ಮಾಡೆಲ್‌, ಫ್ಯಾಷನ್‌ ಎಕ್ಸ್‌ಪರ್ಟ್
1/5

ಈ ಫೆಸ್ಟೀವ್‌ ಸೀಸನ್‌ನಲ್ಲಿ ಅತ್ಯಾಕರ್ಷಕವಾದ ಕಲರ್‌ಫುಲ್‌ ಮಲ್ಟಿ ಶೇಡ್‌ ಸೀರೆಗಳು ಇತ್ತೀಚೆಗೆ ಮರಳಿ ಟ್ರೆಂಡಿಯಾಗಿವೆ. ‌

ಏನಿದು ಮಲ್ಟಿ ಶೇಡ್‌?

ಮಲ್ಟಿ ಶೇಡ್‌ ಸೀರೆಗಳು ನಾನಾ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತವೆ. ಒಂದಕ್ಕಿಂತ ಹೆಚ್ಚು ವರ್ಣವಿರುವ ಸೀರೆಗಳನ್ನು ಮಲ್ಟಿ ಶೇಡ್‌ ಸೀರೆ ಎನ್ನಲಾಗುತ್ತದೆ. ಕೆಲವೊಮ್ಮೆ ಒಂದೆರೆಡು ವರ್ಣಗಳು ಸೀರೆಯಲ್ಲಿ ಕಂಡರೇ ಇನ್ನು ಕೆಲವಲ್ಲಿ ಆರೇಳು ವರ್ಣಗಳು ಮಿಕ್ಸ್ ಆಗಿರುತ್ತವೆ. ಸಾಮಾನ್ಯವಾದ ಫ್ಯಾಬ್ರಿಕ್‌ನಲ್ಲಿ ಮಾತ್ರವಲ್ಲ, ರೇಷ್ಮೆ ಸೀರೆಗಳಲ್ಲಿಯೂ ಇಂತಹವು ದೊರೆಯುತ್ತವೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ ಪ್ರಿಯಾ ಪ್ರಶಾಂತ್‌ ಕುಮಾರ್‌.

2/5

ಮಲ್ಟಿ ಶೇಡ್‌ ಸೀರೆಯ ಆಯ್ಕೆ

ಮಲ್ಟಿ ಶೇಡ್‌ ಸೀರೆ ಆಯ್ಕೆ ಮಾಡುವಾಗ ಕಲರ್‌ ಕಾಂಬಿನೇಷನ್‌ ಪರಿಶೀಲಿಸಿ. ಕೆಲವು ಡಾರ್ಕ್‌ ಶೇಡ್‌ನಲ್ಲಿರುತ್ತವೆ. ಕೆಲವು ಲೈಟ್‌ ಆಗಿರುತ್ತವೆ. ಹಾಗಾಗಿ ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್‌ ಆಗುವಂತಹ ಕಲರ್ಸ್‌ನದ್ದು ಆಯ್ಕೆ ಮಾಡಿ.

ಫ್ಯಾಬ್ರಿಕ್‌ ಗುಣಮಟ್ಟ ಚೆನ್ನಾಗಿರಲಿ

ಖರೀದಿಸುತ್ತಿರುವ ಫ್ಯಾಬ್ರಿಕ್‌ ಗುಣ ಮಟ್ಟ ಚೆನ್ನಾಗಿರಲಿ. ಸೀರೆಯು ಸಾಫ್ಟ್ ಆಗಿದ್ದಲ್ಲಿ, ಈಸಿಯಾಗಿ ಡ್ರೇಪಿಂಗ್‌ ಮಾಡಬಹುದು.

3/5

ಸೀರೆಯ ವಿನ್ಯಾಸಕ್ಕೆ ಪ್ರಾಮುಖ್ಯತೆ

ಮಲ್ಟಿ ಶೇಡ್‌ನ ಸೀರೆಗಳ ಆಯ್ಕೆ ಮಾಡುವಾಗ ಮೊದಲು ಆ ಸೀರೆಯ ವಿನ್ಯಾಸ ಗಮನಿಸಿ. ಜೆಮೆಟ್ರಿಕಲ್‌, ಫ್ಲೋರಲ್‌ ಅಥವಾ ಅಬ್‌ಸ್ಟ್ರಾಕ್ಟ್ ಪ್ರಿಂಟ್‌ನವಾ ಎಂಬುದನ್ನು ಗಮನಿಸಿ. ಯಾಕಂದರೇ ಎಲ್ಲರಿಗೂ ಎಲ್ಲಾ ಬಗೆಯ ಪ್ರಿಂಟ್ಸ್‌ ಮ್ಯಾಚ್‌ ಆಗದು.

4/5

ಬ್ಲೌಸ್‌ ಮ್ಯಾಚಿಂಗ್‌

ಮಲ್ಟಿ ಶೇಡ್‌ ಸೀರೆಗಳಿಗೆ ಅದೇ ಸೀರೆಯ ಬ್ಲೌಸ್‌ ಧರಿಸಬೇಕೆಂದಿಲ್ಲ! ಯಾವುದಾದರೂ ಮ್ಯಾಚ್‌ ಆಗುವಂತಹ ಸೀರೆಯಲ್ಲಿರವಂತಹ ಕಲರ್‌ನ ಡಿಸೈನರ್‌ ಬ್ಲೌಸ್‌ ಧರಿಸಬಹುದು. ಇಲ್ಲವೇ ಇಂಡೋ ವೆಸ್ಟರ್ನ್‌ ಲುಕ್‌ ನೀಡುವಂತಹ ಬ್ಲೌಸ್‌ ಧರಿಸಬಹುದು.

5/5

ಸ್ಟೈಲಿಂಗ್‌ ಬಗ್ಗೆ ಗಮನವಿಡಿ

ಮಲ್ಟಿ ಶೇಡ್‌ ಸೀರೆಗಳನ್ನು ಧರಿಸಿದಾಗ ಸ್ಟೈಲಿಂಗ್‌ ಕೂಡ ಅಷ್ಟೇ ಮುಖ್ಯವಾಗುತ್ತದೆ. ಯಾವ ರೀತಿಯ ಮೇಕೋವರ್‌ ಚೆನ್ನಾಗಿ ಕಾಣಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಶೀಲಾ ಸಿ ಶೆಟ್ಟಿ

View all posts by this author