ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ
ಭಾರತದ ಮೊತ್ತ ಮೊದಲ ಡೌನ್ ಸಿಂಡ್ರೋಮ್ ಮಾಡೆಲ್ ಸಾನಿಯಾ ಕಿಮ್ಜಿಯ (Sania Khimji) ಯಶಸ್ವಿ ಕಥೆಯಿದು! ಹೌದು, ಇಂತಹ ವಿಶೇಷಚೇತನ ಅಥವಾ ಸ್ಪೆಷಲ್ ಮಕ್ಕಳು ಸಾಮಾನ್ಯ ಜೀವನ ನಡೆಸುವುದೇ ಕಷ್ಟ ಎಂದು ಹೇಳುವವರಿಗೆ ಇವರು ಸ್ಫೂರ್ತಿ ತುಂಬುವಂತಿದ್ದಾರೆ. ಅಂದಹಾಗೆ, ಇಂದು ಅಂದ-ಚಂದದ ಬುದ್ಧಿವಂತ ಹುಡುಗಿಯರು ಮಾಡೆಲಿಂಗ್‌ನಲ್ಲಿ(Special Model 2025), ತಮ್ಮದೇ ಆದ ಛಾಪು ಮೂಡಿಸುವುದು ಕಷ್ಟವಿರುವಾಗ ಡೌನ್ ಸಿಂಡ್ರೋಮ್ ಹುಡುಗಿಯೊಬ್ಬಳು ಅಮ್ಮನ ನೆರವಿನಿಂದ ಮಾಡೆಲಿಂಗ್‌ನಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡು ಹೆಸರು ಮಾಡುವುದು ದೊಡ್ಡ ಸಾಧನೆಯೇ ಸರಿ! ಆ ಸಾಲಿಗೆ ಸೇರುವ ಸಾನಿಯಾ ಕಿಮ್ಜಿ, ತನ್ನ ತಾಯಿ ಮುದಿತಾ ಅವರ ಮಾರ್ಗದರ್ಶನದಲ್ಲಿ ಈಗಾಗಲೇ ಫ್ಯಾಷನ್ ಲೋಕದಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಶೋಗಳಲ್ಲಿ ಭಾಗವಹಿಸಿ, ನಾನಾ ಟೈಟಲ್‌ಗಳನ್ನು ಪಡೆದು ಸಾಕಷ್ಟು ಹೆಸರು ಮಾಡಿದ್ದಾರೆ. ಉದ್ಯಾನನಗರಿಯಲ್ಲಿ ನಡೆದ ಇಂಡಿಯಾ ಫ್ಯಾಷನ್ ಐಕಾನ್ 2025 ಶೋನಲ್ಲಿ ರ‍್ಯಾಂಪ್ ವಾಕ್ ಮಾಡುವುದರ ಜತೆಗೆ ಅಭಿನಂದನೆಯನ್ನು ಸ್ವೀಕರಿಸಿದ ಸಾನಿಯಾ ನಂತರ ವಿಶ್ವವಾಣಿ ನ್ಯೂಸ್‌ಗೆ ತಾಯಿಯ ಮಾರ್ಗದರ್ಶನದಲ್ಲಿ ಸಂದರ್ಶನ ನೀಡಿದರು. ಈ ಸಂದರ್ಶನದ ಸಾರಂಶ ಇಲ್ಲಿದೆ.
ವಿಶ್ವವಾಣಿ ನ್ಯೂಸ್: ಮಾಡೆಲಿಂಗ್‌ನಲ್ಲಿ ಹೆಜ್ಜೆ ಇರಿಸಲು ಕಾರಣವೇನು?
ಸಾನಿಯಾ ಕಿಮ್ಜಿ: ಅಮ್ಮನ ಪ್ರೋತ್ಸಾಹವೇ ಕಾರಣ.
ವಿಶ್ವವಾಣಿ ನ್ಯೂಸ್: ಸಾಕಷ್ಟು ಮಾಡೆಲ್‌ಗಳ ನಡುವೆ ನಿಮ್ಮನ್ನು ಗುರುತಿಸಿ, ಹೊಗಳಿದಾಗ ಏನನಿಸುತ್ತದೆ?
ಸಾನಿಯಾ ಕಿಮ್ಜಿ: ತುಂಬಾ ಖುಷಿಯಾಗುತ್ತದೆ. ಸ್ಪೆಷಲ್ ಕೆಟಗರಿಯಲ್ಲಿ ಗುರುತಿಸಿ ಅಭಿನಂದಿಸುತ್ತಾರೆ.
ವಿಶ್ವವಾಣಿ ನ್ಯೂಸ್: ಈ ಕ್ಷೇತ್ರಕ್ಕೆ ಕಾಲಿಡಲು ನೀವು ಯಾರ ಬಳಿ ಟ್ರೈನಿಂಗ್ ಪಡೆದುಕೊಂಡಿದ್ದೀರಾ?
ಸಾನಿಯಾ ಕಿಮ್ಜಿ: ಪ್ರೊಫೆಷನಲ್ ಟ್ರೈನಿಂಗನ್ನು ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಹಾಗೂ ಲಕ್ಷ್ಮಿ ರಾಣಾ ಅವರ ಬಳಿ ತರಬೇತಿ ಪಡೆದುಕೊಂಡಿದ್ದೇನೆ.
ವಿಶ್ವವಾಣಿ ನ್ಯೂಸ್: ಮಾಡೆಲಿಂಗ್ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ನಿಮಗೆ ಇಷ್ಟವಾಗುವುದೇನು?
ಸಾನಿಯಾ ಕಿಮ್ಜಿ: ಜನರ ಪ್ರೀತಿ ಹಾಗೂ ಪ್ರೋತ್ಸಾಹ
ವಿಶ್ವವಾಣಿ ನ್ಯೂಸ್: ಮಾರಿಷಸ್‌ನಲ್ಲೂ ಟೈಟಲ್ ವಿಜೇತರಾಗಿದ್ದೀರಾ? ಮಾಡೆಲಿಂಗ್ ಕ್ಷೇತ್ರದಲ್ಲೂ ಬ್ಯುಸಿಯಾಗಿದ್ದೀರಾ? ಮುಂದೇನು?
ಸಾನಿಯಾ ಕಿಮ್ಜಿ: ಅಮ್ಮನ ಮಾರ್ಗದರ್ಶನದಲ್ಲಿ ಸದಾ ಬ್ಯುಸಿಯಾಗಿರಲು ಬಯಸುತ್ತೇನೆ.
(ಸಾನಿಯಾ ಕಿಮ್ಜಿಯವರ ತಾಯಿಯ ಮಾರ್ಗದರ್ಶನದಲ್ಲಿ ಸಂದರ್ಶನ ಮಾಡಲಾಗಿದೆ)
ಲೇಖಕಿ: ಫ್ಯಾಷನ್ ಪತ್ರಕರ್ತೆ
ಈ ಸುದ್ದಿಯನ್ನೂ ಓದಿ | Fashion News 2025: ಉದ್ಯಾನನಗರಿಯಲ್ಲಿ ಯಶಸ್ವಿಯಾದ ಇಂಡಿಯಾ ಫ್ಯಾಷನ್ ಐಕಾನ್ ಶೋ