-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಲನ ಸಿನಿಮಾ ಖ್ಯಾತಿಯ ನಟಿ ಪಾರ್ವತಿ ಮೆನನ್ (Star Fashion 2026) ಬಾಟಲ್ ಗ್ರೀನ್ ವರ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದು, ಎಥ್ನಿಕ್‌ವೇರ್ ಪ್ರಿಯರ ಮನ ಗೆದ್ದಿದೆ. ತೀರಾ ಟ್ರೆಡಿಷನಲ್ ಕಲರ್ ಎಂದೆನಿಸಿಕೊಳ್ಳುವ ಡಾರ್ಕ್ ಶೇಡ್‌ನ ಬಾಟಲ್ ಗ್ರೀನ್ ಬಣ್ಣದ ವೆಗನ್ ಸಿಲ್ಕ್‌ನ ನೋಡಿದಾಗ ತಕ್ಷಣಕ್ಕೆ ಅನಾರ್ಕಲಿ ಸೂಟ್‌ನಂತೆ ಕಾಣಿಸುವ ತ್ರೀ ಪೀಸ್ ಲೆಹೆಂಗಾ ಸೂಟ್‌ನಲ್ಲಿ ಕಾಣಿಸಿಕೊಂಡಿರುವ ಪಾರ್ವತಿ ಮೆನನ್ (Parvathy Menon) ಕಂಪ್ಲೀಟ್ ಎಥ್ನಿಕ್ ಲುಕ್‌ಗೆ ಸೈ ಎಂದಿದ್ದಾರೆ.
ಹಸಿರು ಲೆಹೆಂಗಾದ ವಿಶೇಷತೆ
ಮಾನೋಕ್ರೋಮ್ ಶೇಡ್‌ನ ಈ ಹಸಿರು ಲೆಹೆಂಗಾ ಟ್ರೆಡಿಷನಲ್ ಲುಕ್ ನೀಡುವಂತಿದೆ. ತ್ರೀ ಪೀಸ್‌ನ ಈ ಲೆಹೆಂಗಾ ಶ್ರದ್ಧಾ ರಾಭೈ ಬ್ರ್ಯಾಂಡ್‌ನದ್ದಾಗಿದೆ. ಎಂಬ್ರಾಯ್ಡರಿ ಜತೆಗೆ ಟ್ರೆಡಿಷನಲ್ ಬಾರ್ಡರ್ ಕೂಡ ಹೊಂದಿದೆ. ಸೇಮ್ ಕಲರ್‌ನ ಬ್ಲೌಸ್ ಹಾಗೂ ಡಿಸೈನರ್ ದುಪಟ್ಟಾ ಹೊಂದಿದೆ.
ಪಾರ್ವತಿ ಮೇಕೋವರ್
ಇನ್ನು, ಪಾರ್ವತಿಯವರ ಮೇಕೋವರ್‌ನಲ್ಲಿ ಮಿನುಗುವ ಸ್ಟೇಟ್‌ಮೆಂಟ್ ಜ್ಯುವೆಲರಿಗಳಿವೆ. ಜಗಮಗಿಸುವ ಡ್ಯಾಂಗಲ್ ಇಯರಿಂಗ್ಸ್ ಹಾಗೂ ಫಿಂಗರ್ ರಿಂಗ್ಸ್ ಅವರನ್ನು ಹೈಲೈಟ್ ಮಾಡಿವೆ. ಇದರೊಂದಿಗೆ ಅವರ ಸಿಂಪಲ್ ಮೇಕಪ್ ಹಾಗೂ ಹೇರ್‌ಸ್ಟೈಲ್ ಅವರ ಲುಕ್ಕನ್ನು ಮತ್ತಷ್ಟು ಆಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.
ನಾರ್ತ್ ಇಂಡಿಯನ್ ಇಮೇಜ್
ಒಟ್ನಲ್ಲಿ, ಮೊಗಲ್ ರಾಜರ ಕಾಲದ ರಾಣಿಯರ ಲೆಹೆಂಗಾದಂತೆ ಕಾಣಿಸುವ ಪಾರ್ವತಿಯವರ ಎಥ್ನಿಕ್‌ವೇರ್ ಅವರಿಗೆ ನಾರ್ತ್ ಇಂಡಿಯನ್ ಲುಕ್ ನೀಡಿದೆ ಎನ್ನಬಹುದು ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)