Star Fashion 2026: ಫಾಲೋವರ್ಸ್ ನಿದ್ದೆಗೆಡಿಸಿದ ರಾಶಿ ಖನ್ನಾ ಬಾಸ್ ಲೇಡಿ ಹಾಟ್ ಲುಕ್
Raashi Khanna: ಬಹುಭಾಷಾ ತಾರೆ ರಾಶಿ ಖನ್ನಾ ಬಾಸ್ ಲೇಡಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲೇಜರ್ ಕೋ ಆರ್ಡ್ ಸ್ಕರ್ಟ್ನಲ್ಲೂ ಕ್ಲೀವೇಜ್ ಶೋ ಆಫ್ ಮಾಡಿದ್ದಾರೆ. ಅವರ ಈ ಲುಕ್ ಬಗ್ಗೆ ಫ್ಯಾಷನ್ ವಿಮರ್ಶಕರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ರಾಶಿ ಖನ್ನಾ, ಬಾಲಿವುಡ್ ನಟಿ -
ಬಾಸ್ ಲೇಡಿ ಲುಕ್ನಲ್ಲೂ ರಾಶಿ ಖನ್ನಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್ಗೆ ಫಾಲೋವರ್ಸ್ ಫಿದಾ ಆಗಿದ್ದಾರೆ.
ರಾಶಿ ಖನ್ನಾ ಹಾಟ್ ಲುಕ್
ಅರರೆ, ಅದು ಹೇಗೆ? ಬಾಸ್ ಲೇಡಿ ಲುಕ್ನಲ್ಲಿ ಹಾಟ್ ಆಗಿ ಕಾಣಿಸಲು ಸಾಧ್ಯವೇ! ಎಂದು ಯೋಚಿಸುತ್ತಿದ್ದೀರಾ? ಅದನ್ನು ಸಾಧ್ಯ ಮಾಡಿದ್ದಾರೆ ಬಹುಭಾಷಾ ತಾರೆ ರಾಶಿ ಖನ್ನಾ. ಅವರು ತಮ್ಮ ಈ ಲುಕ್ಗೆ ಒಂದಿಷ್ಟು ಟ್ವಿಸ್ಟ್ ನೀಡಿ, ಸ್ಟೈಲಿಂಗ್ ಮಾಡಿಕೊಂಡಿದ್ದಾರೆ. ಆದರೆ, ನಾವೆಲ್ಲಾ ಅಂದುಕೊಂಡಂತೆ, ಆ ಮಟ್ಟಿಗೆ ವಿಶೇಷವಾದದ್ದು ಏನೂ ಇಲ್ಲ, ಬಿಡಿ ! ಅವರು ಧರಿಸಿರುವ ಉಡುಪಿನ ಸ್ಟೈಲಿಂಗನ್ನು ಕೊಂಚ ಬದಲಾವಣೆ ಮಾಡಿದ್ದಾರೆ ಅಷ್ಟೇ! ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ರಾಶಿ ಖನ್ನಾ ಕ್ಲಿವೇಜ್
ರಾಶಿ ಖನ್ನಾ ಧರಿಸಿರುವ ಲೈಟ್ ಕಲರ್ನ ಬ್ಲೇಜರ್ ಕೋ ಆರ್ಡ್ ಸ್ಕರ್ಟ್ ಇತರೇ ಸೂಟ್ ಸೆಟ್ ಇರುವಂತೆಯೇ ಇದೆ. ಆದರೆ, ಅವರು ಬ್ಲೇಜರ್ ಒಳಗಿನ ಇನ್ನರ್ ಟಾಪ್ ಧರಿಸಿಲ್ಲ! ಬದಲಿಗೆ ಡೀಪ್ ನೆಕ್ ಕಾಲರ್ ಇರುವ ಬ್ಲೇಜರ್ನಲ್ಲೆ ಪೋಸ್ ನೀಡಿದ್ದಾರೆ. ಕ್ಲಿವೇಜ್ ಶೋ ಆಫ್ ಮಾಡಿದ್ದಾರೆ. ಇದು ಅವರಿಗೆ ಹಾಟ್ ಲುಕ್ ನೀಡಿದೆ ಎಂದಿದ್ದಾರೆ ಫ್ಯಾಷನ್ ವಿಶ್ಲೇಷಕರು.
ರಾಶಿ ಖನ್ನಾ ಬ್ಲೇಜರ್ ಸ್ಕರ್ಟ್ ಸೂಟ್
ಇನ್ನು, ರಾಶಿ ಖನ್ನಾ, ಶ್ವೇತ ವರ್ಣದ ಹೈ ಕಾಲರ್ ನೆಕ್ಲೈನ್ ಇರುವ ಫುಲ್ ಸ್ಲೀವ್ನ ಬ್ಲೇಜರ್ಗೆ ಮಿನಿ ಸ್ಕರ್ಟ್ ಧರಿಸಿದ್ದು, ಕಾರ್ಪೋರೇಟ್ ಕ್ಷೇತ್ರದ ಜೆನ್ ಜಿ ಯುವತಿಯರಿಗೆ ಪ್ರಿಯವಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಂಕು.
ರಾಶಿ ಖನ್ನಾ ಹಾಟ್ ಫೋಟೋಶೂಟ್
ಒಟ್ನಲ್ಲಿ, ರಾಶಿ ಖನ್ನಾರ ಈ ಫ್ಯಾಷನ್ ಫೋಟೋ ಶೂಟ್, ಹಾಲಿವುಡ್ ತಾರೆಯಂತೆ ಅವರನ್ನು ಬಿಂಬಿಸಿದೆ ಎಂದು ವಿಶ್ಲೇಷಿಸಿದ್ದಾರೆ ಫ್ಯಾಷನ್ ವಿಮರ್ಶಕರಾದ ಮಿಂಚು ಹಾಗೂ ವಿದ್ಯಾ.