ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಬೇಸಿಗೆಯಲ್ಲಿ ತ್ರಿಡಿ ಫ್ಲೋರಲ್‌ ಮಿನಿ ಡ್ರೆಸ್‌ಗೆ ಸೈ ಎಂದ ವಾಣಿ ಕಪೂರ್‌

Vaani Kapoor: ಬಾಲಿವುಡ್‌ ನಟಿ ವಾಣಿ ಕಪೂರ್‌ ಸಮ್ಮರ್‌ ಸೀಸನ್‌ನಲ್ಲಿ ತ್ರಿಡಿ ಫ್ಲೋರಲ್‌ ಮಿನಿ ಡ್ರೆಸ್‌ಗೆ ಸೈ ಎಂದಿದ್ದಾರೆ. ಅವರ ಈ ಡ್ರೆಸ್‌ನ ವಿಶೇಷತೆಯಾದರೂ ಏನು? ಇದ್ಯಾವ ಬಗೆಯ ಡ್ರೆಸ್‌? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಬೇಸಿಗೆಯಲ್ಲಿ ತ್ರಿಡಿ ಫ್ಲೋರಲ್‌ ಮಿನಿ ಡ್ರೆಸ್‌ಗೆ ಸೈ ಎಂದ ವಾಣಿ ಕಪೂರ್‌

ಚಿತ್ರಗಳು: ವಾಣಿ ಕಪೂರ್‌, ನಟಿ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಾಲಿವುಡ್‌ ನಟಿ ವಾಣಿ ಕಪೂರ್‌ರ ಅತ್ಯಾಕರ್ಷಕ ತ್ರಿಡಿ ಫ್ಲೋರಲ್‌ ಮಿನಿ ಡ್ರೆಸ್‌ ಫಾಲೋವರ್‌ಗಳನ್ನು ಸೆಳೆದಿರುವುದು ಮಾತ್ರವಲ್ಲ, ಸಮ್ಮರ್‌ ಸೀಸನ್‌ ಹಾಲಿಡೇ ಹೈ ಫ್ಯಾಷನ್‌ನಲ್ಲಿ (Star Fashion 2026) ಮತ್ತೊಮ್ಮೆ ಟ್ರೆಂಡಿಯಾಗಿದೆ. ಈ ಡ್ರೆಸ್‌ ವಾಣಿಯವರನ್ನು ಗ್ಲಾಮರಸ್‌ ಆಗಿ ಬಿಂಬಿಸಿರುವುದು ಮಾತ್ರವಲ್ಲ, ಹಾಲಿ ಡೇ ಫ್ಯಾಷನ್‌ನ ಅಲ್ಟ್ರಾ ಮಾಡರ್ನ್‌ ಹುಡುಗಿಯರನ್ನು ಸವಾರಿ ಮಾಡತೊಡಗಿದೆ.

ಇದ್ಯಾವ ಬಗೆಯ ಡ್ರೆಸ್‌?

ಅಂದಹಾಗೆ, ವಾಣಿ ಕಪೂರ್‌ ಧರಿಸಿರುವ ಈ ವೈಬ್ರೆಂಟ್‌ ತ್ರಿಡಿ ಫ್ಲೋರಲ್‌ ಡ್ರೆಸ್‌ ಮಲ್ಟಿ ಕಲರ್‌ನದ್ದಾಗಿದೆ. ಹಾಲ್ಟೆರ್‌ ನೆಕ್‌ ಹೊಂದಿದೆ. ಅಲ್ಲದೇ ಎದ್ದು ಕಾಣುವಂತಹ ಎಂಬೋಸಿಂಗ್‌ ತ್ರಿಡಿ ಫ್ಲವರ್ಸ್ ಡಿಸೈನ್‌ ಹೊಂದಿದೆ. ಮಿಂಟ್‌ ಗ್ರೀನ್‌ ಹಾಗೂ ಪಾಸ್ಟೆಲ್‌ ಪಿಂಕ್‌ ಶೇಡ್‌ ಮತ್ತು ಕ್ರೀಮ್‌ ಶೇಡ್‌ನ ಡಿಸೈನ್‌ ಈ ಉಡುಗೆಯ ಅಂದ ಹೆಚ್ಚಿಸಿದೆ. ರಫಲ್ಡ್ ಲೇಸ್‌ನ ಸೂಕ್ಷ್ಮ ಡಿಸೈನ್‌ ಉಡುಪನ್ನು ಮತ್ತಷ್ಟು ಆಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

3D floral mini dress

ಹೈ ಫ್ಯಾಷನ್‌ನಲ್ಲಿ ತ್ರಿಡಿ ಮಿನಿ ಡ್ರೆಸ್‌

ಅಂದಹಾಗೆ, ಈ ಡ್ರೆಸ್‌ ಏನೂ ಸಾಮಾನ್ಯದ್ದಲ್ಲ! ಸೆಲೆಬ್ರೆಟಿಗಳು ಧರಿಸುವಂತಹ ಡ್ರೆಸ್‌ ಎನ್ನಬಹುದು. ದುಬಾರಿ ಕೂಡ. ಸಾಹಿಲ್‌ ಕೊಚ್ಚಾರ್‌ ಹಾಗೂ ತಾಲಿಯಂತಹ ಡಿಸೈನರ್‌ಗಳ ದೊಡ್ಡ ದೊಡ್ಡ ಬ್ರ್ಯಾಂಡ್‌ನಲ್ಲಿ ಲಭ್ಯ. ಹಾಗಾಗಿ ಈ ಉಡುಗೆ ಹೈ ಫ್ಯಾಷನ್‌ ಸಮ್ಮರ್‌ ಔಟ್‌ಫಿಟ್‌ ಕೆಟಗರಿಗೆ ಸೇರಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

New Fashion

Summer Fashion 2026: ಸಮ್ಮರ್‌ನಲ್ಲಿ ಸ್ಕಿನ್ ಟೈಟ್ ಫ್ಯಾಷನ್‌ಗೆ ನೋ ಹೇಳಿ!

ಸೆಲೆಬ್ರೆಟಿಗಳ ಫೇವರೇಟ್‌ ಡ್ರೆಸ್‌

ಈ ಡ್ರೆಸ್‌ ಧರಿಸುವವರಲ್ಲಿ ಕೇವಲ ವಾಣಿ ಕಪೂರ್‌ ಮೊದಲಿಗರಲ್ಲ! ಬದಲಿಗೆ ಈಗಾಗಲೇ ಮಲೈಕಾ, ತಮನ್ನಾ ಬಾಟಿಯಾ, ಅನನ್ಯಾ ಸೇರಿ ಸಾಕಷ್ಟು ಸೆಲೆಬ್ರೆಟಿಗಳು ಧರಿಸಿ, ಟ್ರೆಂಡ್‌ ಸೆಟ್‌ ಮಾಡಿಯಾಗಿದೆ. ಆದರೂ ಮತ್ತೆ ಮತ್ತೇ ಸೆಲೆಬ್ರೆಟಿಗಳು ಮಾತ್ರ ಈ ಔಟ್‌ಫಿಟ್‌ನತ್ತ ವಾಲುತ್ತಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)