| ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೈಬ್ರೆಂಟ್ ಯೆಲ್ಲೋ ಸೀರೆಯಲ್ಲಿ (Star Saree Fashion 2025) ಮೈನೆ ಪ್ಯಾರ್ ಕಿಯಾ ಖ್ಯಾತಿಯ ನಟಿ ಭಾಗ್ಯಶ್ರೀ ಮಿನುಗಿದ್ದಾರೆ. ಹೌದು, ಈಗಾಗಲೇ ವಯಸ್ಸು 50 ದಾಟಿದ್ದರೂ, ಯಂಗ್ ಆಗಿ ಕಾಣಿಸುವ, ನಟಿ ಭಾಗ್ಯ ಶ್ರೀಯವರ (Bollywood Actress BhagyaShree) ಪ್ರತಿ ಸ್ಟೈಲಿಂಗ್ ಐಡಿಯಾಗಳು, ಇತ್ತೀಚೆಗೆ ಮಧ್ಯ ವಯಸ್ಕ ಮಹಿಳೆಯರಿಗೆ ಮಾದರಿಯಾಗಿವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ವೈಬ್ರೆಂಟ್ ಹಳದಿ ಟಿಶ್ಯೂ ಸೀರೆ
ಅಂದಹಾಗೆ, ಭಾಗ್ಯಶ್ರೀಯವರು ಧರಿಸಿರುವ ಈ ವೈಬ್ರೆಂಟ್ ಹಳದಿ ಸೀರೆ ಟಿಶ್ಯೂ ಸಿಲ್ಕ್ ಸೀರೆಯಾಗಿದೆ. ನೋಡಲು ಅರ್ಗಾನ್ಜಾದಂತೆಯೇ ಕಾಣಿಸುತ್ತಿದೆ. ಬಾರ್ಡರ್ ಹಾಗೂ ಬ್ಲೌಸ್ ಮೇಲೆ ಗೋಲ್ಡನ್ ಮಿರರ್ ವರ್ಕ್‌ನಂತೆಯೇ ಕಾಣಿಸುವ ಪ್ರಿಂಟ್ ವಿನ್ಯಾಸ ಹೊಂದಿದೆ. ಇದು ಇಡೀ ಸೀರೆಯನ್ನು ಹೈಲೈಟ್ ಮಾಡಿದೆ. ಅಲ್ಲದೇ ಈ ಸೀರೆಯ ವೈಬ್ರೆಂಟ್ ಕಲರ್ ಅವರಿಗೆ ಯಂಗ್ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಎಲಿಗೆಂಟ್ ಮೇಕೋವರ್
ಇನ್ನು, ಭಾಗ್ಯ ಶ್ರೀಯವರ ಸಿಂಪಲ್ ಫ್ರೀ ಹೇರ್‌ಸ್ಟೈಲ್, ಮೇಕಪ್ ಹಾಗೂ ಕುಂದನ್ ಜ್ಯುವೆಲರಿ ಸೆಟ್ ಅವರ ಈ ಲುಕ್‌ಗೆ ಎಲಿಗೆಂಟ್ ಲುಕ್ ನೀಡಿದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಯಂಗ್ ಲುಕ್ ಸೀಕ್ರೇಟ್
ಯಂಗ್ ಲುಕ್ ನೀಡುವ ಕಲರ್ಸ್ ಹೊಂದಿರುವ ಔಟ್‌ಫಿಟ್ಸ್ ಹಾಗೂ ಸೀರೆಗಳು ನಮ್ಮನ್ನು ಯಂಗ್ ಆಗಿ ಬಿಂಬಿಸುತ್ತವೆ. ಜತೆಗೆ ನಮ್ಮ ಸಕಾರಾತ್ಮಕ ಯೋಚನೆ, ಕೆಲಸ ಹಾಗೂ ಆರೋಗ್ಯಕರ ಡೈಲಿ ರುಟೀನ್‌ಗಳು ನಮ್ಮನ್ನು ಮತ್ತಷ್ಟು ಸುಂದರವಾಗಿ ತೋರ್ಪಡಿಸುತ್ತವೆ. ಇದೇ ನನ್ನ ಬ್ಯೂಟಿ ಮತ್ತು ಸ್ಟೈಲಿಂಗ್ ಸೀಕ್ರೇಟ್ ಎಂದು ಹೇಳಿಕೊಂಡಿದ್ದಾರೆ ಭಾಗ್ಯಶ್ರೀ.
ಫ್ಯಾಷನ್ ಶೂಟ್‌ಗಳಲ್ಲಿ ಸಕ್ರಿಯರಾಗಿರುವ ಭಾಗ್ಯಶ್ರೀ
ಮೈನೆ ಪ್ಯಾರ್ ಕಿಯಾ ನಂತರ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿ, ಮದುವೆಯಾಗಿ, ಮಕ್ಕಳಾದ ನಂತರ ಬ್ರೇಕ್ ತೆಗೆದುಕೊಂಡಿದ್ದ ಭಾಗ್ಯಶ್ರೀ, ಒಂದೆರೆಡು ವರ್ಷಗಳ ಹಿಂದೆ ರಿಯಾಲಿಟಿ ಶೋಗಳ ಮೂಲಕ ಕಮ್ ಬ್ಯಾಕ್ ಮಾಡಿದರು. ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಶೂಟ್‌ಗಳ ಮೂಲಕ ಸಕ್ರಿಯರಾಗಿದ್ದಾರೆ.
Winter Fashion 2025: ಲೆದರ್ ಜಾಕೆಟ್ ಧರಿಸುವವರಿಗೆ ಇಲ್ಲಿವೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್