ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ತಾಯಿಯ ಹಳೆಯ ರೇಷ್ಮೆ ಸೀರೆಯುಟ್ಟು ಸಂಭ್ರಮಿಸಿದ ಆರಾಧನಾ

Actress Aradhana Saree Look: ತನ್ನಮ್ಮ ಮಾಲಾ ಶ್ರೀಯವರ ಹಳೆಯ ರೇಷ್ಮೆ ಸೀರೆಯನ್ನು ನಟಿ ಆರಾಧನಾ ಉಟ್ಟು ಸಂಭ್ರಮಿಸಿದ್ದಾರೆ. ತನ್ನಮ್ಮನ ಹಳೆಯ ರೇಷ್ಮೆ ಸೀರೆಯಲ್ಲಿ ನಟಿ ಆರಾಧನಾ ಟ್ರೆಡಿಷನಲ್‌ ಆಗಿ ಕಾಣಿಸಿಕೊಂಡಿದ್ದು, ನಮ್ಮಮ್ಮನ ಸೀರೆಯೆಂದು ಕ್ಯಾಪ್ಷನ್‌ ಕೊಟ್ಟು ಸಂತಸಪಟ್ಟಿದ್ದಾರೆ.

ರೇಷ್ಮೆ ಸೀರೆಯಲ್ಲಿ ಸ್ಯಾಂಡಲ್‌ವುಡ್‌ ನಟಿ ಆರಾಧನಾ

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ಆರಾಧನಾ (Sandalwood Actress Aradhana) ತನ್ನಮ್ಮನ ಹಳೆಯ ರೇಷ್ಮೆ ಸೀರೆಯುಟ್ಟು ಸಂಭ್ರಮಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಸೂಪರ್‌ ಸ್ಟಾರ್‌ ಆಗಿ ಮೆರೆದಿದ್ದ ಮಾಲಾ ಶ್ರೀಯವರ ಮಗಳಾದ ಆರಾಧನ ತನ್ನಮ್ಮನ ಹಳೆಯ ರೇಷ್ಮೆ ಸೀರೆಯಲ್ಲಿ (Star Saree Fashion 2025) ಟ್ರೆಡಿಷನಲ್‌ ಆಗಿ ಕಾಣಿಸಿಕೊಂಡಿದ್ದು, ನಮ್ಮಮ್ಮನ ಸೀರೆಯೆಂದು ಕ್ಯಾಪ್ಷನ್‌ ಕೊಟ್ಟು ಸಂತಸಪಟ್ಟಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಆರಾಧನಾ ಸೀರೆ ಲವ್‌

ಈಗಾಗಲೇ ನಟಿ ಆರಾಧನಾ ಸಾಕಷ್ಟು ಬಾರಿ ಸೀರೆಯುಟ್ಟು ಫೋಟೋಶೂಟ್‌ ಮಾಡಿಸಿದ್ದಾರೆ. ಸೀರೆಗಳಲ್ಲಿ ಸಖತ್‌ ಆಗಿಯೂ ಕಾಣಿಸಿಕೊಂಡಿದ್ದಾರೆ. ಅಷ್ಟೇಕೆ! ಪಾರ್ಟಿವೇರ್‌ ಸೀರೆಗಳಲ್ಲಿ ಗ್ಲಾಮರಸ್‌ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಇದೀಗ ತನ್ನ ತಾಯಿಯ ಹಳೆಯ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡು, ಫ್ಯಾಷನ್‌ ಶೂಟ್‌ನಲ್ಲಿ ನಾನಾ ಪೋಸ್‌ ನೀಡಿದ್ದಾರೆ. ಥೇಟ್‌ ಕನ್ನಡತಿಯಂತೆ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Actress Aradhana

ಮಾಲಾ ಶ್ರೀಯ ರೇಷ್ಮೆ ಸೀರೆ

ಈ ಫೋಟೋಗಳಲ್ಲಿ ಮಾಲಾಶ್ರೀಯವರ ಸೀರೆ ಉಟ್ಟಿರುವ ಆರಾಧನಾ ಥೇಟ್‌ ಅಮ್ಮ ಯುವತಿಯಾಗಿದ್ದಾಗ ಕಾಣಿಸುತ್ತಿದ್ದ ಹಾಗೆಯೇ ಕಾಣಿಸುತ್ತಿದ್ದಾರೆ. ಶೈನಿಂಗ್‌ ಸ್ಕೈ ಬ್ಲ್ಯೂ ರೇಷ್ಮೆ ಸೀರೆ ಇದಾಗಿದ್ದು, ಚಿಕ್ಕ ಗೋಲ್ಡನ್‌ ಬಾರ್ಡರ್‌ ಹೊಂದಿದೆ.

ಸೀರೆಯ ಒಡಲ ತುಂಬೆಲ್ಲಾ ಅಲ್ಲಲ್ಲಿ ಗೋಲ್ಡನ್‌ ಬೂಟಾ ಡಿಸೈನ್‌ ಹೊಂದಿದೆ. ನೋಡಲು ಕಂಪ್ಲೀಟ್‌ ಟ್ರೆಡಿಷನಲ್‌ ಆಗಿದೆ. ಇದು ಆರಾಧನಾ ಅವರ ಸೌಂದರ್ಯವನ್ನು ಹೆಚ್ಚಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

ವಿಂಟರ್‌ ಲುಕ್‌ಗಾಗಿ ಕಾಶ್ಮೀರಿ ಶಾಲನ್ನು ಹೊದ್ದುಕೊಂಡ ವಿಜಯ್‌ ವರ್ಮಾ

Old Silk Saree

ಆರಾಧನಾ ಮೇಕೋವರ್‌ ‌

ಇನ್ನು, ಆರಾಧನಾ ಅವರ ಈ ಟ್ರೆಡಿಷನಲ್‌ ಸೀರೆಗೆ ಅವರು ಧರಿಸಿರುವ ಬಳೆಗಳು, ನೆಕ್ಲೇಸ್‌ ಕೈ ಉಂಗುರ ಎಲ್ಲವೂ ಪರ್ಫೆಕ್ಟ್ ಆಗಿ ಮ್ಯಾಚ್‌ ಆಗಿವೆ. ಟ್ರೆಡಿಷನಲ್‌ ಆಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

ಶೀಲಾ ಸಿ ಶೆಟ್ಟಿ

View all posts by this author