Star Fashion 2025: ವಿಂಟರ್ ಲುಕ್ಗಾಗಿ ಕಾಶ್ಮೀರಿ ಶಾಲನ್ನು ಹೊದ್ದುಕೊಂಡ ವಿಜಯ್ ವರ್ಮಾ
Winter Ethnic Fashion: ವಿಂಟರ್ ಎಥ್ನಿಕ್ ಫ್ಯಾಷನ್ಗೆ ಸಾಥ್ ನೀಡುವ ಕಾಶ್ಮೀರಿ ಶಾಲನ್ನು ಹೊದ್ದುಕೊಂಡು ಪೋಸ್ ನೀಡಿರುವ ಬಾಲಿವುಡ್ ನಟ ವಿಜಯ್ ವರ್ಮಾ ಟ್ರೆಡಿಷನಲ್ ಲುಕ್ನಲ್ಲೂ ಯುವಕರು ಸ್ಮಾರ್ಟ್ ಆಗಿ ಕಾಣಿಸಬಹುದೆಂಬುದನ್ನು ತೋರಿಸಿದ್ದಾರೆ. ಅವರ ಈ ಲುಕ್ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಬಾಲಿವುಡ್ ನಟ ವಿಜಯ್ ವರ್ಮಾ (ಚಿತ್ರಗಳು: ಕುನಾಲ್ ಬೋಸ್) -
ವಿಂಟರ್ನಲ್ಲಿ ಯುವಕರು ಶಾಲನ್ನು ಹೊದ್ದುಕೊಂಡು ಕೂಡ ಹ್ಯಾಂಡ್ಸಮ್ ಆಗಿ ಕಾಣಿಸಬಹುದು ಎಂಬುದನ್ನು ಬಾಲಿವುಡ್ ನಟ ವಿಜಯ್ ವರ್ಮಾ ತೋರಿಸಿಕೊಟ್ಟಿದ್ದಾರೆ. ಹೌದು, ವಿಂಟರ್ ಸೀಸನ್ನ ಎಥ್ನಿಕ್ ಫ್ಯಾಷನ್ನಲ್ಲಿ ಬೆಚ್ಚಗಿಡುವ ಟ್ರೆಡಿಷನಲ್ ಶಾಲನ್ನು ಹೊದ್ದುಕೊಂಡು, ಅತ್ಯಾಕರ್ಷಕವಾಗಿ ಕಾಣಿಸಬಹುದು. ದೇಸಿ ಲುಕ್ನಲ್ಲಿ ಆಕರ್ಷಕವಾಗಿ ಕಾಣಿಸಬಹುದು ಎಂಬುದನ್ನು ತಮ್ಮ ಇತ್ತೀಚಿನ ಎಥ್ನಿಕ್ ಲುಕ್ನ ಫ್ಯಾಷನ್ ಫೋಟೋಶೂಟ್ನಲ್ಲಿ ಪ್ರೂವ್ ಮಾಡಿದ್ದಾರೆ.
ವಿಜಯ್ ವರ್ಮಾ ಫ್ಯಾಷನ್ ಸ್ಟೇಟ್ಮೆಂಟ್ಸ್
ಅಂದಹಾಗೆ, ವಿಜಯ್ ವರ್ಮಾ ಸಖತ್ ಫ್ಯಾಷೆನಬಲ್ ನಟ. ಸದಾ ತಮ್ಮ ಒಂದೊಂದು ಲುಕ್ಸ್ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಒಬ್ಬ ನಟ ಹೇಗೆಲ್ಲಾ ಫ್ಯಾಷನ್ ರೂಲ್ಸ್ ಬ್ರೇಕ್ ಮಾಡಬಹುದು, ಫಾಲೋ ಮಾಡಬಹುದು ಎಂಬುದನ್ನು ಸಾಕಷ್ಟು ಬಾರಿ ತಮ್ಮ ವಿವಿಧ ಫ್ಯಾಷನ್ ಸ್ಟೇಟ್ಮೆಂಟ್ಗಳ ಮೂಲಕ ತೋರಿಸಿದ್ದಾರೆ.
ವಿಜಯ್ ವರ್ಮಾರ ಕಾಶ್ಮೀರಿ ಶಾಲು
ಅಂದಹಾಗೆ, ಈ ಫೋಟೋಗಳಲ್ಲಿ ವಿಜಯ್ ವರ್ಮಾ, ಸೆಲೆಬ್ರೆಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಡಿಸೈನರ್ ಪೈಜಾಮಾ ಹಾಗೂ ಕುರ್ತಾವನ್ನು ಧರಿಸಿದ್ದಾರೆ. ಈ ಸಾದಾ ವೈಟ್ ಕುರ್ತಾಗೆ ಅತ್ಯಾಕರ್ಷಕ ಲುಕ್ ನೀಡಲು ದೇಸಿ ಲುಕ್ ನೀಡುವ ಕಾಶ್ಮೀರಿ ಶಾಲನ್ನು ಹೊದ್ದುಕೊಂಡಿದ್ದಾರೆ. ಇದು ಟ್ರೆಡಿಷನಲ್ ಲುಕ್ ನೀಡುವುದರೊಂದಿಗೆ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ದೇಸಿ ಲುಕ್ಗೆ ವರ್ಮಾ ಸಾಥ್
ನಟರು ಶಾಲಿನಂತಹ ದೇಸಿ ಲುಕ್ ನೀಡುವ ಪ್ರಾಡಕ್ಟ್ಗಳನ್ನು ಪ್ರಮೋಟ್ ಮಾಡುವುದರಿಂದ ಸ್ಥಳೀಯ ಆರ್ಟಿಸಾನ್ಗಳಿಗೆ ಸಹಾಯವಾಗುತ್ತದೆ ಹಾಗೂ ಅವರ ಬೆಳವಣಿಗೆಗೆ ಕಾರಣವಾಗುತ್ತದೆ. ಅಲ್ಲದೇ, ಯುವಕರು ಕೂಡ ಇಂತಹ ಫ್ಯಾಷನ್ ಸ್ಟೇಟ್ಮೆಂಟ್ಗಳನ್ನು ಫಾಲೋ ಮಾಡುತ್ತಾರೆ. ಇದು ಪ್ರಶಂಸನೀಯ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.
ವಿಂಟರ್ ಎಥ್ನಿಕ್ ಫ್ಯಾಷನ್ಗೆ ಸಾಥ್ ನೀಡುವ ಕಾಶ್ಮೀರಿ ಶಾಲನ್ನು ಹೊದ್ದುಕೊಂಡು ಪೋಸ್ ನೀಡಿರುವ ಬಾಲಿವುಡ್ ನಟ ವಿಜಯ್ ವರ್ಮಾ ಟ್ರೆಡಿಷನಲ್ ಲುಕ್ನಲ್ಲೂ ಯುವಕರು ಸ್ಮಾರ್ಟ್ ಆಗಿ ಕಾಣಿಸಬಹುದೆಂಬುದನ್ನು ತೋರಿಸಿದ್ದಾರೆ.