-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಡೈಸಿ ಬೊಪಣ್ಣ ಉಟ್ಟಿರುವ ಸಮ್ಮರ್ ಸೀಸನ್‌ನ ಓಷನ್ ಬ್ಲ್ಯೂ ಶೀರ್ ಸೀರೆ ಇದೀಗ ಟ್ರೆಂಡಿಯಾಗಿದೆ. ಹೌದು, ಇವೆಂಟ್‌ವೊಂದಕ್ಕೆ ಡೈಸಿ ಉಟ್ಟಿದ್ದ, ಅತ್ಯಾಕರ್ಷಕ ಓಷನ್ ಬ್ಲ್ಯೂ ಶೇಡ್‌ನ ಪಾರದರ್ಶಕ ಅಂದರೇ ಡಿಸೈನರ್ ಶೀರ್ ಸೀರೆ ಫ್ಯಾಷನ್ ಫಾಲೋವರ್‌ಗಳ ಮನ ಗೆದ್ದಿದೆ. ಸದ್ಯ ಸೀರೆಲೋಕದಲ್ಲಿ (Star Saree Fashion) ಈ ಸೀರೆಯ ರಿಪ್ಲಿಕಾಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಡಲಾರಂಭಿಸಿವೆ. ಸಮ್ಮರ್‌ನಲ್ಲಿ ಅತಿ ಹೆಚ್ಚಾಗಿ ಟ್ರೆಂಡಿಯಾಗುವ ಸೀರೆಯಿದು. ಫ್ಯಾಬ್ರಿಕ್ ನೆಟ್ಟೆಡ್‌ದ್ದಾಗಿರಬಹುದು, ಆರ್ಗಾನ್ಜಾ ಇಲ್ಲವೇ ಜಾರ್ಜೆಟ್‌ನದ್ದಾಗಬಹುದು. ಒಟ್ಟಿನಲ್ಲಿ, ತೆಳುವಾಗಿರುವ ಪಾರದರ್ಶಕವಾಗಿರುವ ಸೀರೆಗಳನ್ನು ಶೀರ್ ಸೀರೆ ಎನ್ನಲಾಗುತ್ತದೆ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್.

ಶೀರ್ ಸೀರೆಗಳ ವಿಶೇಷತೆ
ಅಂದಹಾಗೆ, ಶೀರ್ ಸೀರೆಗಳು ಸೊಳ್ಳೆ ಪರದೆಯಂತಿರುತ್ತವೆ. ಅತಿ ಸೂಕ್ಷ್ಮವಾದ ನಾನಾ ಬಗೆಯ ಡಿಸೈನ್ ಹೊಂದಿರುತ್ತವೆ. ಗಾಳಿಯಾಡುತ್ತವೆ. ಹಾಗಾಗಿ ಇವು ಪ್ರತಿ ಸಮ್ಮರ್‌ನಲ್ಲಿ ಟ್ರೆಂಡಿಯಾಗುತ್ತವೆ. ಲೆಕ್ಕವಿಲ್ಲದಷ್ಟು ಬಗೆಯ ವಿನ್ಯಾಸದಲ್ಲಿ ಆಗಮಿಸುತ್ತವೆ. ದುಬಾರಿ ಕೂಡ. ಕೆಲವು ಬುಟ್ಟಾ ಡಿಸೈನ್ ಹೊಂದಿದ್ದರೆ, ಕೆಲವು ಪ್ಯಾಚ್ ವರ್ಕ್, ಫ್ಲೋರಲ್ ಡಿಸೈನ್ ಎಂಬ್ರಾಯ್ಡರಿ ಸೇರಿದಂತೆ ನಾನಾ ವಿನ್ಯಾಸ ಒಳಗೊಂಡಿರುತ್ತವೆ. ಆಯಾ ಶೀರ್ ಸೀರೆಯ ಡಿಸೈನ್‌ಗೆ ತಕ್ಕಂತೆ ಬೆಲೆ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್ಸ್.

ಶೀರ್ ಸೀರೆ ಆಯ್ಕೆ ಹೇಗೆ?
ಈ ಸೀರೆಗಳು ಯಂಗ್ ಲುಕ್ ನೀಡುತ್ತವೆ ನಿಜ. ಆದರೆ, ಅವನ್ನು ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬೇಕು. ಯಾಕೆಂದರೆ ಅವು ದೇಹವನ್ನು ಪ್ರದರ್ಶಿಸುತ್ತವೆ. ಹಾಗಾಗಿ ಬಾಡಿ ಫಿಟ್ ಆಗಿರುವವರು ಆಯ್ಕೆ ಮಾಡಿದರೇ ಉತ್ತಮ. ಇನ್ನು, ಪಾರ್ಟಿಗೆ ಆಯ್ಕೆ ಮಾಡುವಾಗ ಆದಷ್ಟೂ ಕತ್ತಲಲ್ಲೂ ಎದ್ದು ಕಾಣುವಂತಹ ಗೋಲ್ಡ್ ಡಿಸೈನ್ ಇರುವಂತವನ್ನು ಚೂಸ್ ಮಾಡಬೇಕು. ಲಂಚ್-ಬ್ರಂಚ್ ಪಾರ್ಟಿಗಳಿಗೆ ಪಾಸ್ಟೆಲ್ ಶೇಡ್‌ನವನ್ನು ಆಯ್ಕೆ ಮಾಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.
ಈ ಸುದ್ದಿಯನ್ನೂ ಓದಿ | Funky Jewel Fashion: ಗಾಳಿಯಲ್ಲಿ ಹಾರುವ ಬಣ್ಣ ಬಣ್ಣದ ಫೆದರ್ ಆಕ್ಸೆಸರೀಸ್
ಆಕರ್ಷಕ ಶೀರ್ ಸೀರೆ ಸ್ಟೈಲಿಂಗ್‌ಗೆ ಸಲಹೆಗಳು
- ಶೀರ್ ಸೀರೆ ಉಟ್ಟಾಗ ಆದಷ್ಟೂ ಹೆವ್ವಿ ಆಭರಣಗಳನ್ನು ಆವಾಯ್ಡ್ ಮಾಡಿ.
- ಮೊದಲು ಮೇಕಪ್ ಹಾಗೂ ಹೇರ್ ಸ್ಟೈಲಿಂಗ್ ಆದ ನಂತರ ಸೀರೆ ಉಡಿ.
- ಮೇಕಪ್ ಆದಷ್ಟೂ ಸೀರೆಯ ಬಣ್ಣಕ್ಕೆ ಹೊಂದುವಂತಿರಲಿ. ತಿಳಿಯಾಗಿರಲಿ.
- ಪಾಸ್ಟೆಲ್ ಶೇಡ್ ಸೀರೆ ಎಲಿಗೆಂಟ್ ಲುಕ್ ನೀಡುತ್ತದೆ.
- ಕಾಂಟ್ರಸ್ಟ್ ಬ್ಲೌಸ್ ಧರಿಸಿ ಡಿಫರೆಂಟ್ ಲುಕ್ ನೀಡಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)