Trends Footwear: ಟ್ರೆಂಡ್ಸ್ ಫುಟ್‌ವೇರ್ 'ಪವರ್ ಪ್ಲೇ' ಸ್ಪರ್ಧೆ; ವಿಜೇತರಿಗೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಜೋಡಿ ಟಿಕೆಟ್, ಗಿಫ್ಟ್ ವೋಚರ್!
Trends Footwear: ಟ್ರೆಂಡ್ಸ್ ಫುಟ್‌ವೇರ್‌ನಿಂದ ‘ಪವರ್ ಪ್ಲೇʼ ಎಂಬ ಸ್ಪರ್ಧೆಯನ್ನು ಪರಿಚಯಿಸುತ್ತಿದೆ. ಇದು ಸೀಮಿತವಾದ ಅವಧಿಯಾಗಿದ್ದು, ಇದರಲ್ಲಿ ಯಾವ ಗ್ರಾಹಕರು ಮೂರು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಖರೀದಿ ಮಾಡುತ್ತಾರೋ ಅಂಥವರು ಎಕ್ಸ್‌ಕ್ಲೂಸಿವ್ ಆಗಿ ಜೋಡಿ ಟಿಕೆಟ್‌ಗಳು ಮತ್ತು ಅತ್ಯಾಕರ್ಷಕವಾದ ಗಿಫ್ಟ್ ವೋಚರ್‌ಗಳನ್ನು ಗೆಲ್ಲುವ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಕ್ರಿಕೆಟ್ ಸೀಸನ್ ಬಂದಿದೆ ಮತ್ತು ಇದೀಗ ಟ್ರೆಂಡ್ಸ್ ಫುಟ್‌ವೇರ್‌ನಿಂದ (Trends Footwear) ಗ್ರಾಹಕರಿಗಾಗಿ ಆಟದ ಸಂಭ್ರಮವನ್ನು ಆನಂದಿಸಲು ರೋಮಾಂಚನವಾದ ಆಫರ್ ಅನ್ನು ತಂದಿದೆ. ‘ಪವರ್ ಪ್ಲೇ’ ಎಂಬ ಸ್ಪರ್ಧೆಯನ್ನು ಪರಿಚಯಿಸುತ್ತಿದೆ. ಇದು ಸೀಮಿತವಾದ ಅವಧಿಯಾಗಿದ್ದು, ಇದರಲ್ಲಿ ಯಾವ ಗ್ರಾಹಕರು ಮೂರು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಖರೀದಿ ಮಾಡುತ್ತಾರೋ ಅಂಥವರು ಎಕ್ಸ್‌ಕ್ಲೂಸಿವ್ ಆಗಿ ಜೋಡಿ ಟಿಕೆಟ್‌ಗಳು ಮತ್ತು ಅತ್ಯಾಕರ್ಷಕವಾದ ಗಿಫ್ಟ್ ವೋಚರ್‌ಗಳನ್ನು ಗೆಲ್ಲುವ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಈಗ ಎಂಟು ಪ್ರಮುಖ ನಗರಗಳಲ್ಲಿ - ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ, ಲಖನೌ, ಜೈಪುರ, ಅಹಮದಾಬಾದ್ ಮತ್ತು ಕೋಲ್ಕತ್ತಾದಲ್ಲಿ ಈ ಸ್ಪರ್ಧೆಯು ಚಲಾವಣೆಯಲ್ಲಿದೆ ಮತ್ತು ಟ್ರೆಂಡ್ಸ್ ಫುಟ್‌ವೇರ್ ಮಳಿಗೆಗಳಿಗೆ ಬರುವಂಥ ಎಲ್ಲ ಗ್ರಾಹಕರಿಗೆ ಮುಕ್ತವಾಗಿದೆ.
ಆಫರ್ ಹೇಗೆ ಕೆಲಸ ಮಾಡುತ್ತದೆ?
ಈ ಮೇಲಿನ ನಗರಗಳಲ್ಲಿ ಇರುವ ಯಾವುದೇ ಟ್ರೆಂಡ್ಸ್ ಫುಟ್‌ವೇರ್ ಮಳಿಗೆಯಲ್ಲಿ ಒಂದೇ ಬಿಲ್‌ನಲ್ಲಿ ₹3000 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿ ಮಾಡಿದಲ್ಲಿ ಲಕ್ಕಿ ಡ್ರಾದಲ್ಲಿ ಭಾಗವಹಿಸಲು ಗ್ರಾಹಕರು ಅರ್ಹರಾಗಿರುತ್ತಾರೆ. ಈ ಕ್ರಿಕೆಟ್ ಋತುವಿನ ಅತಿದೊಡ್ಡ ಪಂದ್ಯಗಳಿಗೆ ವಿಜೇತರು ಜೋಡಿ ಟಿಕೆಟ್‌ಗಳು ಮತ್ತು ಅವರ ನೆಚ್ಚಿನ ಪಾದರಕ್ಷೆಗಳ ಬ್ರ್ಯಾಂಡ್‌ನಿಂದ ಹೆಚ್ಚಿನದನ್ನು ಖರೀದಿ ಮಾಡುವುದಕ್ಕೆ ಆಕರ್ಷಕ ಉಡುಗೊರೆ ವೋಚರ್‌ಗಳನ್ನು ಪಡೆಯುತ್ತಾರೆ.
ಕ್ರಿಕೆಟ್ ಅಭಿಮಾನಿಯಾಗಿದ್ದರೂ ಫ್ಯಾಷನ್ ಉತ್ಸಾಹಿಯಾಗಿದ್ದರೂ ಅಥವಾ ಸರಳವಾಗಿ ಹೇಳಬೇಕೆಂದರೆ ಈ ಡೀಲ್ ಇಷ್ಟಪಡುವವರಾಗಿದ್ದರೂ ‘ಪವರ್ ಪ್ಲೇʼ ಸ್ಪರ್ಧೆಯು ಪಾದರಕ್ಷೆಗಳ ಖರೀದಿಯನ್ನು ಮರೆಯಲಾಗದ ಅನುಭವವನ್ನಾಗಿ ಪರಿವರ್ತಿಸುವ ಅವಕಾಶವನ್ನು ನೀಡುತ್ತದೆ.
ಈ ಸುದ್ದಿಯನ್ನೂ ಓದಿ | Dodda Alada Mara: ಬೆಂಗಳೂರಿನಲ್ಲಿದೆ ದೇಶದ 4ನೇ ದೊಡ್ಡ ಆಲದ ಮರ; ಪ್ರಕೃತಿಪ್ರಿಯರು ಭೇಟಿ ನೀಡಲೇಬೇಕಾದ ಜಾಗ ಇದು
ಈ ಅಭಿಯಾನದ ಕುರಿತು ಟ್ರೆಂಡ್ಸ್ ಫುಟ್‌ವೇರ್‌ನ ವಕ್ತಾರರು ಮಾತನಾಡಿ, ʼಈ ಕ್ರಿಕೆಟ್ ಋತುವಿನಲ್ಲಿ ನಮ್ಮ ಗ್ರಾಹಕರಿಗೆ ಖುಷಿಯ ಮತ್ತು ಪ್ರತಿಫಲ ದೊರಕುವಂಥದ್ದನ್ನು ಒದಗಿಸಲು ಬಯಸಿದ್ದೇವೆ. ಪವರ್ ಪ್ಲೇ ಸ್ಪರ್ಧೆಯು ಭಾರತದ ಕ್ರಿಕೆಟ್ ಮೇಲಿನ ಉತ್ಸಾಹವನ್ನು ಖರೀದಿಯ ಉತ್ಸಾಹದೊಂದಿಗೆ ಜತೆ ಮಾಡುತ್ತದೆ ಮತ್ತು ಇದುವರೆಗಿನ ಪ್ರತಿಕ್ರಿಯೆ ಅದ್ಭುತವಾಗಿದೆ. ಎಲ್ಲರೂ ಭಾಗವಹಿಸಿ ದೊಡ್ಡ ಗೆಲುವು ಸಾಧಿಸಲು ಆಹ್ವಾನಿಸುತ್ತೇವೆʼ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.