Ugadi Fashion 2026: ಹಬ್ಬದ ಮೆನ್ಸ್ ಎಥ್ನಿಕ್ ಇಮೇಜ್ಗೆ ಇಲ್ಲಿವೆ ಐಡಿಯಾ
ಯುಗಾದಿ ಹಬ್ಬಕ್ಕೆ ಯುವಕರು ಎಥ್ನಿಕ್ ಲುಕ್ನಲ್ಲಿ ಕಾಣಿಸಿಕೊಂಡಾಗ ಇಡೀ ಇಮೇಜ್ ಬದಲಾಗಬಲ್ಲದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಹೌದು, ಯುವಕರು ಎಥ್ನಿಕ್ ಉಡುಪು ಧರಿಸಿ ಹಬ್ಬದ ರಂಗನ್ನು ಹೆಚ್ಚಿಸಬಹುದು. ಜತೆಗೆ ಆಕರ್ಷಕವಾಗಿಯೂ ಕಾಣಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತಂತೆ ಒಂದಿಷ್ಟು ಐಡಿಯಾ ನೀಡಿದ್ದಾರೆ.
ಚಿತ್ರಗಳು: ವಿನಯ್ ಸಿಂಧ್ಯಾ, ಮಾಡೆಲ್, ನಟ -
ಯುಗಾದಿ ಹಬ್ಬಕ್ಕೆ ಯುವಕರು ಎಥ್ನಿಕ್ ಲುಕ್ನಲ್ಲಿ ಕಾಣಿಸಿಕೊಂಡಾಗ ಇಡೀ ಇಮೇಜ್ ಬದಲಾಗಬಲ್ಲದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಹೌದು, ಯುವಕರು ಎಥ್ನಿಕ್ ಉಡುಪು ಧರಿಸಿ ಹಬ್ಬದ ರಂಗನ್ನು ಹೆಚ್ಚಿಸಬಹುದು. ಜತೆಗೆ ಆಕರ್ಷಕವಾಗಿಯೂ ಕಾಣಿಸಬಹುದು. ಇದು ಇಂದಿನ ಜನರೇಷನ್ನ ಟ್ರೆಂಡಿ ಫ್ಯಾಷನ್ಎನ್ನುತ್ತಾರೆ ಅವರು.
ಟ್ರೆಡಿಷನಲ್ ಲುಕ್ಗಾಗಿ ಪಂಚೆ ಶಲ್ಯ
ಪುರುಷರು ಟ್ರೆಡಿಷನಲ್ ಲುಕ್ಗಾಗಿ ಪಂಚೆ ಶಲ್ಯ ಧರಿಸಬಹುದು. ಇದು ಪಕ್ಕಾ ಕನ್ನಡ ಹುಡುಗರಂತೆ ಬಿಂಬಿಸುತ್ತದೆ. ನೋಡಲು ಕೂಡ ಹಬ್ಬದ ಲುಕ್ ನೀಡುತ್ತದೆ.
ಶೆರ್ವಾನಿಯ ಡಿಫರೆಂಟ್ ವಿನ್ಯಾಸ
ಹುಡುಗರ ಲುಕ್ ಈ ಹಬ್ಬಕ್ಕೆ ಸಂಪೂರ್ಣ ಮ್ಯಾಚ್ ಆಗಬೇಕು. ಡಿಫರೆಂಟ್ ಸ್ಟೈಲ್ನಲ್ಲಿ ಕಾಣಿಸಬಹುದು. ಎಥ್ನಿಕ್ ಲುಕ್ ಜೆಂಟಲ್ಮೆನ್ ಲುಕ್ ನೀಡುತ್ತದೆ. ರೆಗ್ಯುಲರ್ ಸೈಝ್ನ ಶೆರ್ವಾನಿ ಜತೆಗೆ ಆಫ್ಬೀಟ್ ಕಲರ್ಗಳಾದ ರಾಯಲ್, ಲೈಟ್, ಎಲೆಕ್ಟ್ರಿಕ್ ಬ್ಲ್ಯೂ, ಬಾಟಲ್ ಗ್ರೀನ್, ಪೀಕಾಕ್ ಫೆದರ್ ವರ್ಣ ಹಬ್ಬದ ರಂಗನ್ನು ಹೆಚ್ಚಿಸಬಹುದು.
ಪ್ರಿಂಟೆಡ್ ಡಿಸೈನರ್ವೇರ್ಸ್
ಪ್ರಿಂಟೆಡ್ ಲೆನಿನ್ ಕಾಟನ್ ಜೂಟ್ ಫೈನರ್ ಎಥ್ನಿಕ್ ಸೂಟ್ ಇಲ್ಲವೇ ಕುರ್ತಾ ಕೂಡ ಸೂಟಾಗಬಲ್ಲದು. ಫೆಸ್ಟೀವ್ ಸೀಸನ್ನ ಹೈಲೈಟ್ಗಾಗಿ ಪ್ರಿಂಟ್ಸ್ ಹಾಗೂ ಹೆವ್ವಿ ಪ್ರಿಂಟೆಡ್ ಕಲರ್ಗಳನ್ನು ಪ್ರಾಯೋಗಿಕವಾಗಿ ಬಳಸಬಹುದು.
ಕುರ್ತಾಗೆ ಡಿಫರೆಂಟ್ ಲುಕ್
ಕುರ್ತಾಗೂ ಡಿಫರೆಂಟ್ ಲುಕ್ ನೀಡಬೇಕಾದಲ್ಲಿ, ರಿಚ್ ಶೇಡ್ಇರುವಂತಹ ಧೋತಿ ಪ್ಯಾಂಟ್ ಮ್ಯಾಚ್ ಮಾಡಬಹುದು. ಕುರ್ತಾಗಿಂತ ಧೋತಿ ಹೆಚ್ಚು ಹೈಲೈಟ್ ಮಾಡಲು ಮ್ಯಾಗ್ನೆಟಾ, ಪರ್ಪಲ್, ಗ್ರೀನ್ ಹಾಗೂ ಸಿಲ್ವರ್ ವರ್ಣಗಳನ್ನು ಚೂಸ್ ಮಾಡಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು.