- ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೇನ್ಸ್ ಡೇಗಾಗಿಯೇ ಫ್ಯಾಷನಿಸ್ಟಾಗಳು ಒಂದಿಷ್ಟು ಸ್ಟೈಲ್ ಸ್ಟೇಟ್‌ಮೆಂಟ್ (Valentines Day Fashion 2025) ಲಿಸ್ಟ್ ಬಿಡುಗಡೆ ಮಾಡಿದ್ದಾರೆ. ಹುಡುಗ-ಹುಡುಗಿಯರ ಲುಕ್ ಬಗ್ಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ. ಹುಡುಗಿಯರು ಈ ಬಾರಿ ಪಕ್ಕಾ ರೆಡ್ ಆಯ್ಕೆ ಮಾಡುವ ಬದಲು ಇತರ ಶೇಡ್ಸ್‌ನತ್ತ ಗಮನ ನೀಡಬೇಕು. ಕೊರಲ್, ಸ್ಕಾರ್ಲೆಟ್, ಮಾರ್ಸಲ್ ಹೀಗೆ ಲೈಟ್ ಹಾಗೂ ಡಾರ್ಕ್ ಶೇಡ್‌ಗಳನ್ನೊಳಗೊಂಡಂತೆ ಸಾಕಷ್ಟು ರೆಡ್‌ಗೆ ಸಮೀಪವಾಗಿರುವಂತೆ ಕಾಣಿಸುವ ಕಲರ್ಸ್‌ಗಳಿವೆ. ಇವುಗಳನ್ನು ಚೂಸ್ ಮಾಡಿ. ಔಟ್‌ಡೋರ್ ಇಲ್ಲವೇ ಹೊರಗೆ ಎಲ್ಲಾದರೂ ವ್ಯಾಲೆಂಟೇನ್ ಡೇ ಆಚರಿಸುವುದಾದರೆ ಆದಷ್ಟೂ ಡೇನಿಮ್ ಔಟ್‌ಫಿಟ್ಸ್ ಚೂಸ್ ಮಾಡಿ. ವೈಟ್ ಕಾಲರ್ ಶರ್ಟ್ ಫ್ರೆಶ್‌ಲುಕ್ ನೀಡಬಹುದು. ಫ್ರಿಂಜ್ ಪ್ಯಾಂಟ್ ಹಾಗೂ ಫಂಕಿ ಬೆಲ್ಟ್ ಮತ್ತಷ್ಟು ಯಂಗ್ ಲುಕ್ ನೀಡುತ್ತದೆ.

ಪಾರ್ಟಿ ಔಟ್‌ಫಿಟ್ಸ್
ಸ್ಲಿಟ್ ಇರುವಂತಹ ಫ್ಲೋರಲ್ ಮ್ಯಾಕ್ಸಿ ಡ್ರೆಸ್ ಜತೆಗೆ ಬೀಡ್ಸ್ ಇರುವ ನೆಕ್‌ಪೀಸ್, ಬ್ಲಾಕ್ ಹೀಲ್ಸ್ ಇಲ್ಲವೇ ಸ್ಟಿಲ್ಲೊಟ್ಸ್ ಧರಿಸಿದರೆ ಥೀಮ್‌ಗೆ ತಕ್ಕಂತೆ ಸೂಟ್ ಮಾಡಬಹುದು ಎನ್ನುತ್ತಾರೆ ಫ್ಯಾಷನಿಸ್ಟಾ ಜಾನ್. ಅವರ ಪ್ರಕಾರ, ಡಿಸ್ಕೊಥೆಕ್/ಪಬ್‌ಗೆ ಹೋಗುವ ಮಾಡರ್ನ್ ಹುಡುಗಿಯರಾದಲ್ಲಿ ಶಾರ್ಟ್ ಪ್ರಿಂಟೆಡ್ ಫಿಟ್ಟೆಡ್ ಡ್ರೆಸ್ ವಿತ್ ಚಂಕಿ ಇಯರಿಂಗ್ಸ್, ಪಾರ್ಟಿ ಮೋಡ್‌ಗೆ ಸೆಟ್ ಆಗುವಂತಹ ಬಿಗ್ ಬಕ್ಕಲ್ ಬೆಲ್ಟ್ ಧರಿಸಿ ಆಕರ್ಷಕವಾಗಿ ಕಾಣಬಹುದು.

ಹುಡುಗರೇ ದೇವ್‌ದಾಸ್ ಲುಕ್‌ಗೆ ಟಾಟಾ ಹೇಳಿ
ವ್ಯಾಲೆಂಟೇನ್ಸ್ ಡೇಯಂದು ಆಕರ್ಷಕವಾಗಿ ಕಾಣಿಸಿಕೊಳ್ಳಲು ಹುಡುಗರಿಗೆ ಈ ಬಾರಿ ಹೆಚ್ಚು ಅಪ್ಷನ್‌ಗಳಿವೆ. ಎಲ್ಲದಕ್ಕಿಂತ ಮೊದಲಿಗೆ ಹುಡುಗರು ಗಮನದಲ್ಲಿಟ್ಟುಕೊಳ್ಳಬೇಕಾದ ವಿಚಾರವೆಂದರೆ, ದೇವ್‌ದಾಸ್ ಇಲ್ಲವೇ ರಗ್ಡ್ ಲುಕ್‌ಗೆ ಇತಿಶ್ರೀ ಹಾಡುವುದು. ರಗ್ಡ್ ಲುಕ್ ಇದೀಗ ಫ್ಯಾಷನ್ ಟ್ರೆಂಡ್‌ನಿಂದ ಹೊರ ಬಿದ್ದಿದೆ. ಸ್ಟೈಲಿಸ್ಟ್ ರಾಶಿ ಹೇಳುವಂತೆ, ಹುಡುಗರೇ ನಿಮ್ಮ ಲುಕ್ ಬದಲಿಸಿಕೊಳ್ಳಿ. ನೋಡಲು ಫಂಕಿಯಾಗಿದ್ದರೂ ಪರವಾಗಿಲ್ಲ, ದೇವ್‌ದಾಸ್ ಲುಕ್‌ನಿಂದ ಆದಷ್ಟೂ ದೂರವಿರಿ.
ಈ ಸುದ್ದಿಯನ್ನೂ ಓದಿ | Valentine’s Season Kurta Fashion 2025: ವ್ಯಾಲೆಂಟೈನ್ಸ್ ವೀಕ್ ಸೀಸನ್‌ನಲ್ಲಿ ಟ್ರೆಂಡಿಯಾದ ಕುರ್ತಾಗಳಿವು

ಲವ್ಲಿ ಲುಕ್‌ಗಾಗಿ ಒಂದಿಷ್ಟು ಟಿಪ್ಸ್
* ಮ್ಯಾಚಿಂಗ್ ಮಾಡುವ ನೆಪದಲ್ಲಿಓವರ್ ಡ್ರೆಸ್ಸಿಂಗ್ ಬೇಡ.
* ಕಾಂಟ್ರಾಸ್ಟ್ ವರ್ಣಗಳ ಮ್ಯಾಚ್ ಮಾಡುವುದು ಸರಿ.
* ಸನ್ನಿವೇಶಕ್ಕೆ ತಕ್ಕಂತೆ ಡ್ರೆಸ್ ಸೆನ್ಸ್ ಇರಲಿ.
* ಕಂಫರ್ಟಬಲ್ ಆಗಿರುವುದು ಅತ್ಯಗತ್ಯ.
* ವ್ಯಾಲೆಂಟೇನ್ಸ್ ಡೇಯಂದು ಹುಡುಗ-ಹುಡುಗಿಯರು ಧರಿಸುವ ಡ್ರೆಸ್‌ಗಳು ನೋಡಲು ಮುಜುಗರ ಉಂಟು ಮಾಡಬಾರದು. ಬದಲಿಗೆ ವಾತಾವರಣವನ್ನು ಉಲ್ಲಾಸಮಯವನ್ನಾಗಿಸಬೇಕು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)