#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Valentine’s Season Kurta Fashion 2025: ವ್ಯಾಲೆಂಟೈನ್ಸ್ ವೀಕ್ ಸೀಸನ್‌ನಲ್ಲಿ ಟ್ರೆಂಡಿಯಾದ ಕುರ್ತಾಗಳಿವು

Valentine’s Season Kurta Fashion 2025: ಈ ಬಾರಿಯ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ನಾನಾ ಬಗೆಯ ಕುರ್ತಾಗಳು ಬಂದಿವೆ. ಟ್ರೆಂಡಿಯಾಗಿವೆ. ಲಾಂಗ್ ಲೆಂತ್, ಫುಲ್ ಸ್ಲೀವ್ಸ್, ತ್ರೀ ಫೋರ್ತ್, ಕಾಟನ್, ಕ್ರೇಪ್, ಸಾಲಿಡ್ ಪ್ಲೇನ್, ಸಿಂಥೆಟಿಕ್, ಪಾರ್ಟಿವೇರ್, ಹೈನೆಕ್ ಸೇರಿದಂತೆ ವಿವಿಧ ಬಗೆಯವು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಕುರಿತ ವಿವರ ಇಲ್ಲಿದೆ.

ವ್ಯಾಲೆಂಟೈನ್ಸ್ ವೀಕ್ ಸೀಸನ್‌ನಲ್ಲಿ ಟ್ರೆಂಡಿಯಾದ ಕುರ್ತಾಗಳಿವು

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವ್ಯಾಲೆಂಟೈನ್ಸ್ ವೀಕ್ ಸೀಸನ್‌ನಲ್ಲಿ ಡಿಸೆಂಟ್ ಲುಕ್ ನೀಡುವ ನಾನಾ ಬಗೆಯ ಕುರ್ತಾಗಳು (Valentines Season Kurta Fashion 2025) ಲಗ್ಗೆ ಇಟ್ಟಿವೆ. ಹೌದು. ಲಾಂಗ್ ಲೆಂತ್, ಫುಲ್ ಸ್ಲೀವ್ಸ್, ತ್ರೀ ಫೋರ್ತ್, ಕಾಟನ್, ಕ್ರೇಪ್, ಸಾಲಿಡ್ ಪ್ಲೇನ್, ಸಿಂಥೆಟಿಕ್, ಪಾರ್ಟಿವೇರ್, ಹೈನೆಕ್ ಸೇರಿದಂತೆ ನಾನಾ ಬಗೆಯವು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸಿಂಪಲ್ ಡಿಸೈನ್‌ನಿಂದಿಡಿದು, ದುಬಾರಿ ಬೆಲೆಯವು ಹಾಗೂ ಗ್ರಾಂಡ್ ಲುಕ್ ನೀಡುವಂತವು ಈ ಸೀಸನ್‌ನಲ್ಲಿ ದೊರೆಯುತ್ತಿವೆ. ಸ್ಟ್ರೈಪ್ಸ್, ಕ್ರಿಸ್ಕ್ರಾಸ್ ಪ್ರಿಂಟ್ಸ್, ಫ್ಲೋರಲ್, ಜೆಮೆಟ್ರಿಕಲ್ ಹೀಗೆ ನಾನಾ ಬಗೆಯ ಮಿಕ್ಸ್ ಮ್ಯಾಚ್ ಪ್ರಿಂಟ್ಸ್‌ನ ಕಾಟನ್ ಕುರ್ತಾಗಳು ಎಲ್ಲಾ ವಯಸ್ಸಿನವರನ್ನು ಸೆಳೆದಿವೆ.

11

ಸಿಂಪಲ್ ಹೈ ನೆಕ್ ಕುರ್ತಾ

ಕುತ್ತಿಗೆವರೆಗೂ ನೆಕ್‌ಲೈನ್ ಹೊಂದಿರುವ ಇವು ಡಿಸೆಂಟ್ ಲುಕ್ ನೀಡುತ್ತವೆ. ಬಹುತೇಕ ಕುರ್ತಾಗಳಿಗೆ ತ್ರೀಫೋರ್ತ್ ಸ್ಲೀವ್ಸ್ ಇರುತ್ತದೆ. ನೆಕ್ ಸುತ್ತಲೂ ಎಂಬ್ರಾಯ್ಡಡರಿ, ಥ್ರೆಡ್ ವರ್ಕ್, ಸ್ಟೋನ್ ವರ್ಕ್ ಇರುವಂತವು, ರಿಚ್ ಲುಕ್ ನೀಡುವಂತವು ಟ್ರೆಂಡಿಯಾಗಿವೆ.

ಸಾಲಿಡ್ ಪ್ಲೇನ್ ಕುರ್ತಾ

ರೆಡ್ ಶೇಡ್‌ನಲ್ಲೆ ನಾನಾ ಬಗೆಯ ಸಾಲಿಡ್ ಕಲರ್‌ನ ಕುರ್ತಾಗಳು ಹುಡುಗಿಯರಿಗೆ ಇಷ್ಟವಾಗುವಂತಹ ಸಿಂಪಲ್ ಪ್ಲೇನ್ ವಿನ್ಯಾಸದಲ್ಲಿ ಬಂದಿವೆ. ಇವು ತೀರಾ ಸಿಂಪಲ್ ಲುಕ್ ನೀಡುತ್ತವೆ.

12

ಸಿಂಥೆಟಿಕ್ ಸಾಫ್ಟ್ ಕುರ್ತಾಗಳು

ನಾನಾ ಪ್ರಿಂಟ್ಸ್‌ನಲ್ಲಿ ಇದೀಗ ಟ್ರೆಂಡಿಯಾಗಿರುವ ಇವು ಮಹಿಳೆಯರ ಫೇವರೇಟ್ ಲಿಸ್ಟ್‌ನಲ್ಲಿವೆ. ಸ್ಮಾಲ್ ಫ್ಲವರ್ಸ್, ನೇಚರ್ ಡಿಸೈನ್ಸ್, ಮ್ಯಾನ್ ಪಿಚ್ಕರ್ಸ್, ಮಿಕ್ಸ್ಡ್ ಕಲರ್ ಡಿಸೈನ್ವು ಕೂಡ ಚಾಲ್ತಿಯಲ್ಲಿವೆ. ಸ್ಲಿಮ್ ಲುಕ್ ಬಯಸುವವರಿಗೆ ಹೇಳಿ ಮಾಡಿಸಿದ ಕುರ್ತಾಗಳಿವು.

13

ಪಾರ್ಟಿವೇರ್ ಕುರ್ತಾ

ಶಿಮ್ಮರಿಂಗ್, ಸಿಕ್ವಿನ್ಸ್ ಸೇರಿದಂತೆ ಗ್ರ್ಯಾಂಡ್ ಲುಕ್ ನೀಡುವ ಗ್ಲಾಮರಸ್ ಕುರ್ತಾಗಳಿವು. ಇವನ್ನು ಯಾವುದೇ ಗ್ರ್ಯಾಂಡ್ ಪಾರ್ಟಿ ಹಾಗೂ ಸಮಾರಂಭಗಳಿಗೆ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.

ಈ ಸುದ್ದಿಯನ್ನೂ ಓದಿ | Valentines Day Nail Art 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ ನೇಲ್ ಆರ್ಟ್‌ಗಳಿವು!

ಕುರ್ತಾ ಪ್ರಿಯರಿಗೆ ಟಿಪ್ಸ್

  • ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಿ.
  • ಸ್ಲಿಮ್ ಆಗಲು ಕಾಣಿಸಲು ಬಯಸುವವರಿಗೆ ಸ್ಲಿಮ್ ಫಿಟ್ ಕುರ್ತಾ ಹೇಳಿ ಮಾಡಿಸಿದವು ಎನ್ನಬಹುದು.
  • ನೆಕ್‌ಲೈನ್‌ಗೆ ತಕ್ಕಂತೆ ಸ್ಟೈಲಿಂಗ್ ಮಾಡಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)