Valentine’s Day Saree Fashion 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಯುವತಿಯರನ್ನು ಸೆಳೆದ ವೈವಿಧ್ಯಮಯ ಸೀರೆಗಳಿವು!
Valentine’s Day Saree Fashion 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ನಾನಾ ಬಗೆಯ ಟ್ರೆಂಡಿ ಸೀರೆಗಳು ಯುವತಿಯರನ್ನು ಸೆಳೆದಿವೆ. ಈ ಬಾರಿ ಸಾದಾ ರೆಡ್ ಸೀರೆಗಳು ಮಾತ್ರವಲ್ಲ, ಡಿಸೈನರ್ ಸೀರೆಗಳು ಮಾನಿನಿಯರನ್ನು ಆಕರ್ಷಿಸತೊಡಗಿವೆ. ಯಾವ್ಯಾವ ಬಗೆಯವು ಹೆಚ್ಚು ಟ್ರೆಂಡಿಯಾಗಿವೆ? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಸೀರೆ ಸ್ಟೈಲಿಸ್ಟ್ ಚಶ್ಮಿ ವಿವರಿಸಿದ್ದಾರೆ.

ಚಿತ್ರಕೃಪೆ: ಮೈಸೂರ್ ಸ್ಯಾರಿ ಉದ್ಯೋಗ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಸೀರೆಗಳು (Valentine’s Day Saree Fashion 2025) ಕೂಡ ಮಾನಿನಿಯರನ್ನು ಸವಾರಿ ಮಾಡತೊಡಗಿವೆ. ಅವುಗಳಲ್ಲಿ ಸಾದಾ ರೆಡ್ ಸೀರೆಗಳು ಮಾತ್ರವಲ್ಲ, ವೈವಿಧ್ಯಮಯ ಡಿಸೈನರ್ ರೆಡ್ ಸೀರೆಗಳು ಸೇರಿವೆ. ಈ ಹಿನ್ನೆಲೆಯಲ್ಲಿ, ಈಗಾಗಲೇ, ಲೆಕ್ಕವಿಲ್ಲದಷ್ಟು ಶೈಲಿಯ ಕೆಂಪು ಕೆಂಪಾದ ಡಿಸೈನರ್ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಈ ಸೀಸನ್‌ನಲ್ಲಿ ಅತಿ ಹೆಚ್ಚು ಎಂದಿನಂತೆ ಟ್ರೆಂಡ್‌ನಲ್ಲಿರುವುದು ಸಾದಾ ಜಾರ್ಜೆಟ್ ಹಾಗೂ ಶಿಫಾನ್ ರೆಡ್ ಸೀರೆ. ಅವುಗಳನ್ನು ಹೊರತುಪಡಿಸಿದಲ್ಲಿ, ಕ್ರೇಪ್ ಡಿಸೈನರ್ ಸೀರೆ, ಸ್ಟೋನ್, ಮಿರರ್ ವರ್ಕ್, ಬ್ರಾಸೋ, ಕೆಂಪು ಜರಿ ಸಿಲ್ಕ್, ಸಾಫ್ಟ್ ನೆಟ್, ಸ್ಯಾಟಿನ್, ಜಾರ್ಜೆಟ್ ಸಿಕ್ವಿನ್ಸ್ ಸೇರಿದಂತೆ ನಾನಾ ಫ್ಯಾಬ್ರಿಕ್‌ನ ರೆಡ್ ಹಾಗೂ ಕೆಂಪು ಮಿಶ್ರಿತ ಪಿಂಕ್ ಅಥವಾ ಡಾರ್ಕ್ ವೈನ್, ಚಾಕೋಲೇಟ್ ಮಿಕ್ಸ್ ರೆಡ್, ರೆಡ್ ಹಾಟ್ ಕಲರ್‌ನ ಸೀರೆಗಳು ಕೂಡ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳಾದ ಚಶ್ಮಿ.

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಗಿಫ್ಟ್‌ಗಾಗಿ ಸೀರೆ ಖರೀದಿ
ಪ್ರೇಮಿಗಳು ಮಾತ್ರವಲ್ಲ, ಗಂಡ-ಹೆಂಡತಿ ಕೂಡ ಈ ವ್ಯಾಲೆಂಟೈನ್ಸ್ ವೀಕ್ ಆಚರಿಸುವುದರಿಂದ ಇತ್ತೀಚೆಗೆ ಸೀರೆಯನ್ನು ಗಿಫ್ಟ್ ನೀಡುವವರ ಸಂಖ್ಯೆ ಹೆಚ್ಚಾಗಿದ್ದು, ಪರಿಣಾಮ ಖರೀದಿ ಅಧಿಕಗೊಂಡಿದೆ ಎನ್ನುತ್ತಾರೆ ಸೀರೆ ಅಂಗಡಿಯೊಂದರ ಸೇಲ್ಸ್ ಮ್ಯಾನ್.

ಆನ್‌ಲೈನ್‌ನಲ್ಲಿ ಮಾರಾಟ ಹೆಚ್ಚಳ
ಇನ್ನು, ಮನೆ ಬಾಗಿಲಿಗೆ ತಲುಪಿಸುವ ಆನ್‌ಲೈನ್ ಶಾಪ್‌ಗಳಲ್ಲೂ, ರೆಡ್ ಡಿಸೈನರ್ ಸೀರೆಗಳ ಮಾರಾಟ ಹೆಚ್ಚಿದೆ ಎನ್ನುತ್ತಾರೆ ಸೀರೆ ಮಾರಾಟಗಾರರು.

ವ್ಯಾಲೆಂಟೈನ್ಸ್ ಡೇ ಸೀರೆ ಪ್ರಿಯರಿಗೆ ಟಿಪ್ಸ್
* ಟ್ರೆಂಡಿಯಾಗಿರುವ ರೆಡ್ ಸೀರೆಗಳಲ್ಲಿ ಇದೀಗ ಡಿಸೈನರ್ ಸೀರೆಗಳು ಚಾಲ್ತಿಯಲ್ಲಿವೆ.
* ಸಾದಾ ಸೀರೆಗಳು ಹುಡುಗಿಯರನ್ನು ಸೆಳೆದಿವೆ.
* ಕಾಂಟ್ರಾಸ್ಟ್ ಬ್ಲೌಸ್‌ನೊಂದಿಗೆ ಡಿಫರೆಂಟ್ ಡ್ರೇಪಿಂಗ್ ಮಾಡಿದಾಗ ನ್ಯೂ ಲುಕ್ ನೀಡುತ್ತವೆ.
* ಗ್ಲಾಮರಸ್ ಟಚ್ ನೀಡಲು ಹಾಲ್ಟರ್ ನೆಕ್, ಸ್ಲಿವ್ಲೆಸ್ ಬ್ಲೌಸ್, ಕೋಲ್ಡ್ ಶೋಲ್ಡರ್ ಬ್ಲೌಸ್‌ಗಳನ್ನು ಧರಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Valentine’s Day Fashion 2025: ಹೀಗಿರಲಿ ನಿಮ್ಮ ವ್ಯಾಲೆಂಟೇನ್ಸ್ ಡೇ ಫ್ಯಾಷನ್ ಸ್ಟೇಟ್‌ಮೆಂಟ್ಸ್