ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Virosh Fashion 2026: ರಶ್ಮಿಕಾ ಸೌಂದರ್ಯ ಹೆಚ್ಚಿಸಿದ ಮೈಸೂರು ಸಿಲ್ಕ್‌ ಸೀರೆ

Rashmika Mandanna: ರಶ್ಮಿಕಾ ಮಂದಣ್ಣ ತಮ್ಮ ರಿಸೆಪ್ಷನ್‌ನಲ್ಲಿ ಕೆಂಪು ಬಣ್ಣದ ಸಾದಾ ಡಿಸೈನರ್‌ ಮೈಸೂರು ಸಿಲ್ಕ್‌ ಸೀರೆಯಲ್ಲಿ ಮಿನುಗಿದ್ದಾರೆ. ಅವರು ಧರಿಸಿದ್ಧ ಸೀರೆಯ ವಿಶೇಷತೆಯೇನು? ಗಂಡ-ಭೇರುಂಡ ಡಿಸೈನ್‌ ಎಲ್ಲಿತ್ತು? ಹೇಗಿತ್ತು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಕೃಪೆ: weddingvows.in / thedazzlingbrides

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಮೈಸೂರು ಸಿಲ್ಕ್‌ ಸೀರೆಯಲ್ಲಿ ರಶ್ಮಿಕಾ ಮಂದಣ್ಣ (Virosh Fashion 2026) ಕಂಗೊಳಿಸಿದ್ದಾರೆ. ಹೌದು, ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ರಿಸೆಪ್ಷನ್‌ಗಾಗಿ ಕಸ್ಟಮೈಸ್ಡ್ ಸಿಂಪಲ್‌ ಡಿಸೈನರ್‌ ಮೈಸೂರು ಸಿಲ್ಕ್‌ ಸೀರೆಯನ್ನು ಆಯ್ಕೆ ಮಾಡಿ, ಉಟ್ಟಿರುವುದು ಸೀರೆ ಪ್ರಿಯರಿಗೆ ಸಂತಸ ಹೆಚ್ಚಿಸಿದೆ.

ರಶ್ಮಿಕಾ ಮಂದಣ್ಣ ಉಟ್ಟ ಮೈಸೂರು ಸಿಲ್ಕ್‌ ಸೀರೆ

ಅಂದಹಾಗೆ, ರಶ್ಮಿಕಾ ಮಂದಣ್ಣ ಉಟ್ಟಿರುವ ಮೈಸೂರು ಸಿಲ್ಕ್‌ ಸೀರೆಯನ್ನು ಮಾಧುರ್ಯಾ ಕ್ರಿಯೇಷನ್‌ ವೀವ್‌ ಮಾಡಿಸಿದೆ. ಈ ಸೀರೆಯನ್ನು ಮೋನಿಕಾ & ಕರೀಷ್ಮಾ ಅವರ ಜಡ್‌ ಬ್ರಾಂಡ್‌ (JADE) ಡಿಸೈನ್‌ಗೊಳಿಸಿದೆ.

Rashmika Mandanna

ರಶ್ಮಿಕಾ ಸೀರೆಯ ಸ್ಪೆಷಾಲಿಟಿ ಏನು?

ಕೆಂಪು ವರ್ಣದ ಈ ಮೈಸೂರ್‌ ಸಿಲ್ಕ್‌ ಸೀರೆ ತಕ್ಷಣಕ್ಕೆ ಸಾಮಾನ್ಯವಾಗಿ ಕಂಡರೂ ಸಾಕಷ್ಟು ಡಿಟೇಲಿಂಗ್‌ ಸೂಕ್ಷ್ಮ ವಿನ್ಯಾಸವನ್ನು ಒಳಗೊಂಡಿದೆ. ಕಪ್ಪು ವರ್ಣದ ಮಲ್ಟಿ ಲೈನ್ಸ್ ಬಾರ್ಡರ್‌ಗೆ ಎಕ್ಸ್ಟ್ರಾ ಮಿನುಗುವ ಡಿಸೈನರ್‌ ಬಾರ್ಡರ್ ಅಳವಡಿಸಲಾಗಿದೆ.



ಬ್ಲೌಸ್‌ ಬ್ಯಾಕ್‌ಸೈಡ್‌ನಲ್ಲಿ ಗಂಡ- ಭೇರುಂಡ

ಸೀರೆಯ ಬ್ಲೌಸ್‌ ಹೈ ನೆಕ್‌ ಹೊಂದಿದ್ದು, ಸಿಂಪಲ್‌ ಗೋಲ್ಡನ್‌ ಲೈನಿಂಗ್‌ ಒಳಗೊಂಡಿದೆ. ಇಡೀ ಬ್ಲೌಸ್‌ ಸಿಂಪಲ್‌ ಆಗಿರಿಸಲಾಗಿದೆ. ಬ್ಲೌಸ್‌ನ ಹಿಂಭಾಗದಲ್ಲಿ ಕರ್ನಾಟಕದ ಪ್ರತಿಷ್ಠೆಯ ಸಂಕೇತವಾದ ಗಂಡ-ಭೇರುಂಡ ಸಿಂಬಲನ್ನು ಎಂಬ್ರಾಯ್ಡರಿಯಿಂದ ಸಿಂಗರಿಸಲಾಗಿದೆ. ಇನ್ನು, ಕೊಡವರ ಪ್ರತಿಷ್ಠೆಯ ಸಂಕೇತವಾದ ಕತ್ತಿಗಳನ್ನು ಸೂಕ್ಷ್ಮವಾಗಿ ಡಿಸೈನ್‌ ಮಾಡಲಾಗಿದೆ.



ಅತ್ಯಾಕರ್ಷಕ ಆಭರಣಗಳು

ಈ ಸೀರೆಯೊಂದಿಗೆ ರಶ್ಮಿಕಾ ಧರಿಸಿದ್ಧ ಆಭರಣಗಳು ಕೂಡ ಯೂನಿಕ್‌ ಡಿಸೈನ್‌ ಹೊಂದಿವೆ. ಬಳೆಗಳಲ್ಲಿ ಗಂಡ-ಭೇರುಂಡ ವಿನ್ಯಾಸ ಸೇರಿಸಲಾಗಿದೆ. ಲೇಯರ್‌ ಹಾರ, ಹಾಥ್‌ಫೂಲ್‌, ಹ್ಯಾಂಗಿಂಗ್ಸ್ ಎಲ್ಲವೂ ಅಮೂಲ್ಯವಾದ ವಿನ್ಯಾಸವನ್ನೊಳಗೊಂಡಿವೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

Virosh Wedding Fashion 2026: ರಾಯಲ್‌ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ದಾಖಲೆ ಬರೆದ ವಿರೋಶ್‌ ರಾಜ-ರಾಣಿ ಲುಕ್‌

Mysore silk saree

ಒಟ್ಟಾರೆ, ರಶ್ಮಿಕಾ ವೆಡ್ಡಿಂಗ್‌ ಫ್ಯಾಷನ್‌ವೇರ್ಸ್ ಹಾಗೂ ಜ್ಯುವೆಲರಿಗಳು ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡ್‌ ಹುಟ್ಟು ಹಾಕುವುದರೊಂದಿಗೆ ಫ್ಯಾಷನ್‌ ಪ್ರಿಯರಲ್ಲಿ ಸಂಚಲನವನ್ನು ಮೂಡಿಸಿವೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಶೀಲಾ ಸಿ ಶೆಟ್ಟಿ

View all posts by this author