ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wedding Nail Art Trend: ಶ್ರಾವಣದ ವೆಡ್ಡಿಂಗ್ ಸೀಸನ್‌ನಲ್ಲಿ ಹೆಚ್ಚಾಯ್ತು ನೇಲ್ ಆರ್ಟ್ ಕ್ರೇಝ್!

Wedding Nail Art Trend: ಕೇವಲ ಸೆಲೆಬ್ರೆಟಿಗಳಿಗೆ ಮಾತ್ರ ಸೀಮಿತವಾಗಿದ್ದ, ನೇಲ್ ಆರ್ಟ್ ಲವ್, ಇದೀಗ ವೆಡ್ಡಿಂಗ್ ಸೀಸನ್‌ನಲ್ಲಿ ಹೆಚ್ಚಾಗಿದೆ. ಮದುಮಗಳು ಮಾತ್ರವಲ್ಲ, ಮದುವೆಯಲ್ಲಿ ಭಾಗವಹಿಸುವವರೂ ಕೂಡ ನೇಲ್ ಆರ್ಟ್ ಮಾಡಿಸುವುದು ಅಧಿಕಗೊಂಡಿದೆ. ಈ ಬಗ್ಗೆ ಇಲ್ಲಿದೆ ವರದಿ.

ಚಿತ್ರಕೃಪೆ: ಪಿಕ್ಸೆಲ್
1/5

ವೆಡ್ಡಿಂಗ್ ಸೀಸನ್‌ನಲ್ಲಿ ಇದೀಗ ನೇಲ್ ಆರ್ಟ್ ಕ್ರೇಝ್ ಹೆಚ್ಚಿದೆ. ವೆಡ್ಡಿಂಗ್ ಸೀಸನ್‌ನಲ್ಲಿ ಕೇವಲ ಬ್ಯೂಟಿ ಪ್ಯಾಕೇಜ್, ಹೇರ್ ಕಲರಿಂಗ್, ಮೇಕ್ಓವರ್ ಹಾಗೂ ಇತರೇ ಬ್ಯೂಟಿ ಆರೈಕೆಗಳಿಗೆ ಸೀಮಿತವಾಗಿದ್ದ ಹೆಣ್ಣುಮಕ್ಕಳ ಕ್ರೇಝ್ ಇದೀಗ ನೇಲ್ ಆರ್ಟ್‌ನತ್ತ ವಾಲಿದೆ.

2/5

ಮದುಮಗಳ ಕೈಗಳನ್ನು ಅಲಂಕರಿಸುತ್ತಿರುವ ನೇಲ್ಆರ್ಟ್

ಮೊದಲೆಲ್ಲಾ ತಾರೆಯರು, ಮಾಡೆಲ್‌ಗಳು ಮಾತ್ರ ವೆಡ್ಡಿಂಗ್ ಸಮಯದಲ್ಲಿ ಬಗೆಬಗೆಯ ನೇಲ್ ಆರ್ಟ್ ಮಾಡಿಸಿಕೊಳ್ಳುತ್ತಿದ್ದರು. ಈಗ ಹಾಗಿಲ್ಲ, ಬಹುತೇಕ ಜೆನ್ ಝಿ ಹುಡುಗಿಯರು ನೇಲ್ ಆರ್ಟ್‌ನತ್ತ ವಾಲಿದ್ದಾರೆ. ಇನ್ನು ಮದುವೆ ಮನೆಯ ಯಾವುದೇ ಸಮಾರಂಭಗಳು ಹಾಗೂ ಕುಟುಂಬದ ಮದುವೆಗಳಿದ್ದಲ್ಲಿ ನೇಲ್ ಆರ್ಟ್ ಮಾಡಿಸಿಕೊಳ್ಳುವುದು ಕಾಮನ್ ಆಗಿ ಹೋಗಿದೆ.

3/5

ವೆಡ್ಡಿಂಗ್ ಸ್ಪೆಷಲ್ ನೇಲ್ ಡಿಸೈನ್ಸ್ ಬಿಡುಗಡೆ

ಬಹಳಷ್ಟು ಬ್ಯೂಟಿ ಪಾರ್ಲರ್‌ಗಳು ಕೂಡ ತರಬೇತಿ ಪಡೆದ ನೇಲ್ ಆರ್ಟ್ ಎಕ್ಸ್‌ಪರ್ಟ್‌ಗಳನ್ನು ವೆಡ್ಡಿಂಗ್ ನೇಲ್ ಆರ್ಟ್ ಮಾಡಿಸಲೆಂದೇ ಆರ್ಟಿಸ್ಟ್‌ಗಳನ್ನು ನೇಮಿಸಿಕೊಂಡಿದ್ದಾರೆ. ಸರ್ವೀಸ್ ಪ್ಯಾಕೇಜ್ ನೀಡುತ್ತಿದ್ದಾರೆ. ಇನ್ನು ಕೆಲವು ನೇಲ್ ಆರ್ಟ್ ಡಿಸೈನರ್‌ಗಳು ಮನೆಗೆ ಬಂದು ಮಾಡಿ ಹೋಗುತ್ತಾರೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.

4/5

ದುಬಾರಿಯಾದ ವೆಡ್ಡಿಂಗ್ ನೇಲ್ಆರ್ಟ್

ಅಂದ ಹಾಗೆ, ನೇಲ್ ಆರ್ಟ್ ದರ ಆಯಾ ವೆಡ್ಡಿಂಗ್ ಡಿಸೈನ್‌ಗಳ ಆಧಾರದ ಮೇಲೆ ನಿರ್ಧಾರವಾಗಿರುತ್ತದೆ. ಡಿಸೈನ್‌ಗೆ ತಕ್ಕಂತಿರುತ್ತದೆ. ಅದರಲ್ಲೂ ಈ ನೇಲ್ಆರ್ಟ್ ಮಾಡಲು ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ನೇಲ್ ಆರ್ಟ್ ತಜ್ಞರು ಎರಡು ಕೈಗಳಿಗೆ ನೇಲ್ ಆರ್ಟ್ ಮಾಡಲು ಕನಿಷ್ಠವೆಂದರೂ 2 ಗಂಟೆ ತೆಗೆದುಕೊಳ್ಳುತ್ತಾರೆ. ನೇಲ್ ಆರ್ಟ್‌ನಲ್ಲೂ ನಾನಾ ವಿಧಗಳಿವೆ. ಸ್ವರೋಸ್ಕಿ, ಆರ್ಟಿಸ್ಟಿಕ್, ಸಿಂಪಲ್, ಫಂಕಿ, ಸ್ಟಿಕ್ಕರ್, ಸ್ಟೆನ್ಸಿಲ್, ಏರ್‌ಬ್ರಶ್ ನೇಲ್ ಆರ್ಟ್‌ಗಳು ಸೇರಿದಂತೆ ಸಾಕಷ್ಟು ಬಗೆಯವು ಪಾಪುಲರ್ ಆಗಿವೆ. ಆದರೆ, ಇತರೇ ಬ್ಯೂಟಿ ಸರ್ವೀಸ್‌ಗಳಿಗಿಂತ ದುಬಾರಿ ಎಂಬುದನ್ನು ಮರೆಯಬಾರದು ಎನ್ನುತ್ತಾರೆ ನೇಲ್ ಆರ್ಟ್ ಎಕ್ಸ್‌ಪರ್ಟ್ ರಂಜಿನಿ.

5/5

ವೆಡ್ಡಿಂಗ್‌ನಲ್ಲಿ ನೇಲ್ ಆರ್ಟ್ ಮಾಡಿಸುವವರಿಗೆ ಒಂದಿಷ್ಟು ಸಲಹೆ

  • ನೇಲ್ ಆರ್ಟ್ ಡಿಸೈನ್‌ಗೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ.
  • ನೇಲ್ ಆರ್ಟ್‌ಗೂ ಮುನ್ನ ಮೆನಿಕ್ಯೂರ್-ಪೆಡಿಕ್ಯೂರ್‌ಗೆ ಒಳಗಾಗುವುದು ಅಗತ್ಯ.
  • ನೇಲ್ ಆರ್ಟ್‌ಗೂ ಮುನ್ನವೇ, ಯಾವ ಚಿತ್ತಾರ ಸೂಟ್ ಆಗುವುದು ಎಂಬುದನ್ನು ತಿಳಿದುಕೊಳ್ಳಿ.
  • ನೇಲ್ ಆರ್ಟ್ ಮಾಡಿಸಿದ ನಂತರ ಉಗುರುಗಳನ್ನು ಯಾವುದೇ ಸಮಯದಲ್ಲೂ ಬಳಸಕೂಡದು. ಮುರಿದು ಹೋಗುವ ಸಂಭವವಿರುತ್ತದೆ.

ಶೀಲಾ ಸಿ ಶೆಟ್ಟಿ

View all posts by this author