ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ವಿಂಟರ್ ಪಾರ್ಟಿ ಪ್ರಿಯ ಯುವತಿಯರನ್ನು ಸವಾರಿ ಮಾಡುತ್ತಿರುವ ಸಿಕ್ವಿನ್ಸ್ ಡ್ರೆಸ್

Sequins Dress: ನೋಡಲು ಅತ್ಯಾಕರ್ಷಕವಾಗಿ ಬಿಂಬಿಸುವ ಸೆಲೆಬ್ರೆಟಿ ಲುಕ್ ನೀಡುವ ಶೈನಿಂಗ್ ಸಿಕ್ವಿನ್ಸ್ ಡ್ರೆಸ್‌ಗಳು ಈ ವಿಂಟರ್ ಸೀಸನ್‌ ಪಾರ್ಟಿ ಪ್ರಿಯ ಯುವತಿಯರನ್ನು ಸವಾರಿ ಮಾಡುತ್ತಿವೆ. ನೋಡಲು ಮಿನುಗುವ ಈ ಡ್ರೆಸ್‌ನ ಪ್ರತಿ ಪದರವು ಮಿಂಚುವ ಚಿಕ್ಕ ಚಿಕ್ಕ ಪ್ಲೇಟ್ ರೂಪದ ಚಮಕಿ ಮೇಟಿರಿಯಲ್‌ನಿಂದ ಸಿದ್ಧಪಡಿಸಲಾಗಿರುತ್ತದೆ. ಮೊದಲೆಲ್ಲಾ ಈ ಫ್ಯಾಬ್ರಿಕ್ ಡಾನ್ಸ್ ಡಿಸೈನರ್‌ವೇರ್‌ಗಳಿಗೆ ಅತಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಇದೀಗ ಇದರ ರೂಪ ವಿನ್ಯಾಸ ಬದಲಾಗಿದ್ದು, ಪರಿವರ್ತನೆಗೊಂಡಿದೆ. ಬೆಳಕು ಬಿದ್ದರೇ ಸಾಕು, ಮಿನುಗುವ ಈ ಡ್ರೆಸ್, ನೂರು ಜನರ ಮಧ್ಯೆಯೂ ಎದ್ದು ಕಾಣಿಸುತ್ತದೆ. ಈ ಟ್ರೆಂಡಿ ಔಟ್‌ಫಿಟ್‌ಗಳ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್
1/5

ಸೆಲೆಬ್ರಿಟಿ ಲುಕ್ ನೀಡುವ ಶೈನಿಂಗ್ ಸಿಕ್ವಿನ್ಸ್ ಡ್ರೆಸ್‌ಗಳು ವಿಂಟರ್ ಸೀಸನ್‌ನ ಪಾರ್ಟಿ ಪ್ರಿಯರನ್ನು ಸವಾರಿ ಮಾಡುತ್ತಿದ್ದು, ಸೀಸನ್‌ನ ಟಾಪ್ ಪಾರ್ಟಿವೇರ್ ಲಿಸ್ಟ್‌ಗೆ ಸೇರಿವೆ.

2/5

ಶೈನಿಂಗ್ ಸಿಕ್ವಿನ್ಸ್ ಡ್ರೆಸ್‌ಗಳು

ನೋಡಲು ಮಿನುಗುವ ಈ ಡ್ರೆಸ್‌ನ ಪ್ರತಿ ಪದರವು ಮಿಂಚುವ ಚಿಕ್ಕ ಚಿಕ್ಕ ಪ್ಲೇಟ್ ರೂಪದ ಚಮಕಿ ಮೇಟಿರಿಯಲ್‌ನಿಂದ ಸಿದ್ಧಪಡಿಸಲಾಗಿರುತ್ತದೆ. ಮೊದಲೆಲ್ಲಾ ಈ ಫ್ಯಾಬ್ರಿಕ್ ಡಾನ್ಸ್ ಡಿಸೈನರ್‌ವೇರ್‌ಗಳಿಗೆ ಅತಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಇದೀಗ ಇದರ ರೂಪ ವಿನ್ಯಾಸ ಬದಲಾಗಿದ್ದು, ಪರಿವರ್ತನೆಗೊಂಡಿದೆ. ಬೆಳಕು ಬಿದ್ದರೇ ಸಾಕು, ಮಿನುಗುವ ಈ ಡ್ರೆಸ್, ನೂರು ಜನರ ಮಧ್ಯೆಯೂ ಎದ್ದು ಕಾಣಿಸುತ್ತದೆ.

3/5

ತಾರೆಯರ ನೈಟ್ ಪಾರ್ಟಿ ಡ್ರೆಸ್

ಡಿಸೈನರ್ ರಾಶಿ ಹೇಳುವಂತೆ, ಬಗೆಬಗೆಯ ಸಿಕ್ವಿನ್ಸ್ ಫ್ಯಾಬ್ರಿಕ್ ಬಾಲಿವುಡ್ ಡಿಸೈನರ್‌ಗಳ ಕೈಗೆ ಸಿಲುಕಿ ಪ್ರಯೋಗಾತ್ಮಕ ನೈಟ್ ಪಾರ್ಟಿ ಡ್ರೆಸ್ ಆಗಿ ಮಾರ್ಪಟ್ಟಿದೆ. ರೆಡ್‌ಕಾರ್ಪೆಟ್‌ನಲ್ಲಿ, ಕಾಕ್ಟೇಲ್ ಪಾರ್ಟಿಗಳಲ್ಲಿ ಹಾಗೂ ನೈಟ್ ಪಾರ್ಟಿಗಳಲ್ಲಿ ಸಿನಿಮಾ ತಾರೆಯರ ಹಾಗೂ ಪೇಜ್ ತ್ರೀ ಮಾಡೆಲ್‌ಗಳನ್ನು ಸವಾರಿ ಮಾಡತೊಡಗಿದೆ. ಸೆಲೆಬ್ರೆಟಿಗಳ ವಾರ್ಡ್ರೋಬ್ ಲಿಸ್ಟ್‌ಗೆ ಸೇರಿದೆ ಎನ್ನುತ್ತಾರೆ.

4/5

ಪಾರ್ಟಿಗೆ ಸ್ಟೈಲಿಶ್ ಸಿಕ್ವಿನ್ಸ್ ಡ್ರೆಸ್

ನಾನಾ ಬಗೆಯ ಮಿನಿ, ಶಾರ್ಟ್ ಫ್ರಾಕ್ಸ್, ಬಾಡಿಕಾನ್ ಡ್ರೆಸ್, ಕಟೌಟ್ ಡ್ರೆಸ್ ಸೇರಿದಂತೆ ಕಾಕ್ಟೇಲ್ ಔಟ್‌ಫಿಟ್ ಲಿಸ್ಟ್‌ನಲ್ಲೂ ಸಿಕ್ವಿನ್ಸ್ ಉಡುಗೆ ಸೇರಿಕೊಂಡಿದೆ. ಸಾಮಾನ್ಯ ಯುವತಿಯರು ಸೆಲೆಬ್ರೆಟಿ ಲುಕ್‌ಗಾಗಿ ಇದನ್ನು ಇದೀಗ ಧರಿಸುವುದು ಈ ಸೀಸನ್‌ನಲ್ಲಿ ಹೆಚ್ಚಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಜೆನ್.

5/5

ಪಾರ್ಟಿ ಪ್ರಿಯರ ಸಿಕ್ವಿನ್ಸ್ ಔಟ್‌ಫಿಟ್ ಟಿಪ್ಸ್

  • ನೈಟ್ ಪಾರ್ಟಿಯ ಗ್ಲಾಮರಸ್ ಲುಕ್‌ಗಾಗಿ ಆಯ್ಕೆ ಸೂಕ್ತ.
  • ಸಿಕ್ವಿನ್ಸ್ ಫ್ಯಾಬ್ರಿಕ್ ಆಯ್ಕೆಯ ಗುಣಮಟ್ಟ ಚೆನ್ನಾಗಿರಲಿ.
  • ಈ ಔಟ್‌ಫಿಟ್ ಜತೆಗೆ ಆಭರಣ ಧರಿಸುವುದು ಬೇಡ.
  • ನಿಮ್ಮ ಸ್ಕಿನ್‌ ಟೋನ್‌ಗೆ ಹೊಂದುವ ವರ್ಣದ್ದನ್ನು ಚೂಸ್ ಮಾಡಿ.
  • ಹೀಲ್ಸ್ ಇರುವ ಸ್ಯಾಂಡಲ್ಸ್ ಇದಕ್ಕೆ ಮ್ಯಾಚ್ ಆಗುತ್ತವೆ.
  • ನೇಲ್ ಆರ್ಟ್ ಮಾಡಿಸಿದಲ್ಲಿ ಆಕರ್ಷಕವಾಗಿ ಕಾಣುತ್ತವೆ.
  • ವೆಸ್ಟರ್ನ್ ಲುಕ್‌ಗೆ ಇದು ಹೇಳಿಮಾಡಿಸಿದ ಪಾರ್ಟಿ ಔಟ್‌ಫಿಟ್.

ಶೀಲಾ ಸಿ ಶೆಟ್ಟಿ

View all posts by this author