ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

US Strikes: ಮಾದಕ ವಸ್ತುಗಳು ತುಂಬಿದ್ದ ಜಲಾಂತರ್ಗಾಮಿ ಧ್ವಂಸಗೊಳಿಸಿದ ಅಮೆರಿಕ!

Drug-Carrying Submarine: ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಸಬ್ಮೆರಿನ್ ಮೇಲೆ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಇಬ್ಬರು ಹತರಾಗಿದ್ದಾರೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ.

ವಾಷಿಂಗ್ಟನ್: ಮಾದಕ ವಸ್ತುಗಳನ್ನು ಹೊತ್ತು ಅಮೆರಿಕಾದತ್ತ ಪ್ರಯಾಣಿಸುತ್ತಿದ್ದ ಸಬ್ಮೆರಿನ್ (Submarine) ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಹತರಾಗಿದ್ದಾರೆ ಎಂದು ಶನಿವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಖಚಿತಪಡಿಸಿದ್ದಾರೆ. ಈ ನೌಕೆಯು ಫೆಂಟನೈಲ್ ಹಾಗೂ ಇತರ ಮಾದಕ ವಸ್ತುಗಳನ್ನು ಸಾಗಿಸುತ್ತಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು ಎಂದು ಟ್ರಂಪ್ ತಿಳಿಸಿದ್ದಾರೆ.

ಮಾದಕ ವಸ್ತುಗಳನ್ನು ತುಂಬಿಕೊಂಡು ಅಮೆರಿಕದತ್ತ ಬರುತ್ತಿದ್ದ ಬೃಹತ್ ನೌಕೆಯನ್ನು ನಾಶಪಡಿಸಿರುವುದು ನನಗೆ ಗೌರವದ ವಿಷಯ. ಘಟನೆಯಲ್ಲಿ ಬದುಕುಳಿದ ಇಬ್ಬರು ಭಯೋತ್ಪಾದಕರ ಬಂಧನ ಮತ್ತ ವಿಚಾರಣೆಗಾಗಿ ಅವರ ಮೂಲದೇಶಗಾಳದ ಎಕ್ವೆಡಾರ್(Ecuador) ಮತ್ತು ಕೊಲಂಬಿಯಾ‌(Colombia)ಗೆ ರವಾನಿಸಲಾಗಿದೆ," ಎಂದು ಸೋಷಿಯಲ್ ಮಿಡಿಯಾದಲ್ಲಿ ಟ್ರಂಪ್ ಬರೆದುಕೊಂಡಿದ್ದಾರೆ.

ಈ ಸಬ್ಮೆರಿನ್ ದೇಶದ ತೀರಕ್ಕೆ ತಲುಪಿದ್ದರೆ ಕನಿಷ್ಠ 25,000 ಅಮೆರಿಕನ್‌ ಜನರು ಸಾವಿಗೀಡಾಗುತ್ತಿದ್ದರು. ಈ ದಾಳಿಯಲ್ಲಿ ಯಾವುದೇ ಅಮೆರಿಕ(America)ದ ಪಡೆಗಳಿಗೆ ಹಾನಿಯಾಗಿಲ್ಲ. ನಾನು ಅಧಿಕಾರದಲ್ಲಿರುವವರೆಗೆ ಜಲಮಾರ್ಗ ಅಥವಾ ಭೂಮಾರ್ಗಗಳ ಮೂಲಕ ಅಕ್ರಮ ಮಾದಕ ವಸ್ತು ಸಾಗಾಣೆಗೆ ಅಮೆರಿಕ ಬಿಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ದಾಳಿಯಲ್ಲಿ ಬದುಕುಳಿದ ಇಬ್ಬರೂ ತಮ್ಮ ತಮ್ಮ ದೇಶಗಳಿಗೆ ತಲುಪಿದ್ದಾರೆ ಎಂದು ಎಕ್ವೆಡಾರ್ ಮತ್ತು ಕೊಲಂಬಿಯಾದ ಅಧಿಕಾರಿ ತಿಳಿಸಿವೆ.

ಈ ಸುದ್ದಿಯನ್ನು ಓದಿ: Viral Video: ಸಮೋಸ ಖರೀದಿ ಮಾಡುವಂತೆ ಪ್ರಯಾಣಿಕನಿಗೆ ಕಿರುಕುಳ: ವಿಡಿಯೋ ವೈರಲ್

ನಾರ್ಕೋ ಜಲಾಂತರ್ಗಾಮಿ ನೌಕೆಯಲ್ಲಿ ಸೆರೆಸಿಕ್ಕ ಕೋಲಂಬಿಯಾದ ವ್ಯಕ್ತಿ ದೇಶಕ್ಕೆ ಮರಳಿದ್ದು, ಆತ ಬದುಕುಳಿದಿದ್ದಕ್ಕೆ ನಮಗೆ ಸಂತೋಷವಾಗಿದೆ. ವಿಚಾರಣೆ ನಡೆಸಿ ಅವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಲಂಬಿಯಾ ಅಧ್ಯಕ್ಷ ಗುಸ್ತಾವೋ ಪೆಟ್ರೋ(Gustavo Petro) ಶನಿವಾರ ಮಧ್ಯಾಹ್ನ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಇಲ್ಲಿವರೆಗೆ 27 ಡ್ರಗ್ ಸ್ಮಗ್ಲರ್‌‌ಗಳ ಸಾವು

ಈ ದಾಳಿ ಟ್ರಂಪ್ ಅವರ ಲ್ಯಾಟಿನ್ ಅಮೆರಿಕದಿಂದ ಯುನೈಟೆಡ್ ಸ್ಟೇಟ್ಸ್‌ನತ್ತ ಡ್ರಗ್ ಸಾಗಣೆ ತಡೆಯುವ ಕಠಿಣ ನೀತಿಯ ಭಾಗವಾಗಿದೆ. ಸೆಪ್ಟೆಂಬರ್‌ನಿಂದ ಇಂದಿನವರೆಗೆ, ಕ್ಯಾರಿಬಿಯನ್‌ನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಕನಿಷ್ಠ 6 ನೌಕೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿದೆ.

ಅಮೆರಿಕ ಇಲ್ಲಿಯವರೆಗೆ 27 ಮಾದಕ ವಸ್ತು ಸಾಗಾಣೆದಾರರನ್ನು ಕೊಂದಿರುವುದಾಗಿ ಹೇಳಿದೆ. ಆದರೆ, ಯಾವುದೇ ಇದಕ್ಕೆ ಸಂಬಂಧಿಸಿದಂತೆ ಪುರಾವೆಗಳನ್ನು ನೀಡಿಲ್ಲ. ಕಳೆದ ಮಂಗಳವಾರವಷ್ಟೇ, ವೆನೆಜುವೆಲಾ ತೀರದ ಸಮುದ್ರದಲ್ಲಿ ಮಾದಕ ವಸ್ತು ಸಾಗಿಸುತ್ತಿತ್ತು ಎಂಬ ಆರೋಪದ ಮೇಲೆ ಅಮೆರಿಕ ಪುಟ್ಟ ನೌಕೆಯೊಂದರ ಮೇಲೆ ದಾಳಿ ನಡೆಸಿ, 6 ಜನರನ್ನು ಹತ್ಯೆ ಮಾಡಿತ್ತು. ಆದರೆ, ಅಮೇರಿಕಾದ ಈ ಕ್ರಮಕ್ಕೆ ಪರಿಣಿತರು ವಿರೋಧ ವ್ಯಕ್ತಪಡಿಸಿದ್ದು, "ಅಪರಾಧದ ಬಗ್ಗೆ ಖಚಿತಪಡಿಸಿಕೊಳ್ಳದೇ ಈ ರೀತಿ ಹತ್ಯೆ ಮಾಡುವುದು ಕಾನೂನಿನ ಉಲ್ಲಂಘನೆ," ಎಂದು ಹೇಳಿದ್ದಾರೆ.

ಇನ್ನು ಕೊಲಂಬಿಯಾ ಅಧ್ಯಕ್ಷ ಪೆಟ್ರೋ ಶನಿವಾರ ಅಮೆರಿಕವನ್ಉ ತೀವ್ರವಾಗಿ ಟೀಕಿಸಿದ್ದಾರೆ. ಮೀನುಗಾರ ಅಲೆಜಾಂಡ್ರೊ ಕರಂಜಾ ಯಾವುದೇ ಮಾದಕ ವಸ್ತು ಸಾಗಾಣೆದಾರರೊಂದಿಗೆ ಸಂಬಂಧ ಹೊಂದಿರಲಿಲ್ಲ. ಅವರನೂ ಅಮೇರಿಕ ಕೊಲ್ಲುವ ಮೂಲಕ ಕೊಲಂಬಿಯಾದ ಪ್ರಭುತ್ವವನ್ನು ಉಲ್ಲಂಘಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.