ಉಕ್ರೇನ್ ಯುದ್ಧದಲ್ಲಿ 7 ಲಕ್ಷ ರಷ್ಯಾ ಸೈನಿಕರ ಸಾವು?; ಸ್ಫೋಟಕ ಮಾಹಿತಿ ಬಹಿರಂಗ!
Russia and Ukraine War: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ರಷ್ಯಾ ಸೈನಿಕರು ಸಾವನ್ನಪ್ಪಿದ್ದಾರೆ ಎನ್ನಲಾದ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಹ್ಯಾಕರ್‌ಗಳು ಸೋರಿಕೆ ಮಾಡಿದ್ದಾರೆ ಎನ್ನಲಾದ ರಷ್ಯಾದ ಅಂಕಿಅಂಶ ಸಂಸ್ಥೆ 'ರೋಸ್‌ಸ್ಟ್ಯಾಟ್' ದಾಖಲೆಗಳಲ್ಲಿ ಬಹಿರಂಗವಾಗಿದೆ. ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಈ ವಿವರಗಳ ನಿಖರತೆಯನ್ನು ಸ್ವತಂತ್ರ ಮೂಲಗಳು ಇನ್ನೂ ದೃಢಪಡಿಸಿಲ್ಲ.
ಸಂಗ್ರಹ ಚಿತ್ರ -
ಮಾಸ್ಕೋ, ನ. 26: ಉಕ್ರೇನ್‌ನೊಂದಿಗಿನ ಸುದೀರ್ಘ ಯುದ್ಧದಲ್ಲಿ 7 ಲಕ್ಷಕ್ಕೂ ಹೆಚ್ಚು ರಷ್ಯಾ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಹ್ಯಾಕರ್‌ಗಳ ಗುಂಪೊಂದು ರಷ್ಯಾದ ರಾಷ್ಟ್ರೀಯ ಅಂಕಿಅಂಶ ಸಂಸ್ಥೆಯಾದ ರೋಸ್‌ಸ್ಟ್ಯಾಟ್ (Rosstat) ದಾಖಲೆಗಳನ್ನು ಕದ್ದು ಸೋರಿಕೆ ಮಾಡಿದೆ ಎನ್ನಲಾಗಿದ್ದು, ಅದರಲ್ಲಿ ಈ ಬೃಹತ್ ಸಾವಿನ ಅಂಕಿಅಂಶ ಉಲ್ಲೇಖವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಯುದ್ಧದ ವೇಳೆ ಉಂಟಾಗುತ್ತಿರುವ ಸಾವು-ನೋವುಗಳ ನಿಖರ ವಿವರಗಳನ್ನು ರಷ್ಯಾ ಸರ್ಕಾರ ಮುಚ್ಚಿಡುತ್ತಿದೆ ಮತ್ತು ಕಡಿಮೆ ಮಾಡಿ ತೋರಿಸುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಸೋರಿಕೆ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಹ್ಯಾಕರ್‌ಗಳಿಂದ ಸೋರಿಕೆಯಾಗಿವೆ ಎನ್ನಲಾದ ಈ ದಾಖಲೆಗಳ ಸತ್ಯಾಸತ್ಯತೆ ಮತ್ತು ಅವುಗಳಲ್ಲಿರುವ ಅಂಕಿಅಂಶಗಳ ನಿಖರತೆಯನ್ನು ಸ್ವತಂತ್ರ ಮೂಲಗಳು ಇನ್ನೂ ದೃಢಪಡಿಸಿಲ್ಲ. ಯುದ್ಧದ ಸಮಯದಲ್ಲಿ ಉಭಯ ದೇಶಗಳು ತಮ್ಮ ಸೈನಿಕರ ಸಾವು-ನೋವುಗಳ ಕುರಿತು ವಿವಿಧ ಮೂಲಗಳು ಪರಸ್ಪರ ಭಿನ್ನ ಲೆಕ್ಕಾಚಾರಗಳನ್ನು ನೀಡುತ್ತಿರುವುದರಿಂದ, ಸೋರಿಕೆಯಾದ ದಾಖಲೆಗಳ ಆಧಾರದ ವರದಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಿದೆ.
ಸೋರಿಕೆಯಾಗಿರುವ ದಾಖಲೆಗಳ ಪೋಸ್ಟ್
Then this leak is real also… UKRAINE LOST 2.4 MILLION SOLDIERS Ukraine Has Lost 2.4 Million Soldiers Over Four Years of the Special Military Operation, With Over 400,000 in 2026 Alone Data obtained by hackers who breached Ukrainian Ministry of Defense databases, Territorial Recruitment Center (TCC) records, and morgue registries was published by the Telegram channel Mash.
— capinchos☦️🇷🇺🇰🇵🇺🇸🇨🇳 (@_kabibara_) November 24, 2026
ರೋಸ್‌ಸ್ಟ್ಯಾಟ್ ಸಂಸ್ಥೆಯ ದತ್ತಾಂಶ ಸೋರಿಕೆ
ನವೆಂಬರ್ ಆರಂಭದಲ್ಲಿ 'ಸೈಬರ್ ಪಾರ್ಟಿಸನ್ಸ್' ಮತ್ತು 'ಸೈಲೆಂಟ್ ಕ್ರೌ' ಎಂಬ ಹ್ಯಾಕರ್ ಗುಂಪುಗಳು ಈ ದತ್ತಾಂಶ ಸೋರಿಕೆಯನ್ನು ಬಹಿರಂಗಪಡಿಸಿದ್ದು, ಯುದ್ಧದ ಅವಧಿಯ 1.1 ಕೋಟಿಗೂ ಅಧಿಕ ಅನಾಮಧೇಯ ಮರಣ ಪ್ರಮಾಣಪತ್ರಗಳು ಇದರಲ್ಲಿ ಸೇರಿವೆ ಎಂದು ವರದಿಯಾಗಿದೆ. 2025ರ ಮಧ್ಯಭಾಗದಿಂದ ರೋಸ್‌ಸ್ಟ್ಯಾಟ್ ಸಾರ್ವಜನಿಕವಾಗಿ ಪ್ರಕಟಿಸುವುದನ್ನು ನಿಲ್ಲಿಸಿದ್ದ ಮರಣ ಅಂಕಿಅಂಶಗಳೂ ಈ ದಾಖಲೆಗಳಲ್ಲಿ ಇವೆ ಎನ್ನಲಾಗಿದೆ. ಈ ಹಿಂದೆ ದೃಢಪಟ್ಟ ಸಾವಿನ ಪ್ರಕರಣಗಳ ಪೈಕಿ ಶೇಕಡ 95ಕ್ಕೂ ಅಧಿಕ ವಿವರಗಳು ಈ ದಾಖಲೆಗಳಿಗೆ ಹೊಂದಾಣಿಕೆಯಾಗಿವೆ ಎಂದು ವರದಿಗಳು ಹೇಳಿವೆ.
ಫಿರಂಗಿ ಮತ್ತು ಡ್ರೋನ್ ದಾಳಿಯಿಂದ ಸಂಭವಿಸಿದ ಸಾವುಗಳ ಜತೆಗೆ, ಯುದ್ಧೇತರ ಸಾವುಗಳ ವಿವರಗಳೂ ಇದರಲ್ಲಿವೆ ಎನ್ನಲಾಗಿದೆ. ಉಕ್ರೇನ್ ಮತ್ತು ರಷ್ಯಾ ಗಡಿ ಪ್ರದೇಶಗಳಲ್ಲಿ ನಿಯೋಜನೆಗೊಂಡಿದ್ದ ಸೈನಿಕರಲ್ಲಿ 1,000ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಮತ್ತು ಕಾರಣ ಸ್ಪಷ್ಟವಿಲ್ಲದ ನೂರಾರು ಪ್ರಕರಣಗಳು ದಾಖಲಾಗಿವೆ ಎಂದು ವರದಿಯು ಉಲ್ಲೇಖಿಸಿದೆ.
Russian War: ರಷ್ಯಾ ನಮ್ಮನ್ನು ಯುದ್ಧಕ್ಕೆ ಬಳಸಿಕೊಳ್ಳುತ್ತಿದೆ.... ಕಾಪಾಡಿ! ಭಾರತೀಯನ ಗೋಳಾಟ ಕೇಳೋರಿಲ್ಲ
ವರದಿಗಳನ್ನು ತಳ್ಳಿಹಾಕಿದ ರಷ್ಯಾ ರಕ್ಷಣಾ ಸಚಿವಾಲಯ
ಈ ಸೋರಿಕೆ ವರದಿಗಳ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ವರದಿಗಳನ್ನು ತಳ್ಳಿಹಾಕಿದ್ದು, ಯುದ್ಧದ ಸಾವು-ನೋವುಗಳ ಮಾಹಿತಿಯನ್ನು ಬಹಿರಂಗಪಡಿಸುವ ಅಧಿಕಾರ ರಷ್ಯಾ ರಕ್ಷಣಾ ಸಚಿವಾಲಯಕ್ಕೆ ಮಾತ್ರ ಇದೆ, ಹೊರಗಿನ ಅಂದಾಜುಗಳನ್ನು ಪರಿಗಣಿಸಬಾರದು ಎಂದು ಹೇಳಿದ್ದಾರೆ.
Peskov urges people to ignore Russian army casualties in Ukraine. Journalists who examined leaked Rosstat data counted more than 700,000 Russian troops killed or reported missing. Around 500,000 are listed as killed, while more than 1,000 died by suicide. According to the same data, a total of 2.39 million people have taken part in the war against Ukraine.
— NEXTA (@nexta_tv) November 25, 2026
ನಾಪತ್ತೆಯಾದವರ ಪ್ರಕರಣಗಳ ಸಂಖ್ಯೆಯೇ ಹೆಚ್ಚು
ವಾಸ್ತವ ಸಾವಿನ ಸಂಖ್ಯೆಗಿಂತ ನೋಂದಣಿಯಾದ ಸಾವಿನ ವಿವರಗಳು ಹಲವು ತಿಂಗಳು ತಡವಾಗಿ ದಾಖಲಾಗುತ್ತವೆ ಎಂದು ಸಂಶೋಧಕರು ಗಮನಿಸಿದ್ದಾರೆ. 2025ರ ಆರಂಭದಿಂದ ಸಾವನ್ನಪ್ಪಿದವರ ಬದಲು ನಾಪತ್ತೆಯಾದವರು ಎಂದು ಗುರುತಿಸಲ್ಪಡುವ ಸೈನಿಕರ ಸಂಖ್ಯೆ ಹೆಚ್ಚುತ್ತಿದ್ದು, ನ್ಯಾಯಾಲಯಗಳು ಸಾವಿನ ಘೋಷಣೆ ಮಾಡುವವರೆಗೆ ಅಂಕಿಅಂಶದಲ್ಲಿ ಅಂತರ ಉಳಿಯುತ್ತಿದೆ ಎನ್ನಲಾಗಿದೆ. ರಷ್ಯಾ ಸೇನೆಗೆ ಸೇರಿದ ವಿದೇಶಿ ನಾಗರಿಕರನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ನೋಂದಣಿಯಾದ ಸಾವಿನ ಅಂದಾಜು 5.20 ಲಕ್ಷಕ್ಕೂ ಹೆಚ್ಚಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಷ್ಯಾ ಸರ್ಕಾರವು 2022ರ ಸೆಪ್ಟೆಂಬರ್‌ನಿಂದ ಸೈನಿಕರ ಸಾವಿನ ಅಧಿಕೃತ ಲೆಕ್ಕವನ್ನು ನವೀಕರಿಸಿಲ್ಲ, ಆಗ 6,000ಕ್ಕಿಂತ ಕಡಿಮೆ ಸಾವುಗಳನ್ನು ಒಪ್ಪಿಕೊಂಡಿತ್ತು.