Breaking: ಬಾಂಗ್ಲಾ ಹತ್ಯಾಕಾಂಡಕ್ಕೆ ಶೇಖ್ ಹಸೀನಾ ನೇರ ಹೊಣೆ- ಅಂತಾರಾಷ್ಟ್ರೀಯ ಟ್ರಿಬ್ಯುನಲ್ ಮಹತ್ವದ ಆದೇಶ
Sheikh Hasina: ಮಾನವೀಯತೆ ವಿರುದ್ಧದ ಅಪರಾಧಕ್ಕಾಗಿ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಂತರರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯುನಲ್ ದೋಷಿ ಎಂದು ತೀರ್ಪು ನೀಡಿದೆ.
ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್ ಹಸೀನಾ(ಸಂಗ್ರಹ ಚಿತ್ರ) -
ನವದೆಹಲಿ: ಮಾನವ ಹಕ್ಕುಗಳ ಉಲ್ಲಂಘನೆ ಸೇರಿ ಹಲವು ಆರೋಪಗಳನ್ನು ಎದುರಿಸುತ್ತಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina)ರ ಶಿಕ್ಷೆ ಕುರಿತು ಇಂದು ಮಹತ್ವದ ತೀರ್ಪು ನೀಡಿದೆ. ಬಾಂಗ್ಲಾದೇಶದಲ್ಲಿ ಬಹುದೊಡ್ಡ ಮಟ್ಟದಲ್ಲಿ ನಡೆದ ದಂಗೆಗೆ ಶೇಖ್ ಹಸೀನಾ ಅವರ ಪ್ರಚೋದನಕಾರಿ ಹೇಳಿಕೆಯೇ ಕಾರಣ ಎಂದಿದೆ. ಆಕೆ ಬಾಂಗ್ಲಾದಲ್ಲಿ ನಡೆದ ಹತ್ಯಾಕಾಂಡದ ರೂವಾರಿ ಎಂದು ಕರೆದಿದೆ.
ಕಳೆದ ವರ್ಷ ದೇಶದಲ್ಲಿ ಭುಗಿಲೆದ್ದಿದ್ದ ವಿದ್ಯಾರ್ಥಿಗಳ ದಂಗೆಯನ್ನು ಹತ್ತಿಕ್ಕಲು ಮಾರಣಾಂತಿಕ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಶೇಖ್ ಹಸೀನಾ, ಮಾಜಿ ಗೃಹ ಸಚಿವ ಅಸಾದುಜ್ಜಾಮಾನ್ ಖಾನ್ ಕಮಲ್ ಹಾಗೂ ಮಾಜಿ ಐಜಿಪಿ ಚೌಧರಿ ಅಬ್ದುಲ್ಲಾ ಅಲ್–ಮುಮುನ್ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ನ್ಯಾಯಮಂಡಳಿಯು 54 ಸಾಕ್ಷ್ಯಗಳನ್ನು ಪರಿಶೀಲಿಸಿ, ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಸೋಮವಾರ ತೀರ್ಪು ಪ್ರಕಟಿದೆ.
ಶೇಖ್ ಹಸೀನಾ ತೀರ್ಪಿನ ಎಕ್ಸ್ ಪೋಸ್ಟ್ ಇಲ್ಲಿದೆ
#BREAKING
— Nabila Jamal (@nabilajamal_) November 17, 2025
Sheikh Hasina found guilty by #Bangladesh tribunal
Bangladesh’s tribunal says Sheikh Hasina deserves maximum punishment for crimes against humanity during last year’s uprising
Hasina who fled to Delhi after her government collapsed, has called the charges false,… pic.twitter.com/FZJQBpS9Dy
ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಗೆ (ICT) ಮುಖ್ಯ ಪ್ರಾಸಿಕ್ಯೂಟರ್ ಆಗಿರುವ ಮೊಹಮ್ಮದ್ ತಾಜುಲ್ ಇಸ್ಲಾಂ ಅವರು, ಕಳೆದ ವರ್ಷದ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಸಂದರ್ಭದಲ್ಲಿ ನಡೆದ ದೌರ್ಜನ್ಯಗಳ ಹಿಂದಿನ "ಮಾಸ್ಟರ್ ಮೈಂಡ್ ಶೇಖ್ ಹಸೀನಾ ಆಗಿದ್ದಾರೆ. ಈ ಹಿಂಸಾಚಾರದಲ್ಲಿ 1,400ಕ್ಕೂ ಅಧಿಕ ಜನ ಸಾವನ್ನಪ್ಪಿದ್ದರು. ಎಂದು ವಾದಿಸಿದರು. ಪರ-ವಿರೋಧ ವಾದವನ್ನು ಆಲಿಸಿದ ಟ್ರಿಬ್ಯುನಲ್, 2024 ರ ಪ್ರಕರಣದಲ್ಲಿ ಮಾನವ ಹಕ್ಕುಗಳ ಉಲ್ಲಂಘಿಸಿದ ಶೇಖ್ ಹಸೀನಾ ತಪ್ಪಿತಸ್ಥೆ ಎಂದು ತೀರ್ಪು ನೀಡಿದೆ.