ಇಂಧನ ಬಿಕ್ಕಟ್ಟು ಎಫೆಕ್ಟ್: ವಿದ್ಯುತ್ ಉಳಿತಾಯಕ್ಕೆ ವಿಶ್ವವಿದ್ಯಾಲಯಗಳನ್ನು ಮುಚ್ಚಿದ ಬಾಂಗ್ಲಾದೇಶ
ಇರಾನ್ ನೊಂದಿಗೆ ಇಸ್ರೇಲ್ ಮತ್ತು ಯುಎಸ್ ಸೇನಾಪಡೆಯು ಸಂಘರ್ಷಕ್ಕೆ ಇಳಿದ ಮೇಲೆ ವಿಶ್ವದಾದ್ಯಂತ ಇಂಧನ ಬಿಕ್ಕಟ್ಟು ಉಲ್ಬಣಗೊಂಡಿದೆ. ಒಂದೆಡೆ ಇಂಧನಗಳ ಬೆಲೆ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಪೂರೈಕೆ ಸಮಸ್ಯೆ ಉಲ್ಭಣಗೊಂಡಿದೆ. ಹೀಗಾಗಿ ಹಲವು ರಾಷ್ಟ್ರಗಳು ಇಂಧನ ಉಳಿತಾಯ ಮಾಡಲು ನಾನಾ ದಾರಿಗಳನ್ನು ಹುಡುಕುತ್ತಿವೆ.
ಸಂಗ್ರಹ ಚಿತ್ರ -
ಢಾಕಾ: ಬಾಂಗ್ಲಾದೇಶದಾದ್ಯಂತ (Bangladesh) ವಿದ್ಯುತ್ ಸಂರಕ್ಷಣೆಗಾಗಿ (conserve electricity) ವಿಶ್ವವಿದ್ಯಾನಿಲಯಗಳನ್ನು ಮುಚ್ಚಲಾಗಿದೆ. ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಫೆಬ್ರವರಿ 28ರಿಂದ ಇರಾನ್ ನೊಂದಿಗೆ ಸಂಘರ್ಷ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಇಂಧನ ಪೂರೈಕೆಗೆ (global energy crisis) ಅಡ್ಡಿಯಾಗಿದೆ. ಒಂದೆಡೆ ಇಂಧನಗಳ ಬೆಲೆ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಆಮದು ಸಮಸ್ಯೆಯೂ ಉಲ್ಭಣಗೊಳ್ಳುತ್ತಿದೆ. ಹೀಗಾಗಿ ಹಲವು ರಾಷ್ಟ್ರಗಳು ಇಂಧನ ಉಳಿತಾಯ ಮಾಡಲು ನಾನಾ ದಾರಿಗಳನ್ನು ಹುಡುಕುತ್ತಿವೆ. ಇದೀಗ ಬಾಂಗ್ಲಾದೇಶದಾದ್ಯಂತ ವಿದ್ಯುತ್ ಸಂರಕ್ಷಣೆಗಾಗಿ ವಿಶ್ವವಿದ್ಯಾನಿಲಯಗಳನ್ನು ಮುಚ್ಚಿ (shuts universities) ಇಂಧನ ಬಳಕೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ.
ಸರ್ಕಾರದ ಆದೇಶದ ಪ್ರಕಾರ, ಬಾಂಗ್ಲಾದೇಶದ ವಿಶ್ವವಿದ್ಯಾಲಯಗಳು ನಿಗದಿತ ಈದ್-ಉಲ್-ಫಿತರ್ ಶೈಕ್ಷಣಿಕ ಕ್ಯಾಲೆಂಡರ್‌ಗೆ ಅನುಗುಣವಾಗಿ ಮುಚ್ಚಲ್ಪಡುತ್ತವೆ. ಇದರೊಂದಿಗೆ ಇದೀಗ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ವಿಶ್ವವಿದ್ಯಾನಿಲಯಗಳನ್ನು ಮುಚ್ಚಲಾಗಿದೆ.
ಚಾಟ್ ಜಿಪಿಟಿ ಮೂಲಕ ಆತ್ಮಹತ್ಯೆಯ ವಿಧಾನ ಹುಡುಕಾಡಿದ ಯುವತಿಯರು; ಎಲಾನ್ ಮಸ್ಕ್ ಹೇಳಿದ್ದೇನು?
ಇಸ್ರೇಲ್ ಮತ್ತು ಯುಎಸ್ ಸೇನಾಪಡೆಯು ಇರಾನ್ ಮೇಲೆ ನಡೆಸಿರುವ ದಾಳಿಗೆ ಪ್ರತಿಯಾಗಿ ಇರಾನ್ ಯುಎಸ್ ಮಿಲಿಟರಿ ನೆಲೆಯನ್ನು ಹೊಂದಿರುವ ಗಲ್ಫ್ ರಾಷ್ಟ್ರಗಳ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಅಲ್ಲದೇ ಹೊರ್ಮುಜ್ ಜಲಸಂಧಿಯ ಮೂಲಕ ಸರಕು ಸಾಗಾಟಕ್ಕೆ ಅಡ್ಡಿ ಉಂಟಾಗಿದ್ದು, ಇದು ಜಾಗತಿಕವಾಗಿ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ. ಹೀಗಾಗಿ ಏಷ್ಯಾದ ಹಲವು ರಾಷ್ಟ್ರಗಳು ಇಂಧನ ಕೊರತೆಯನ್ನು ನೀಗಿಸಲು ನಾನಾ ರೀತಿಯ ಮುಂದಾಗಿದೆ.
ಇಂಧನ ಕೊರತೆಯನ್ನು ತೀವ್ರವಾಗಿ ಎದುರಿಸುತ್ತಿರುವ ಬಾಂಗ್ಲಾದೇಶ ಸರ್ಕಾರವು ವಿದ್ಯುತ್ ಮತ್ತು ಇಂಧನವನ್ನು ಸಂರಕ್ಷಿಸಲು ಸೋಮವಾರದಿಂದ ದೇಶಾದ್ಯಂತ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಆದೇಶಿಸಿದೆ. ಈ ಕುರಿತು ಸಹಾಯಕ ಕಾರ್ಯದರ್ಶಿ ಸುಲ್ತಾನ್ ಅಹ್ಮದ್ ಅವರ ಹೆಸರಿನಲ್ಲಿ ದೇಶದ ಶಿಕ್ಷಣ ಸಚಿವಾಲಯವು ಈ ನಿರ್ದೇಶನವನ್ನು ಹೊರಡಿಸಿದೆ.
ನಿಗದಿತ ಈದ್-ಉಲ್-ಫಿತರ್ ಶೈಕ್ಷಣಿಕ ಕ್ಯಾಲೆಂಡರ್‌ಗೆ ಅನುಗುಣವಾಗಿ ವಿಶ್ವವಿದ್ಯಾಲಯಗಳು ಮುಚ್ಚಲ್ಪಡುತ್ತವೆ. ಜೊತೆಗೆ ಜಾಗತಿಕ ಇಂಧನ ಪೂರೈಕೆಯಲ್ಲಿ ಸಂಭವನೀಯ ಅಡಚಣೆಗಳಿಗೆ ದೇಶವು ಸಿದ್ಧವಾಗುತ್ತಿದ್ದಂತೆ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಕೂಡ ಈ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ಹೊಸದಾಗಿ ರಚನೆಯಾದ ತಾರಿಕ್ ರೆಹಮಾನ್ ಸರ್ಕಾರವು ದೇಶಾದ್ಯಂತ ಇಂಧನ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವು ಅಂತಾರಾಷ್ಟ್ರೀಯ ಇಂಧನ ಪೂರೈಕೆ ಮೇಲೆ ಮತ್ತಷ್ಟು ಅಡ್ಡಿಯಾದರೆ ಬಾಂಗ್ಲಾದೇಶದಂತಹ ಇಂಧನ ಆಮದು ಅವಲಂಬಿತ ರಾಷ್ಟ್ರಗಳ ಮೇಲೆ ತೀವ್ರ ಪರಿಣಾಮ ಬೀರುವ ಬೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾನಿಲಯ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿರುವ ಸರ್ಕಾರ ಇದರೊಂದಿಗೆ ಇಂಧನ ಮತ್ತು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಸಾರ್ವಜನಿಕರನ್ನು ಒತ್ತಾಯಿಸಿದೆ. ಅಲ್ಲದೇ ಇಂಧನ ವೆಚ್ಚವನ್ನು ಕಡಿತಗೊಳಿಸಲು ಅನಗತ್ಯ ಪ್ರಯಾಣವನ್ನು ಮಿತಿಗೊಳಿಸಲು ಕೂಡ ಮನವಿ ಮಾಡಲಾಗಿದೆ.
ಇರಾನ್ ಶಾಲೆಯ ಮೇಲೆ ನೌಕಾ ನೆಲೆಗೆ ಅಮೆರಿಕದ ಕ್ಷಿಪಣಿಗಳ ದಾಳಿ; ಭೀಕರ ವಿಡಿಯೊ ಇಲ್ಲಿದೆ
ದೇಶಾದ್ಯಂತ ಇಂಧನ ಕೊರತೆ ಇರುವ ಸೂಚನೆ ಬಂದ ಮೇಲೆ ಢಾಕಾದ ಇಂಧನ ಕೇಂದ್ರಗಳಲ್ಲಿ ವಾಹನ ಸವರಾರು ದೀರ್ಘವಾದ ಸರತಿಯಲ್ಲಿ ನಿಂತು ಇಂಧನ ಖರೀದಿಗೆ ಮುಂದಾದರು. ಕಳೆದ ವಾರದಿಂದ ಇಂಧನಗಳಿಗೆ ಬೇಡಿಕೆ ಹೆಚ್ಚಾಗಿದೆ ಬೆಳಗ್ಗೆಯಿಂದಲೇ ಕೆಲವು ಕಡೆ ದೀರ್ಘವಾದ ಸರತಿ ಸಾಲುಗಳು ಕಂಡು ಬರುತ್ತಿದ್ದು, ಕೆಲವರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಸರತಿಯಲ್ಲಿ ನಿಂತು ಇಂಧನ ಖರೀದಿ ಮಾಡಿದರು ಎನ್ನುತ್ತಾರೆ ಹಲವಾರು ಇಂಧನ ಕೇಂದ್ರಗಳ ನಿರ್ವಾಹಕರು ಹೇಳಿದ್ದಾರೆ.