ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಿಒಕೆ ಜನರ 38 ಬೇಡಿಕೆ ಈಡೇರಿಸಲು ಪಾಕಿಸ್ತಾನ ಸರ್ಕಾರಕ್ಕೆ ಗಡುವು ವಿಧಿಸಿದ ಎಎಸಿ

ಶಿಕ್ಷಣ, ಆಹಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅವಾಮಿ ಕ್ರಿಯಾ ಸಮಿತಿ (ಎಎಸಿ) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ 14ನೇ ದಿನಕ್ಕೆ ಕಾಲಿಟ್ಟಿದೆ. ರಾವಲಕೋಟ್‌ನ ಈದ್ಗಾ ಮೈದಾನದಲ್ಲಿ ಸೇರಿದ್ದ ಸುಮಾರು 70,000 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪಾಕಿಸ್ತಾನ ಮಿಲಿಟರಿ ಕ್ರಮಕ್ಕೆ ಮುಂದಾಗಿದೆ.

ಸಂಗ್ರಹ ಚಿತ್ರ

ರಾವಲಕೋಟ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (Pakistan-occupied Kashmir) ನಡೆಯುತ್ತಿರುವ ಪ್ರತಿಭಟನೆ 14ನೇ ದಿನಕ್ಕೆ ಕಾಲಿಟ್ಟಿದೆ. ಶಿಕ್ಷಣ, ಆಹಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅವಾಮಿ ಕ್ರಿಯಾ ಸಮಿತಿ (Awami Action Committee) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನವು ಮಿಲಿಟರಿ (Pakistan military) ಕ್ರಮಕ್ಕೆ ಮುಂದಾಗಿದೆ. ರಾವಲಕೋಟ್‌ನ ಈದ್ಗಾ ಮೈದಾನದ ಪ್ರಮುಖ ಪ್ರತಿಭಟನಾ ಸ್ಥಳದಲ್ಲಿ ಸುಮಾರು 70,000 ಕ್ಕೂ ಹೆಚ್ಚು ಪ್ರತಿಭಟನಾಕಾರರು ಸೇರಿ ಧರಣಿಯನ್ನು ಮುಂದುವರಿಸಿದ್ದಾರೆ. ಪ್ರತಿಭಟಕರಾರು 38 ಬೇಡಿಕೆಗಳನ್ನು ಇಟ್ಟಿದ್ದು, ಈ ಕುರಿತು ಸನ್ನದನ್ನು ಸ್ವೀಕರಿಸಲು ಸರ್ಕಾರಕ್ಕೆ ಜೂನ್ 23ರ ಗಡುವು ನೀಡಲಾಗಿದೆ.

ಶಿಕ್ಷಣ, ಆಹಾರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು, ಇದರಲ್ಲಿ ಮಹಿಳೆಯರು, ಮಕ್ಕಳು ಕೂಡ ಸೇರಿಕೊಂಡಿದ್ದಾರೆ. ರಾವಲಕೋಟ್‌ನ ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪಾಕಿಸ್ತಾನಿ ಪಡೆಗಳು ಕಾಶ್ಮೀರಿಗಳನ್ನು ಕೊಲ್ಲುತ್ತಿವೆ, ಕಾಶ್ಮೀರವು ಪಾಕಿಸ್ತಾನಿ ದಾಳಿಯಲ್ಲಿದೆ, ನಮಗೆ ಮೂಲಭೂತ ಹಕ್ಕುಗಳು ಬೇಕು, ನಮಗೆ ಉಚಿತ ಶಿಕ್ಷಣ ಬೇಕು, ಆಹಾರ ಬೇಕು, ಇಂಟರ್ನೆಟ್ ಬೇಕು, ಯುಎನ್‌ಒ ಗಮನ ಹರಿಸಬೇಕು ಎನ್ನುವ ಘೋಷಣೆಗಳನ್ನು ಕೂಗಿದರು.

ಕತಾರ್‌ನಲ್ಲಿ ಭೀಕರ ಸ್ಫೋಟ: ಭಾರತೀಯರು ಸೇರಿ 13 ಮಂದಿ ಸಾವು, 66 ಮಂದಿಗೆ ಗಾಯ

10 ರಿಂದ 12 ವರ್ಷ ವಯಸ್ಸಿನ ಮಕ್ಕಳು ಸ್ವಾತಂತ್ರ್ಯ ಘೋಷಣೆಗಳನ್ನು ಕೂಗುತ್ತಿರುವುದು ವಿಶ್ವದ ಗಮನ ಸೆಳೆದಿದೆ. ಇದು ಈ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿರುವ ರಾಜಕೀಯ ದಬ್ಬಾಳಿಕೆಯ ಪ್ರತಿಬಿಂಬವಾಗಿದೆ. ರಾವಲಕೋಟ್‌ನ ಹೊರಗೆಯೂ ಕೂಡ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಹಳ್ಳಿಹಳ್ಳಿಯಲ್ಲೂ ಕೂಡ ಪ್ರತಿಭಟನೆಗಳನ್ನು ನಡೆಸಲಾಗುತ್ತಿದ್ದು, ಅನೇಕ ಶಾಲಾ ಮಕ್ಕಳು ಸ್ವಾತಂತ್ರ್ಯ ಘೋಷಣೆಗಳನ್ನು ಕೂಗುತ್ತಿದ್ದಾರೆ. ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪಾಕಿಸ್ತಾನ ಸರ್ಕಾರ ಮತ್ತು ಮಿಲಿಟರಿಯ ಆಕ್ರಮಣಕಾರಿ ಕ್ರಮವನ್ನು ಖಂಡಿಸಿದರು.

ಈದ್ಗಾ ಮೈದಾನದಲ್ಲಿ ಪ್ರತಿಭಟನೆಗಳ ಹಿರಿಯ ಸಂಘಟಕರಾದ ಸರ್ದಾರ್ ಅಮನ್ ಖಾನ್ ಮಾತನಾಡಿ, ಪಾಕಿಸ್ತಾನಿ ಸೇನೆಯು ತನ್ನ ದಬ್ಬಾಳಿಕೆಯನ್ನು ಮುಂದುವರಿಸಿದರೆ ಸಂಪೂರ್ಣ ಮಿಲಿಟರಿ ಉಪಕರಣವನ್ನು ಪಿಒಕೆಯಿಂದ ಹೊರಹಾಕಲಾಗುವುದು ಎಂದು ಎಚ್ಚರಿಸಿದರು.

ಜನ ಸಮುದಾಯದೊಂದಿಗೆ ಪಾಕಿಸ್ತಾನದ ಮಿಲಿಟರಿ ನಡೆಯ ಕುರಿತು ಉಲ್ಲೇಖಿಸಿದ ಅವರು, ಕಾಶ್ಮೀರಿಗಳು ಪಿಒಕೆಯಲ್ಲಿ ವಾಸಿಸಲು ಸಾಧ್ಯವಾಗದಿದ್ದರೆ ಪಾಕಿಸ್ತಾನ ಸೇನೆಯು ಇಲ್ಲಿ ಇರಲು ಸಾಧ್ಯವಿಲ್ಲ ಎಂದರು.

ಅವಾಮಿ ಕ್ರಿಯಾ ಸಮಿತಿಯು (ಎಎಸಿ) ಪ್ರತಿಭಟಕಾರರ 38 ಬೇಡಿಕೆಗಳನ್ನು ಈಡೇರಿಸಲು ಪಾಕಿಸ್ತಾನ ಸರ್ಕಾರಕ್ಕೆ ಜೂನ್ 23 ರ ಗಡುವನ್ನು ನಿಗದಿಪಡಿಸಿದೆ. ಇದು ಈಡೇರದಿದ್ದರೆ ಎಎಸಿ ನಾಯಕರು ರಾವಲಕೋಟ್‌ನಿಂದ ಪಿಒಕೆಯ ಆಡಳಿತ ರಾಜಧಾನಿ ಮುಜಫರಾಬಾದ್‌ಗೆ 1,00,000 ಕ್ಕೂ ಹೆಚ್ಚು ಪ್ರತಿಭಟನಾಕಾರರೊಂದಿಗೆ ಮೆರವಣಿಗೆ ನಡೆಸಲಿದೆ ಎಂದು ಎಚ್ಚರಿಸಿದೆ.

ನೆಚ್ಚಿನ ಭಾರತ, ಪಾಕಿಸ್ತಾನ ವ್ಯಕ್ತಿಯನ್ನು ಹೆಸರಿಸಿದ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್; ಪಟ್ಟಿಯಲ್ಲಿ ಯಾರಿದ್ದಾರೆ?

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದರಿಂದ ಜೂನ್ 5 ರಿಂದ ಪಿಒಕೆಯಾದ್ಯಂತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಂವಹನ ಮತ್ತು ಮಾಧ್ಯಮ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜೂನ್ 14 ರಿಂದ ಆಹಾರ ಟ್ರಕ್‌ಗಳನ್ನು ನಿರ್ಬಂಧಿಸಲಾಗಿದ್ದು, ಇದರಿಂದ ಹಲವಾರು ಪ್ರದೇಶಗಳಲ್ಲಿ ಆಹಾರ ಕೊರತೆ ಉಂಟಾಗಿದೆ. ಇದು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿದೆ. ಪ್ರತಿಭಟನೆ ಆರಂಭವಾದಾಗಿನಿಂದ ಈವರೆಗೆ ಮಿಲಿಟರಿ ಪಡೆಯೊಂದಿಗೆ ನಡೆದ ಘರ್ಷಣೆಗಳಿಂದ ಸುಮಾರು 58 ಮಂದಿ ಸಾವನ್ನಪ್ಪಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author