ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಯತೊಲ್ಲಾ ಅಲಿ ಖಮೇನಿ ಹತ್ಯೆ: ಇರಾನ್‌ನ ಸರ್ವೋಚ್ಚ ನಾಯಕನ ಉತ್ತರಾಧಿಕಾರಿ ಯಾರು?

ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ ಬಳಿಕ ಅವರ ಉತ್ತರಾಧಿಕಾರಿ ಯಾರಾಗುತ್ತಾರೆ ಎನ್ನುವ ಕುತೂಹಲವೆದ್ದಿದೆ. ಖಮೇನಿ ಅವರು ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸಿಲ್ಲ. ಹೀಗಾಗಿ ಇರಾನ್ ನ ಸರ್ವೋಚ್ಚ ನಾಯಕನ ಇದೀಗ ಐದು ಹೆಸರುಗಳು ಕೇಳಿ ಬರುತ್ತಿವೆ.

ಸಂಗ್ರಹ ಚಿತ್ರ

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ (US-Israel Attacks on Iran) ಸೇನಾ ಪಡೆಯು ಟೆಹ್ರಾನ್ (tehran) ಮೇಲೆ ನಡೆಸಿದ ದಾಳಿಯಲ್ಲಿ (air strike) ಇರಾನ್‌ನ ಸರ್ವೋಚ್ಚ ನಾಯಕ (Iran Supreme Leader) ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಸಾವನ್ನಪ್ಪಿದ್ದಾರೆ. ಇರಾನ್‌ ಘೋಷಣೆಗೂ ಮುನ್ನ ಇದನ್ನು ಅಮೆರಿಕ ದೃಢಪಡಿಸಿತ್ತು. ಶನಿವಾರ ಬೆಳಗ್ಗೆ ಪ್ರಾರಂಭವಾದ ದಾಳಿಯಲ್ಲಿ ಖಮೇನಿ, ಅವರ ಮಗಳು, ಮೊಮ್ಮಗಳು, ಸೊಸೆ ಮತ್ತು ಅಳಿಯ ಸೇರಿದಂತೆ ಕುಟುಂಬದ ಹಲವು ಸದಸ್ಯರು ಸಾವನ್ನಪ್ಪಿದ್ದಾರೆ. ಖಮೇನಿ ಸಾವಿನ ಬಳಿಕ ಅವರ ಉತ್ತರಾಧಿಕಾರಿ ಯಾರಾಗುವರು ಎನ್ನುವ ಕುತೂಹಲ ಹೆಚ್ಚಾಗಿದೆ. ಖಮೇನಿ ಉತ್ತರಾಧಿಕಾರಿಯಾಗಿ ಐವರ ಹೆಸರು ಕೇಳಿ ಬರುತ್ತಿವೆ.

ಇರಾನ್‌ನ ಸರ್ವೋಚ್ಚ ನಾಯಕನಾಗಿ 1989 ರಲ್ಲಿ ಅಧಿಕಾರ ವಹಿಸಿಕೊಂಡ ಅಯತೊಲ್ಲಾ ಅಲಿ ಖಮೇನಿ ಅವರು ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಉತ್ತರಾಧಿಕಾರಿಯನ್ನು ಘೋಷಣೆ ಮಾಡಿಲ್ಲ. ಇದೀಗ ಅವರು ಸಾವನ್ನಪ್ಪಿರುವುದು ದೃಢಪಟ್ಟ ಮೇಲೆ ಅವರ ಉತ್ತರಾಧಿಕಾರಿಯಾಗಿ ಐವರ ಹೆಸರು ಕೇಳಿ ಬರುತ್ತಿವೆ.

ಅಮೆರಿಕ-ಇಸ್ರೇಲ್ ಜಂಟಿ ದಾಳಿ; ಇರಾನ್‌ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಹತ್ಯೆ

ಅಯತೊಲ್ಲಾ ಅಲಿ ಖಮೇನಿ ಹತ್ಯೆಯಿಂದ ಸುಮಾರು ಐದು ದಶಕಗಳಿಂದ ಅಸ್ತಿತ್ವದಲ್ಲಿರುವ ಇಸ್ಲಾಮಿಕ್ ಆಡಳಿತಕ್ಕೆ ಇದೀಗ ದೊಡ್ಡ ಹಿನ್ನಡೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಹೊಸ ನಾಯಕನನ್ನು ಘೋಷಿಸಲು ದೇಶದ ಧಾರ್ಮಿಕ ನಾಯಕರು, ಮಿಲಿಟರಿ ಪಡೆಗಳು ಮುಂದಾಗಿವೆ ಎನ್ನಲಾಗಿದೆ.

ಖಮೇನಿ ಅವರ ಸಾವನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ದೃಢಪಡಿಸಿದ್ದು, ಈ ನಡುವೆ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಘೋಷಣೆಯನ್ನು ಕೂಡ ಮಾಡಿದೆ. ಯುಎಸ್ ಮತ್ತು ಇಸ್ರೇಲ್ ನ ದುರುದ್ದೇಶಪೂರಿತ ಕೃತ್ಯವು ಧಾರ್ಮಿಕ, ನೈತಿಕ, ಕಾನೂನು ಮತ್ತು ಅಂತಾರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಇದಕ್ಕೆ ತಕ್ಕ ಉತ್ತರ ನೀಡುವುದಾಗಿ ತಿಳಿಸಿದೆ.

ಖಮೇನಿ ಉತ್ತರಾಧಿಕಾರಿ ಯಾರಾಗುತ್ತಾರೆ?

ಅಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯಾಗಿ ಈ ಐದು ಮಂದಿಯ ಹೆಸರು ಕೇಳಿ ಬರುತ್ತಿವೆ.

ಅಯತೊಲ್ಲಾ ಅಲಿರೆಜಾ ಅರಾಫಿ

ಇರಾನ್ ಮಿಲಿಟರಿ ನಾಯಕನ ಬದಲಿಗೆ ಧಾರ್ಮಿಕ ಮುಖಂಡರನ್ನು ಆಯ್ಕೆ ಮಾಡಲು ಬಯಸಿದರೆ ಮೊದಲ ಹೆಸರು ಕೇಳಿ ಬರುತ್ತಿರುವುದು ಅಯತೊಲ್ಲಾ ಅಲಿರೆಜಾ ಅರಾಫಿ. ವಿದೇಶಾಂಗ ಸಂಬಂಧಗಳ ಮಂಡಳಿಯ ಪ್ರಕಾರ ಅಲಿರೆಜಾ ಅರಾಫಿ ಅವರು ಒಬ್ಬ ಹಿರಿಯ ಧರ್ಮಗುರು ಆಗಿದ್ದಾರೆ. ತಜ್ಞರು ಮತ್ತು ಉನ್ನತ ಅಧಿಕಾರದ ಗಾರ್ಡಿಯನ್ ಕೌನ್ಸಿಲ್ ಸದಸ್ಯರು ಆಗಿರುವ ಇವರನ್ನು ಖಮೇನಿ ಅವರ ಉತ್ತರಾಧಿಕಾರಿ ಎಂದೇ ಪರಿಗಣಿಸಲಾಗುತ್ತಿದೆ.

ಮೊಹ್ಸೆನ್ ಕೋಮಿ

ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಉನ್ನತ ಮಟ್ಟದ ಸಲಹೆಗಾರರಾಗಿದ್ದ ಮೊಹ್ಸೆನ್ ಕೋಮಿ (ಹೊಜ್ಜತ್-ಒಲ್-ಎಸ್ಲಾಮ್) ಅವರನ್ನು ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ ಎಂದೇ ಪರಿಗಣಿಸಲಾಗಿದೆ. ದೇಶದ ಆಡಳಿತದ ಆಂತರಿಕ ವಲಯದೊಳಗೆ ಕಾರ್ಯನಿರ್ವಹಿಸುತ್ತಿರುವ ಇವರ ಆಯ್ಕೆಯು ಆಡಳಿತದಲ್ಲಿ ನಿರಂತರತೆ ಮತ್ತು ರಾಜಕೀಯ ಸ್ಥಿರತೆಗೆ ಆದ್ಯತೆ ನೀಡುತ್ತದೆ.

ಅಯತೊಲ್ಲಾ ಮೊಹ್ಸೆನ್ ಅರಕಿ

ಧಾರ್ಮಿಕ ನಾಯಕರಾಗಿರುವ ಅಯತೊಲ್ಲಾ ಮೊಹ್ಸೆನ್ ಅರಕಿ ತಜ್ಞರ ಸಭೆಯ ಪ್ರಮುಖ ಸದಸ್ಯರಾಗಿದ್ದಾರೆ. ಇವರು ಸಾಂಪ್ರದಾಯಿಕ ಧಾರ್ಮಿಕ ಅರ್ಹತೆಗಳನ್ನು ಹೊಂದಿದ್ದಾರೆ. ಧರ್ಮದ ವಿಚಾರದಲ್ಲಿ ಉನ್ನತ ಮಟ್ಟದ ಪಾಂಡಿತ್ಯ ಹೊಂದಿರುವ ಇವರು ತಮ್ಮ ಸ್ವಸಾಮರ್ಥ್ಯದಿಂದಲೇ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಅಯತೊಲ್ಲಾ ಘೋಲಮ್ ಹೊಸೇನ್ ಮೊಹ್ಸೆನಿ-ಎಜೆಯಿ

ಪ್ರಸ್ತುತ ನ್ಯಾಯಾಂಗದ ಮುಖ್ಯಸ್ಥರಾಗಿರುವ ಮೊಹ್ಸೆನಿ-ಎಜೆಯಿ ಅವರು ದೇಶದ ಭದ್ರತೆ ಮತ್ತು ಕಾನೂನಿನ ಬಗ್ಗೆ ಅಪಾರ ಅನುಭವ ಹೊಂದಿದ್ದಾರೆ. ಸರ್ಕಾರದ ವಿವಿಧ ಶಾಖೆಗಳ ಕಾರ್ಯ ನಿರ್ವಹಿಸಿರುವ ಇವರು ದೇಶದ ಆಡಳಿತದ ಪರಿವರ್ತನೆಯ ಸಮಯದಲ್ಲಿ ಸೂಕ್ತ ಆಯ್ಕೆಯಾಗಿ ಕಾಣುತ್ತಾರೆ.

ಇರಾನ್ ವಾಯು ಪ್ರದೇಶದೊಳಗೆ ನಿರ್ಬಂಧ; ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಾಗುವ ಹಲವು ವಿಮಾನ ಸಂಚಾರ ರದ್ದು

ಅಯತೊಲ್ಲಾ ಹಶೀಮ್ ಹೊಸೇನಿ ಬುಶೆಹ್ರಿ

ಧಾರ್ಮಿಕ ನಾಯಕರಲ್ಲಿ ಕೇಳಿ ಬರುತ್ತಿರುವ ಮೊತ್ತೊಂದು ಹೆಸರು ಅಯತೊಲ್ಲಾ ಹಶೀಮ್ ಹೊಸೇನಿ ಬುಶೆಹ್ರಿ. ತಜ್ಞರ ಸಭೆಯಲ್ಲಿ ಸ್ಥಾನ ಪಡೆದಿರುವ ಇವರ ಸಾಂಪ್ರದಾಯಿಕ ಧಾರ್ಮಿಕ ನಿಲುವಿನ ಕಾರಣದಿಂದ ಇರಾನ್ ನ ಸರ್ವೋಚ್ಚ ನಾಯಕನಾಗಲು ಸೂಕ್ತ ಎಂದೇ ಪರಿಗಣಿಸಲಾಗುತ್ತಿದೆ.

ವಿದ್ಯಾ ಇರ್ವತ್ತೂರು

View all posts by this author