ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್ ವಾಯು ಪ್ರದೇಶದೊಳಗೆ ನಿರ್ಬಂಧ; ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಾಗುವ ಹಲವು ವಿಮಾನ ಸಂಚಾರ ರದ್ದು

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಾಗುವ ವಿಮಾನಗಳನ್ನು ಜಾಗತಿಕ ವಿಮಾನಯಾನ ಸಂಸ್ಥೆಗಳು ಸ್ಥಗಿತಗೊಳಿಸಲಾಗಿದೆ. ಬಿಡುಗಡೆಯಾಗಿರುವ ವಿಮಾನ ಸಂಚಾರದ ಮಾರ್ಗಗಳಲ್ಲಿ ಇರಾನ್ ಮೇಲಿನ ವಾಯುಪ್ರದೇಶವು ಬಹುತೇಕ ಖಾಲಿಯಾಗಿರುವುದನ್ನು ತೋರಿಸಲಾಗಿದೆ. ಹೀಗಾಗಿ ಇದೀಗ ಇರಾನ್ ನ ವಾಯುಪ್ರದೇಶದಲ್ಲಿ ಈಗ ಮಿಲಿಟರಿ ವಿಮಾನಗಳು ಮಾತ್ರ ಸಂಚಾರ ನಡೆಸುತ್ತಿವೆ.

ಇರಾನ್ ವಾಯುಪ್ರದೇಶದೊಳಗೆ ವಿಮಾನ ಹಾರಾಟಕ್ಕೆ ನಿರ್ಬಂಧ

ಸಂಗ್ರಹ ಚಿತ್ರ -

ನವದೆಹಲಿ: ಇಸ್ರೇಲ್ (Isreal) ಮತ್ತು ಯುಎಸ್ ಶನಿವಾರ ಬೆಳಗ್ಗೆ ಇರಾನ್ ವಿರುದ್ಧ ಯುದ್ಧ ಘೋಷಣೆ ಮಾಡಿದ ಬಳಿಕ ಜಾಗತಿಕ ವಿಮಾನಯಾನ ಸಂಸ್ಥೆಗಳು ಇರಾನ್ ನ ವಾಯುಪ್ರದೇಶದಲ್ಲಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದವು. ಕಳೆದ ಕೆಲವು ದಿನಗಳಿಂದ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಶನಿವಾರ ಮುಂಜಾನೆ ನೇರ ಸಂಘರ್ಷದ ರೂಪ ತಾಳಿದೆ. ಅಮೆರಿಕದೊಂದಿಗೆ ಸೇರಿ ಇಸ್ರೇಲ್ ರಾಷ್ಟ್ರ ಇರಾನ್‌ ನ ರಾಜಧಾನಿ ಟೆಹ್ರಾನ್ ಮೇಲೆ ದಾಳಿ ನಡೆಸಿತ್ತು. ಸುಮಾರು 40 ವಿದ್ಯಾರ್ಥಿನಿಯರು ಈ ವೇಳೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು ಪ್ರಾರಂಭಿಸಿದ ಬಳಿಕ ಮಧ್ಯಪ್ರಾಚ್ಯದಾದ್ಯಂತ ಜಾಗತಿಕ ವಿಮಾನಯಾನ ಸಂಸ್ಥೆಗಳು ಶನಿವಾರ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದವು. ಇದರಿಂದಾಗಿ ಇರಾನ್ ನ ವಾಯು ಪ್ರದೇಶದಲ್ಲಿ ಮಿಲಿಟರಿ ವಿಮಾನ ಹಾರಾಟಗಳು ಮಾತ್ರ ಕಂಡು ಬಂದವು.

ಇಸ್ರೇಲ್‌-ಅಮೆರಿಕ ದಾಳಿ: ಇರಾನ್‌ನ 40 ಶಾಲಾ ವಿದ್ಯಾರ್ಥಿನಿಯರು ಸಾವು

ವಿಮಾನ ಮಾರ್ಗದ ನಕ್ಷೆಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಇರಾನ್ ಮೇಲಿನ ವಾಯುಪ್ರದೇಶವು ಬಹುತೇಕ ಖಾಲಿಯಾಗಿರುವುದನ್ನು ತೋರಿಸಲಾಗಿದೆ. ಯುಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ್ದರಿಂದ ಯುಎಸ್ ಜೊತೆ ಸೇರಿ ಇಸ್ರೇಲ್ ಶನಿವಾರ ದಾಳಿ ಮಾಡಿದೆ ಎಂದು ಹೇಳಲಾಗಿದೆ.

ಇರಾನ್ ಮತ್ತು ಇಸ್ರೇಲ್ ನಡುವಿನ ನೇರ ಸಂಘರ್ಷದಿಂದಾಗಿ ಇದೀಗ ವಿಮಾನ ಹಾರಾಟಕ್ಕೆ ನೆರೆ ಹೊರೆಯ ರಾಷ್ಟ್ರಗಳ ವಾಯುಪ್ರದೇಶವನ್ನು ಅವಲಂಬಿಸಬೇಕಾಗಿದೆ.ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಇಲ್ಲಿನ ವಾಯುಪ್ರದೇಶವು ಹೆಚ್ಚಿನ ವಿಮಾನಯಾನ ಸಂಸ್ಥೆಗಳಿಗೆ ವರ್ಷಗಳಿಂದ ಮುಚ್ಚಲ್ಪಟ್ಟಿದೆ. ಹೀಗಾಗಿ ಯುರೋಪ್ ಮತ್ತು ಏಷ್ಯಾ ನಡುವಿನ ವಿಮಾನಗಳಿಗೆ ಮಧ್ಯಪ್ರಾಚ್ಯವು ಹೆಚ್ಚು ಪ್ರಮುಖ ಮಾರ್ಗವಾಗಿದೆ.

ವೈಮಾನಿಕ ದಾಳಿಗಳು ವಾಣಿಜ್ಯ ವಾಯು ಸಂಚಾರದ ಮೇಲಿನ ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ. ಹೀಗಾಗಿ ಈ ಬಗ್ಗೆ ವಿಮಾನಯಾನ ಸಂಸ್ಥೆಗಳು ಕಳವಳ ವ್ಯಕ್ತಪಡಿಸುತ್ತಿವೆ. ದೀರ್ಘ ಹಾರಾಟದ ಸಮಯಗಳಿಗೆ ಹೆಚ್ಚಿನ ಇಂಧನ ಬೇಕಾಗುತ್ತದೆ. ಇದು ಅವುಗಳ ವೆಚ್ಚವನ್ನು ಹೆಚ್ಚಿಸುತ್ತದೆ. ಸಂಘರ್ಷಗಳ ಪರಿಣಾಮದಿಂದಾಗಿ ಇದೀಗ ಇಸ್ರೇಲ್, ಇರಾನ್, ಇರಾಕ್ ಮತ್ತು ಜೋರ್ಡಾನ್ ತಮ್ಮ ವಾಯುಪ್ರದೇಶವನ್ನು ಮುಚ್ಚಿವೆ.

ಹಲವಾರು ವಿಮಾನ ಹಾರಾಟ ಸ್ಥಗಿತ

ಫ್ಲೈಟ್‌ ರಾಡಾರ್ 24ರ ಪ್ರಕಾರ ಹಲವಾರು ಕತಾರ್ ಏರ್‌ವೇಸ್ ವಿಮಾನಗಳು ಶನಿವಾರ ಬೆಳಗ್ಗೆ ಕುವೈತ್ ಅಥವಾ ಸೌದಿ ಅರೇಬಿಯಾವನ್ನು ಸುತ್ತುವರಿದು ಕತಾರಿ ವಾಯುಪ್ರದೇಶಕ್ಕೆ ಮರಳಿದವು. ಇನ್ನು ಕೆಲವು ದೋಹಾದಲ್ಲಿ ಸುತ್ತಿ ಬಂದವು.

ರಷ್ಯಾದ ಸಾರಿಗೆ ಸಚಿವಾಲಯ ಶನಿವಾರ ರಷ್ಯಾದ ವಾಯು ವಾಹಕಗಳು ಇರಾನ್ ಮತ್ತು ಇಸ್ರೇಲ್‌ಗೆ ವಿಮಾನಗಳನ್ನು ಸ್ಥಗಿತಗೊಳಿಸಿವೆ. ಜರ್ಮನಿಯ ಲುಫ್ಥಾನ್ಸ ಶನಿವಾರ ಮತ್ತು ಭಾನುವಾರ ದುಬೈಗೆ ಮತ್ತು ಅಲ್ಲಿಂದ ಹೋಗುವ ವಿಮಾನಗಳನ್ನು ಸ್ಥಗಿತಗೊಳಿಸುತ್ತಿದೆ. ಮಾರ್ಚ್ 7 ರವರೆಗೆ ತಾತ್ಕಾಲಿಕವಾಗಿ ಟೆಲ್ ಅವಿವ್, ಬೈರುತ್ ಮತ್ತು ಓಮನ್ ಮಾರ್ಗಗಳನ್ನು ಸ್ಥಗಿತಗೊಳಿಸುತ್ತಿದೆ ಎಂದು ಹೇಳಿದೆ. ಏರ್ ಫ್ರಾನ್ಸ್ ಟೆಲ್ ಅವಿವ್ ಮತ್ತು ಬೈರುತ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ರದ್ದುಗೊಳಿಸಿದೆ.

ಐಬೇರಿಯಾ ಟೆಲ್ ಅವೀವ್‌ಗೆ ವಿಮಾನಗಳನ್ನು ರದ್ದುಗೊಳಿಸಿದೆ. ವಿಜ್ ಏರ್ ಇಸ್ರೇಲ್, ದುಬೈ, ಅಬುಧಾಬಿ ಮತ್ತು ಅಮ್ಮನ್‌ಗೆ ವಿಮಾನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ.

ಕುವೈತ್‌ನ ವಾಯುಯಾನ ಪ್ರಾಧಿಕಾರವು ಮುಂದಿನ ಸೂಚನೆಯವರೆಗೆ ಇರಾನ್‌ಗೆ ಎಲ್ಲ ವಿಮಾನಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಪ್ರಾದೇಶಿಕ ಸಮಸ್ಯೆಗಳ ಕಾರಣಗಳಿಂದ ಬಾಗ್ದಾದ್‌ಗೆ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿರುವುದಾಗಿ ಓಮನ್ ಏರ್ ಹೇಳಿದೆ.

ಅಮೆರಿಕ-ಇಸ್ರೇಲ್‌ ಜಂಟಿ ದಾಳಿಯಲ್ಲಿ ಇರಾನ್‌ ರಕ್ಷಣಾ ಸಚಿವ ಸಾವು? 3ನೇ ಮಹಾಯುದ್ಧ ಫಿಕ್ಸ್‌?

ಮುನ್ನೆಚ್ಚರಿಕೆ ಕ್ರಮವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಫೆಬ್ರವರಿ 28 ರಂದು ಈ ಪ್ರದೇಶದಲ್ಲಿ ಹಲವಾರು ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದ, ಹಲವಾರು ವಿಮಾನಗಳ ಸಂಚಾರದ ಮೇಲೆ ಪರಿಣಾಮ ಬೀರಿವೆ ಎನ್ನಲಾಗಿದೆ.

ಏರ್ ಫ್ರಾನ್ಸ್ ನಿಂದ ಡಚ್ ಗೆ ಪ್ರಯಾಣ ಮಾಡುವ ಕೆಎಲ್‌ಎಂ ತನ್ನ ಆರ್ಮ್ ಸ್ಟರ್ ಡ್ಯಾಮ್- ಟೆಲ್ ಅವೀವ್ ಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದೆ. ಮಾರ್ಚ್ 1 ರ ಭಾನುವಾರದಿಂದ ವಿಮಾನಗಳನ್ನು ಸ್ಥಗಿತಗೊಳಿಸಲಾಗುವುದು ಈ ಹಿಂದೆಯೇ ವಿಮಾನಯಾನ ಸಂಸ್ಥೆ ಬುಧವಾರ ಘೋಷಿಸಿತ್ತು.