ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aircraft collide: ನಿಲುಗಡೆ ಮಾಡಿದ್ದ ಡೆಲ್ಟಾ ವಿಮಾನಕ್ಕೆ ಜಪಾನ್ ಏರ್ಲೈನ್ಸ್ ವಿಮಾನ ಡಿಕ್ಕಿ; ವಿಡಿಯೋ ಇಲ್ಲಿದೆ

ವಾಷಿಂಗ್ಟನ್‌ನ ಸಿಯಾಟಲ್-ಟಕೋಮಾ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಿಮಾನಕ್ಕೆ ಜಪಾನ್ ಏರ್‌ಲೈನ್ಸ್‌ ವಿಮಾನವು ಡೆಲ್ಟಾ ಏರ್‌ಲೈನ್ಸ್‌ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಘಟನೆಯ ಬಗ್ಗೆ ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್‌ ಮಾಡಿ ತಿಳಿಸಿದ್ದಾರೆ.

Aircraft collide

ವಾಷಿಂಗ್ಟನ್‌ : ಅಮೆರಿಕದ (America) ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಾಕ್ಸಿ ವೇ ಅಲ್ಲಿ ಜಪಾನ್ ಏರ್ಲೈನ್ಸ್ ವಿಮಾನವು ಡೆಲ್ಟಾ ಏರ್ಲೈನ್ಸ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ (Aircraft collide) ಎಂದು ತಿಳಿದು ಬಂದಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಘಟನೆಯ ಸಮಯದಲ್ಲಿ, ಜಪಾನ್ ಏರ್‌ಲೈನ್ಸ್‌ ವಿಮಾನದಲ್ಲಿ 185 ಜನರು ಇದ್ದು, ಡೆಲ್ಟಾ ಏರ್ಲೈನ್ಸ್ ವಿಮಾನವು 142 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್‌ ಮಾಡಿ ತಿಳಿಸಿದ್ದಾರೆ.



ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ಎರಡೂ ವಿಮಾನಗಳ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಘಟನೆಯಲ್ಲಿ ಸಿಬ್ಬಂದಿ ಅಥವಾ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. . ವಿಮಾನವನ್ನು ಟ್ಯಾಕ್ಸಿವೇಯಿಂದ ಸ್ಥಳಾಂತರಿಸುವ ಕಾರ್ಯವನ್ನು ಸಿಬ್ಬಂದಿಗಳು ಮಾಡುತ್ತಿದ್ದಾರೆ. ಡೆಲ್ಟಾ ವಿಮಾನದ ಪ್ರಯಾಣಿಕರಲ್ಲಿ ಒಬ್ಬರಾದ ಜೇಸನ್ ಚಾನ್ ಈ ಬಗ್ಗೆ ಮಾಹಿತಿ ನೀಡಿ ಮಾನ "ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಿತು" ಮತ್ತು ಡಿಕ್ಕಿ ಸಂಭವಿಸಿದಾಗ ಸ್ವಲ್ಪ ಅಲುಗಾಡಿದ ಅನುಭವ ಆಗಿತ್ತು ಎಂದು ಹೇಳಿದರು. ಸ್ವಲ್ಪ ಸಮಯದ ನಂತರ, ವಿಮಾನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ಕ್ಯಾಪ್ಟನ್ ಘೋಷಿಸಿದರು. ಪ್ರಯಾಣಿಕರು ಶಾಂತರಾಗಿದ್ದರು ಎಂದು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ:Plane Crash: ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಅಪ್ಪಳಿಸಿದ ವಿಮಾನ- 65ಪ್ರಯಾಣಿಕರು ಸಾವನಪ್ಪಿರುವ ಶಂಕೆ

ನಂತರ, ಜಪಾನ್ ಏರ್‌ಲೈನ್ಸ್‌ ಇಮೇಲ್ ಹೇಳಿಕೆಯಲ್ಲಿ, ಟೋಕಿಯೊದ ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಮಿಸುವಾಗ ಈ ಘಟನೆ ಸಂಭವಿಸಿದೆ. ವಿಮಾನದಲ್ಲಿದ್ದ 172 ಪ್ರಯಾಣಿಕರು ಮತ್ತು 13 ಸಿಬ್ಬಂದಿಗಳಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ. ಡೆಲ್ಟಾ ವಿಮಾನದ ಪ್ರಯಾಣಿಕರನ್ನು ಹೊಸ ವಿಮಾನಕ್ಕೆ ವರ್ಗಾಯಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.