Italian PM Giorgia Meloni: ಮಂಡಿಯೂರಿ ಕುಳಿತು ಮೆಲೋನಿಯನ್ನು ಸ್ವಾಗತಿಸಿದ ಅಲ್ಬೇನಿಯನ್ ಪ್ರಧಾನಿ- ವಿಡಿಯೊ ಇಲ್ಲಿದೆ
ಯುರೋಪಿಯನ್ ಒಕ್ಕೂಟದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಶುಕ್ರವಾರ ಆಗಮಿಸಿದ ಇಟಲಿಯ ಜಾರ್ಜಿಯಾ ಮೆಲೋನಿ ಅವರು ಕೆಂಪು ಕಾರ್ಪೆಟ್ ಮೇಲೆ ನಡೆದು ಕೊಂಡು ಬರುತ್ತಿದ್ದಂತೆ ಮಳೆಯ ನಡುವೆ ಅಲ್ಬೇನಿಯನ್ ಪ್ರಧಾನಿ ಇಡಿ ರಾಮ ಅವರು ಮಂಡಿಯೂರಿ ಕುಳಿತು ಎರಡು ಕೈಗಳನ್ನು ಜೋಡಿಸಿ ನಮಸ್ತೆ ಮಾಡಿ ಸ್ವಾಗತಿಸಿದರು.


ಅಲ್ಬೇನಿ: ಯುರೋಪಿಯನ್ ಒಕ್ಕೂಟದ ಶೃಂಗಸಭೆಗೆ ( EU Summit) ಆಗಮಿಸಿದ ಇಟಲಿಯ ಪ್ರಧಾನಿಯನ್ನು (Italian PM Giorgia Meloni) ಅಲ್ಬೇನಿಯನ್ ಪ್ರಧಾನಿ (Albania Prime Minister Edi Rama) ಅತ್ಯಂತ ಗೌರವಯುತವಾಗಿ ಮತ್ತು ಪ್ರೀತಿಪೂರ್ವಕವಾಗಿ ಸ್ವಾಗತಿಸಿರುವ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಶುಕ್ರವಾರ ಮಳೆಯ ನಡುವೆ ಅಲ್ಬೇನಿಯನ್ ಪ್ರಧಾನಿ ಎಡಿ ರಾಮ ಅವರು ಇಟಲಿಯ ಜಾರ್ಜಿಯಾ ಮೆಲೋನಿ ಅವರಿಗೆ ನೀಡಿದ ಸ್ವಾಗತ ಇಡೀ ಪ್ರಪಂಚದ ಗಮನ ಸೆಳೆದಿದೆ. ಎಡಿ ರಾಮ ಅವರು ನೆಲದ ಮೇಲೆ ಮಂಡಿಯೂರಿ ಕುಳಿತು ನಮಸ್ತೆಯೊಂದಿಗೆ ಸ್ವಾಗತಿಸಿದ ರೀತಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ.
ಯುರೋಪಿಯನ್ ಒಕ್ಕೂಟದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಶುಕ್ರವಾರ ಆಗಮಿಸಿದ ಇಟಲಿಯ ಜಾರ್ಜಿಯಾ ಮೆಲೋನಿ ಅವರು ಕೆಂಪು ಕಾರ್ಪೆಟ್ ಮೇಲೆ ನಡೆದುಕೊಂಡು ಬರುತ್ತಿದ್ದಂತೆ ಅಲ್ಬೇನಿಯನ್ ಪ್ರಧಾನಿ ಎಡಿ ರಾಮ ಅವರು ಮಂಡಿಯೂರಿ ಕುಳಿತು ಎರಡು ಕೈಗಳನ್ನು ಜೋಡಿಸಿ ನಮಸ್ತೆ ಮಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರು ಕಡು ನೀಲಿ ಬಣ್ಣದ ಛತ್ರಿಯನ್ನು ಹಿಡಿದಿದ್ದರು. ಸಾಕಷ್ಟು ಮಂದಿ ಸುತ್ತ ನೆರೆದಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಪ್ರಧಾನಿಯೊಬ್ಬರು ಇನ್ನೊಬ್ಬ ಪ್ರಧಾನಿಯನ್ನು ಸ್ವಾಗತಿಸಿದ ರೀತಿ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಯಿತು.
ಯುರೋಪಿಯನ್ ರಾಜಕೀಯ ಸಮುದಾಯದ (ಇಪಿಸಿ) ಸಭೆಯಲ್ಲಿ ಭಾಗವಹಿಸಿದ್ದ 40 ಕ್ಕೂ ಹೆಚ್ಚು ನಾಯಕರನ್ನು ಅಲ್ಬೇನಿಯನ್ ಪ್ರಧಾನಿಯವರು ನಗು ಮೊಗದೊಂದಿಗೆ ಬರಮಾಡಿಕೊಂಡರು. ಸಭೆಯ ಆರಂಭಕ್ಕೂ ಮುನ್ನ ಈ ಕುರಿತು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿರುವ ಅಲ್ಬೇನಿಯನ್ ಪ್ರಧಾನಿ ಇಡಿ ರಾಮ, ಇಂದು ಆಲ್ಬನಿಗೆ ಇಂದು ಸಂಪೂರ್ಣ ಯುರೋಪ್ ಬಂದಿದೆ. ಸಂಪೂರ್ಣ ಜಗತ್ತು ಇದನ್ನು ವೀಕ್ಷಿಸುತ್ತಿದೆ. ನಾನು ಎಲ್ಲರಿಗೂ ನಮಸ್ಕಾರ ಹೇಳುತ್ತೇನೆ ಎಂದು ಹೇಳಿದ್ದಾರೆ.
ಇಟಲಿಯ ಪ್ರಧಾನಿ ಮೆಲೋನಿ ಬಂದಾಗ ಅಲ್ಬೇನಿಯನ್ ಪ್ರಧಾನಿ ರಾಮ ಅವರು ತಮ್ಮ ಇಟಾಲಿಯನ್ ಸಹೋದರಿಗಾಗಿ ಆಗಾಗ್ಗೆ ಮಾಡುವಂತೆ ತಮಾಷೆಯಾಗಿ ನೆಲಕ್ಕೆ ಮಂಡಿಯೂರಿ ಕುಳಿತು ಅವರನ್ನು ಸ್ವಾಗತಿಸಿದರು. ರೆಡ್ ಕಾರ್ಪೆಟ್ ಮೇಲೆ ಒಂದು ಮೊಣಕಾಲಿನ ಮೇಲೆ ಕುಳಿತ ಅವರು ಗೌರವಯುತವಾಗಿ ನಮಸ್ತೆ ಮಾಡಿದರು.
ಈ ವಿಡಿಯೊ ಇಲ್ಲಿದೆ
Giorgia Meloni truly commands the utmost respect of world leaders. This is quite the sight to see. pic.twitter.com/xBp3d0Qi7j
— Joey Mannarino 🇺🇸 (@JoeyMannarinoUS) May 16, 2025
ಅನೇಕ ನಾಯಕರನ್ನು ಸ್ವಾಗತಿಸಿದ ಅಲ್ಬೇನಿಯಾದ ಪ್ರಧಾನಿ ರಾಮ ಅವರು, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ರನ್ನು ಸ್ವಾಗತಿಸುತ್ತಾ ಇವರು ಸೂರ್ಯ ರಾಜ ಎಂದು ತಮಾಷೆ ಮಾಡಿದರು.
ಇದನ್ನು ಓದಿ: Road Accident: ಚಿತ್ರದುರ್ಗದಲ್ಲಿ ಕಾರು- ಟ್ರ್ಯಾಕ್ಟರ್ ಡಿಕ್ಕಿ: 2 ವರ್ಷದ ಮಗು ಸೇರಿ ನಾಲ್ವರು ಮೃತ್ಯು
ಈ ನಡುವೆ ಮೊದಲೇ ಮಳೆ ಬರುತ್ತೆ ಎಂದು ಹೇಳಿದ ಯುಕೆ ನಾಯಕರ ಬಗ್ಗೆ ಮಾತನಾಡಿದ ರಾಮ ಅವರು, ಟಿರಾನಾದಲ್ಲಿ ಹಲವು ದಿನಗಳ ಬಿಸಿಲಿನ ಬಳಿಕ ಮಳೆ ಬಂದಿದೆ. ಯುರೋಪಿಯನ್ ಹವಾಮಾನ ಮುನ್ಸೂಚನೆ ಸಂಸ್ಥೆ ಮಳೆ ಬಗ್ಗೆ ಮೊದಲೇ ಮುನ್ಸೂಚನೆ ನೀಡಿದ್ದರು. ಈಗ ಬ್ರಿಟಿಷ್ ನಿಯೋಗ ಬಂದಿದ್ದು ವೈಜ್ಞಾನಿಕ ಪುರಾವೆಯನ್ನು ನೀಡಿದ್ದಾರೆ ಎಂದು ತಮಾಷೆ ಮಾಡಿದರು.
ರಷ್ಯಾ ಮತ್ತು ಉಕ್ರೇನಿಯನ್ ಅಧಿಕಾರಿಗಳು ಶಾಂತಿ ಮಾತುಕತೆಗಾಗಿ ಇಸ್ತಾನ್‌ಬುಲ್‌ನಲ್ಲಿ ಸಭೆ ಸೇರುತ್ತಿರುವುದು ಈ ಸಭೆಯ ಪ್ರಮುಖ ವಿಷಯವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ರಾಮ ಅವರು, ನಾನು ಅವರಿಗಿಂತ ಎತ್ತರವಾಗಿದ್ದೇನೆ ನಿಜ. ಆದರೆ ನಾನು ಚಿಕ್ಕ ದೇಶಗಳಲ್ಲಿ ಒಂದಾದ ದೇಶವನ್ನು ಮುನ್ನಡೆಸುತ್ತಿದ್ದೇನೆ. ನಮಗೆ ಈ ಶೃಂಗಸಭೆಯನ್ನು ಆಯೋಜಿಸುವ ಅವಕಾಶವನ್ನು ಸಿಕ್ಕಿರುವುದು ದೊಡ್ಡ ಗೌರವವಾಗಿದೆ ಎಂದು ಹೇಳಿದರು.