ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AI Minister Diella: 83 ಮಕ್ಕಳಿಗೆ ಜನ್ಮ ನೀಡಲಿದ್ದಾರೆ AI ಸಚಿವೆ! ಅಲ್ಬೇನಿಯನ್‌ ಪ್ರಧಾನಿ ಹೇಳುತ್ತಿರುವುದೇನು?

AI Minister Diella: ಜಗತ್ತಿನ ಏಕೈಕ ಎಐ ಸಚಿವೆಯಾಗಿರುವ ಅಲ್ಬೇನಿಯಾದ ಡಿಯೆಲ್ಲಾ ಗರ್ಭಿಣಿಯಾಗಿದ್ದು, ಅವರು ಬರೋಬ್ಬರಿ 83 ಮಕ್ಕಳಿಗೆ ತಾಯಿಯಾಗಲಿದ್ದಾರೆ. ಬರ್ಲಿನ್‌ನಲ್ಲಿ ನಡೆದ ಗ್ಲೋಬಲ್‌ ಡೈಲಾಗ್‌ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ಪ್ರಧಾನಿ ಎಡಿ ರಾಮ ವಿಲಕ್ಷಣ ಘೋಷಣೆ ಈ ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದು, ಮೊದಲ ಬಾರಿಗೆ ಡಿಯೆಲ್ಲಾ ಗರ್ಭಿಣಿಯಾಗಿದ್ದು, 83 ಮಕ್ಕಳ ತಾಯಿಯಾಗಲಿದ್ದಾರೆ ಎಂದಿದ್ದಾರೆ.

ಸಚಿವೆ ಡಿಯೆಲ್ಲಾ

ಅಲ್ಬೇನಿಯಾ: ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿದ್ದ ಅಲ್ಬೇನಿಯಾ(Albania)ದ ಎಐ (ಕೃತಕ ಬುದ್ಧಿಮತ್ತೆ) (Artificial Intelligence)ಆಧಾರಿತ ಸಚಿವೆ ಡಿಯೆಲ್ಲಾ (AI Minister Diella) ಈಗ ಗರ್ಭಿಣಿಯಾಗಿದ್ದು, 83 ಮಕ್ಕಳ ತಾಯಿಯಾಗಲಿದ್ದಾರೆ ಎಂದು ಪ್ರಧಾನಿ ಎಡಿ ರಾಮ(Edi Rama) ವಿಚತ್ರ ಘೋಷಣೆ ಮಾಡಿದ್ದಾರೆ. ಜರ್ಮನಿ(Germany)ಯ ಬೆರ್ಲಿನ್‌(Berlin)ನಲ್ಲಿ ನಡೆದ ಗ್ಲೋಬಲ್ ಡಯಲಾಗ್ (BGD) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ನಾವು ಡಿಯೆಲ್ಲಾ ವಿಚಾರದಲ್ಲಿ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದು, ಅದು ಯಶಸ್ವಿ ಕೂಡ ಆಗಿದೆ. ಡಿಯೆಲ್ಲಾ ಮೊದಲ ಬಾರಿ ಗರ್ಭಿಣಿಯಾಗಿದ್ದು, ಅವರು 83 ಮಕ್ಕಳಿಗೆ ತಾಯಿಯಾಗಲಿದ್ದಾರೆ. ಈ “ಮಕ್ಕಳು ಅಥವಾ ಸಹಾಯಕರು" ಸಂಸತ್ತಿನ ಎಲ್ಲಾ ಚರ್ಚೆಗಳನ್ನು ದಾಖಲಿಸಲಿದ್ದಾರೆ ಮತ್ತು ಸದಸ್ಯರು ಹಾಜರಾಗದ ಸಂದರ್ಭಗಳಲ್ಲಿ ಅವರಿಗೆ ಮಾಹಿತಿ ನೀಡಲಿದ್ದಾರೆ," ಎಂದರು.

ಅಲ್ಲದೇ, “ಪ್ರತಿಯೊಬ್ಬರೂ.. ಸಂಸತ್ತಿನಲ್ಲಿ ಭಾಗವಹಿಸುವ ಸಂಸದರಿಗೆ ಸಹಾಯಕನಂತೆ ಕೆಲಸ ಮಾಡಲಿದ್ದಾರೆ. ಸಂಸತ್ ಅಧಿವೇಶನಗಳಲ್ಲಿ ನಡೆಯುವ ಪ್ರತಿಯೊಂದು ವಿಷಯವನ್ನು ದಾಖಲಿಸಿ, ಸಲಹೆ ನೀಡಲಿದ್ದಾರೆ. ಈ ಮಕ್ಕಳು ತಮ್ಮ ತಾಯಿಯ ಜ್ಞಾನವನ್ನೇ ಹೊಂದಿರುತ್ತಾರೆ. 2026ರ ಅಂತ್ಯದ ವೇಳೆಗೆ ಈ ವ್ಯವಸ್ಥೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ," ಎಂದು ಎಡಿ ರಾಮ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಹುಲಿಯ ಡೆಡ್ಲಿ ಅಟ್ಯಾಕ್‌! ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು; ಇಲ್ಲಿದೆ ಮೈಜುಮ್ಮೆನ್ನಿಸುವ ವಿಡಿಯೊ

AI ಸಚಿವೆ ಡಿಯೆಲ್ಲಾ

ಸಾರ್ವಜನಿಕ ವ್ಯವಸ್ಥೆಯನ್ನು ಸಂಪೂರ್ಣ ಪಾರದರ್ಶಕತೆ ಮತ್ತು ಭ್ರಷ್ಟಾಚಾರಮುಕ್ತಗೊಳಿಸುವ ಉದ್ದೇಶದಿಂದ ಅಲ್ಬೇನಿಯಾ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಅಧಿಕೃತವಾಗಿ ಕೃತಕ ಬುದ್ಧಿಮತ್ತೆಯಿಂದ ಕಾರ್ಯ ನಿರ್ವಹಿಸುವ ಮೊದಲ ಸಚಿವೆ ಡಿಯೆಲ್ಲಾ ಅವರನ್ನು ನೇಮಿಸಿತ್ತು. ಡಿಯೆಲ್ಲಾ ಅವರನ್ನು ಮೊದಲ ಬಾರಿಗೆ ಈ ವರ್ಷದ ಜನವರಿಯಲ್ಲಿ e-Albania ಪೋರ್ಟಲ್‌ನಲ್ಲಿ ವರ್ಚುವಲ್ ಸಹಾಯಕಿಯಾಗಿ ಪರಿಚಯಿಸಲಾಯಿತು. ಅವರು ನಾಗರಿಕರು ಮತ್ತು ವ್ಯವಹಾರ ಸಂಸ್ಥೆಗಳಿಗೆ ಸರ್ಕಾರಿ ದಾಖಲೆಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ. ಈ AI ಸಚಿವೆ ಡಯೆಲ್ಲಾರನ್ನು ಸಾಂಪ್ರದಾಯಿಕ ಅಲ್ಬೇನಿಯನ್ ಉಡುಪಿನಲ್ಲಿ ಮಹಿಳೆಯ ರೂಪದಲ್ಲಿ ತೋರಿಸಲಾಗಿದೆ.

ಡಿಯೆಲ್ಲಾ ನಮ್ಮ ಸಚಿವ ಸಂಪುಟದ ಮೊದಲ ಸದಸ್ಯೆ. ಅವರು ದೈಹಿಕವಾಗಿ ಅಸ್ತಿತ್ವದಲ್ಲಿಲ್ಲ, ಆದರೆ ಕೃತಕ ಬುದ್ಧಿಮತ್ತೆಯ ಮೂಲಕ ವರ್ಚುವಲ್ ಆಗಿ ರಚಿಸಲಾಗಿದೆ, ಎಂದು ಡಯೆಲ್ಲಾರನ್ನು ಮೊದಲಬಾರಿಗೆ ಪರಿಚಯಿಸುವ ವೇಳೆ ರಮಾ ಹೇಳಿದ್ದರು. ಸಾರ್ವಜನಿಕ ಟೆಂಡರ್‌ಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಡಿಯೆಲ್ಲಾ ಅವರಿಗೆ ವಹಿಸಲಾಗಿದೆ. ಅವುಗಳು ಶೇ.100ರಷ್ಟು ಭ್ರಷ್ಟಾಚಾರ ಮುಕ್ತವಾಗಿರಲಿದ್ದು, ಟೆಂಡರ್ ಕಾರ್ಯವಿಧಾನಕ್ಕೆ ಸಲ್ಲಿಸಲಾದ ಪ್ರತಿಯೊಂದು ಸಾರ್ವಜನಿಕ ನಿಧಿಯು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ ಎಂದು ಪ್ರಧಾನಿ ಎಡಿ ರಾಮಾ ಈ ಹಿಂದೆ ತಿಳಿಸಿದ್ದರು. ಎಐ ಸಚಿವೆ ಡಿಯೆಲ್ಲಾ ನೇಮಕ ಮೂಲಕ ವಿಶ್ವದಲ್ಲೇ ಮಾನವೇತರ ಸರ್ಕಾರಿ ಸಚಿವರನ್ನು ಅಧಿಕೃತವಾಗಿ ನೇಮಿಸಿದ ಮೊದಲ ದೇಶ ಎಂಬ ಕೀರ್ತಿಗೆ ಅಲ್ಬೇನಿಯಾ ಭಾಜನವಾಗಿದೆ.