ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟೆಹ್ರಾನ್‌ನಲ್ಲಿ ಖಮೇನಿಗೆ ಅಂತಿಮ ಸಾರ್ವಜನಿಕ ವಿದಾಯ; ಪ್ರತೀಕಾರದ ಘೋಷಣೆಗಳಿಂದ ಮೊಳಗಿದ ಇಡೀ ಇರಾನ್

ಟೆಹ್ರಾನ್‌ನಲ್ಲಿ ಮಾಜಿ ಪರಮೋಚ್ಚ ನಾಯಕ ಅಲಿ ಖಾಮೆನೇಯಿ ಅವರಿಗೆ ವಾರಪೂರ್ತಿ ಸಾರ್ವಜನಿಕ ಅಂತಿಮ ವಿದಾಯ ಕಾರ್ಯಕ್ರಮ ನಡೆಯುತ್ತಿದ್ದು, ಸಾವಿರಾರು ಜನರು ಭಾಗವಹಿಸಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಅವರ ಪಾರ್ಥಿವ ಶರೀರವನ್ನು ಟೆಹ್ರಾನ್, ಕೊಮ್, ಇರಾಕ್‌ನ ಪವಿತ್ರ ನಗರಗಳು ಹಾಗೂ ಮಶ್ಹಾದ್‌ಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

ಟ್ರಂಪ್ ಫೋಟೋ ಹಿಡಿದು ಪ್ರತಿಭಟನೆ

ಟೆಹ್ರಾನ್, ಜುಲೈ 6: ಇರಾನ್‌ನ (Iran) ಮಾಜಿ ಪರಮೋಚ್ಚ ನಾಯಕ ಅಲಿ ಖಮೇನಿ (Ali Khamenei) ಅವರ ವಾರಪೂರ್ತಿ ಸಾರ್ವಜನಿಕ ಅಂತಿಮ ವಿದಾಯ (Funeral Prayers) ಕಾರ್ಯಕ್ರಮ ಟೆಹ್ರಾನ್‌ನಲ್ಲಿ ಅಂತಿಮ ಹಂತ ತಲುಪಿದೆ. ಸಾವಿರಾರು ಜನರು ಟೆಹ್ರಾನ್‌ನ ಇಮಾಮ್ ಖೊಮೇನಿ ಗ್ರ್ಯಾಂಡ್ ಮೊಸಲ್ಲಾದಲ್ಲಿ ನಡೆದ ಅಂತಿಮ ಪ್ರಾರ್ಥನೆಯಲ್ಲಿ ಭಾಗವಹಿಸಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಇರಾನ್ ಧ್ವಜಗಳು, ಖಮೇನಿ ಅವರ ಭಾವಚಿತ್ರಗಳು ಹಾಗೂ ಪ್ರತೀಕಾರದ ಸಂಕೇತವಾದ ಕೆಂಪು ಧ್ವಜಗಳಿಂದ ಸ್ಥಳ ಕಂಗೊಳಿಸಿತು.

ಕಾರ್ಯಕ್ರಮದಲ್ಲಿ ಶೋಕಾಚರಣೆಯ ಜೊತೆಗೆ ಪ್ರತೀಕಾರದ ಕರೆಗಳೂ ಕೇಳಿಬಂದವು. ಕವನ ವಾಚನದ ವೇಳೆ ಕೆಲವರು ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಕಠಿಣ ಹೇಳಿಕೆಗಳನ್ನು ನೀಡಿದರೆ, ಸಭೆಯಲ್ಲಿ ಭಾಗವಹಿಸಿದ್ದ ಜನರು "ರಾಜಿ ಇಲ್ಲ, ಶರಣಾಗತಿ ಇಲ್ಲ, ಪ್ರತೀಕಾರ ಮಾತ್ರ" ಎಂಬ ಘೋಷಣೆಗಳನ್ನು ಮೊಳಗಿಸಿದರು.

ಖಮೇನಿ ಅವರ ಪಾರ್ಥಿವ ಶರೀರವನ್ನು ಮೊದಲು ಟೆಹ್ರಾನ್‌ನಲ್ಲಿ ಸಾರ್ವಜನಿಕ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಗುತ್ತದೆ. ಬಳಿಕ ಇರಾನ್‌ನ ಪವಿತ್ರ ನಗರ ಕೊಮ್, ನಂತರ ಇರಾಕ್‌ನ ಎರಡು ಶಿಯಾ ಪವಿತ್ರ ನಗರಗಳು ಹಾಗೂ ಕೊನೆಗೆ ಅವರ ಜನ್ಮಸ್ಥಳವಾದ ಮಶ್ಹಾದ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

ನಿಂತಿಲ್ಲ ಯುದ್ಧ: ಉಕ್ರೇನ್‌ನ 5 ಹಳ್ಳಿಗಳನ್ನು ವಶಪಡಿಸಿಕೊಂಡಿರುವುದಾಗಿ ಘೋಷಿಸಿದ ರಷ್ಯಾ ಸೇನೆ

ಅಂತಿಮ ಪ್ರಾರ್ಥನೆಗೆ ಇರಾನ್‌ನ ರಾಜಕೀಯ, ಸೇನಾ ಮತ್ತು ನ್ಯಾಯಾಂಗದ ಪ್ರಮುಖ ನಾಯಕರು ಹಾಜರಾಗಿದ್ದರು. ಆದರೆ, ಇತ್ತೀಚೆಗೆ ಪರಮೋಚ್ಚ ನಾಯಕನಾಗಿ ನೇಮಕಗೊಂಡಿರುವ ಮೊಜ್ತಬಾ ಖಮೇನಿ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ಗಮನ ಸೆಳೆಯಿತು. ಇತ್ತೀಚಿನ ದಾಳಿಯಲ್ಲಿ ಗಾಯಗೊಂಡಿರುವ ಕಾರಣ ಅವರು ಗೈರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

36 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಉಷ್ಣಾಂಶವಿದ್ದರೂ ಮುಂಜಾನೆಯಿಂದಲೇ ಸಾವಿರಾರು ಜನರು ಸ್ಥಳಕ್ಕೆ ಆಗಮಿಸಿದ್ದರು. ಹಲವರು ಕಫನ್ ಧರಿಸಿ ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶ ನೀಡಿದರು. ದೇಶದ ವಿವಿಧ ಭಾಗಗಳಿಂದ ಬಂದ ಜನರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದ್ದು, ಸ್ವಯಂಸೇವಕರು ಆಹಾರ ಮತ್ತು ಪಾನೀಯಗಳನ್ನು ವಿತರಿಸಿದರು.

ಇರಾನ್ ಸರ್ಕಾರ, ಖಮೇನಿ ಅವರ ಸಾವಿನಿಂದ ದೇಶದ ಸಂಕಲ್ಪ ಕುಗ್ಗುವುದಿಲ್ಲ ಎಂದು ಹೇಳಿದ್ದು, ಈ ಅಂತಿಮ ವಿದಾಯ ಸಮಾರಂಭವನ್ನು ರಾಷ್ಟ್ರೀಯ ಏಕತೆ ಮತ್ತು ಪ್ರತಿರೋಧದ ಸಂಕೇತವಾಗಿ ಬಿಂಬಿಸಿದೆ.