ಟೆಕ್ಸಾಸ್: ಅಮೆರಿಕದ ಟೆಕ್ಸಾಸ್‌ನ ಶುಗರ್ ಲ್ಯಾಂಡ್‌ನಲ್ಲಿರುವ ಹನುಮಂತನ ಪ್ರತಿಮೆಯ (Hanuman idol) ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ ನಂತರ ಟೆಕ್ಸಾಸ್‌ನ ರಿಪಬ್ಲಿಕನ್ ನಾಯಕರೊಬ್ಬರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅಲೆಕ್ಸಾಂಡರ್ ಡಂಕನ್, ಟೆಕ್ಸಾಸ್‌ನಲ್ಲಿ ಸುಳ್ಳು ಹಿಂದೂ ದೇವರ ಪ್ರತಿಮೆಯನ್ನು (False Hindu God) ನಾವು ಏಕೆ ಅನುಮತಿಸುತ್ತಿದ್ದೇವೆ? ಇದು ಕ್ರಿಶ್ಚಿಯನ್ ರಾಷ್ಟ್ರ (CHRISTIAN nation) ಎಂದು ಪೋಸ್ಟ್ ಮಾಡಿದ್ದಾರೆ. ಆ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದೂ ಅಮೆರಿಕನ್ ಫೌಂಡೇಶನ್ (HAF) ಡಂಕನ್ ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ. ಹಿಂದೂ ವಿರೋಧಿ ಮತ್ತು ಪ್ರಚೋದನಕಾರಿ ಹೇಳಿಕೆ ಎಂದು ಕಿಡಿಕಾರಿದ್ದಾರೆ. HAF ಡಂಕನ್ ಅವರ ಹೇಳಿಕೆಗಳನ್ನು ರಿಪಬ್ಲಿಕನ್ ಪಕ್ಷಕ್ಕೆ ವರದಿ ಮಾಡಲಾಗಿದ್ದು, ಘಟನೆಯ ಆಂತರಿಕ ಪರಿಶೀಲನೆಗೆ ಒತ್ತಾಯಿಸಿದೆ. ತಾರತಮ್ಯದ ವಿರುದ್ಧ ನಿಮ್ಮ ಸ್ವಂತ ಮಾರ್ಗಸೂಚಿಗಳನ್ನು ಬಹಿರಂಗವಾಗಿ ಉಲ್ಲಂಘಿಸುವ, ಕೆಲವು ಅಸಹ್ಯಕರ ಹಿಂದೂ ವಿರೋಧಿ ದ್ವೇಷವನ್ನು ಪ್ರದರ್ಶಿಸುವ, ನಿಮ್ಮ ಪಕ್ಷದ ಸೆನೆಟ್ ಅಭ್ಯರ್ಥಿಯನ್ನು ನೀವು ಶಿಸ್ತುಬದ್ಧಗೊಳಿಸುತ್ತೀರಾ. 1 ನೇ ತಿದ್ದುಪಡಿಯ ಸ್ಥಾಪನಾ ಷರತ್ತಿಗೆ ಅಗೌರವವನ್ನು ತರಬಾರದು ಎಂದು HAF ಎಕ್ಸ್‌ನಲ್ಲಿ ಬರೆದಿದೆ.
ವಿಡಿಯೊ ವೀಕ್ಷಿಸಿ:
ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಇತರರು ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದರು. ನೀವು ಬಯಸಿದ್ದನ್ನು ನಂಬಲು ಸ್ವತಂತ್ರರು. ಆದರೆ ಬೇರೆಯವರ ನಂಬಿಕೆಗಳನ್ನು ಸುಳ್ಳು ಎಂದು ಕರೆಯುವುದು ಸ್ವಾತಂತ್ರ್ಯವಲ್ಲ ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದರು. ಡಂಕನ್ ಅಮೆರಿಕದ ಗುರುತನ್ನು ಸಂಕುಚಿತಗೊಳಿಸುತ್ತಿದ್ದಾರೆ ಎಂದು ಮತ್ತೊಬ್ಬ ಬಳಕೆದಾರರು ಆರೋಪಿಸಿದರು.
ಒಬ್ಬ ಎಕ್ಸ್ ಬಳಕೆದಾರರು, ಕ್ರಿಶ್ಚಿಯನ್ ರಾಷ್ಟ್ರ ಸ್ಥಾನಮಾನದ ಕಲ್ಪನೆಯನ್ನು ಪ್ರಶ್ನಿಸುತ್ತಾ, ಹಲವು ನಂಬಿಕೆಗಳ ಮೇಲೆ ನಿರ್ಮಿಸಲಾದ ಸ್ಥಳದಲ್ಲಿ ನಾವು ಯಾವಾಗಿನಿಂದ ಒಂದು ಧರ್ಮವನ್ನು ಮಾತ್ರ ಅನುಮತಿಸುತ್ತೇವೆ? ಎಂದು ಪೋಸ್ಟ್ ಮಾಡಿದ್ದಾರೆ. ಡಂಕನ್ ಹೇಳಿಕೆಯ ಪ್ರತಿಮೆಯು, ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿರುವ ಹನುಮಂತ ದೇವರ 90 ಅಡಿ ಎತ್ತರದ ಕಂಚಿನ ಪ್ರತಿಮೆಯಾಗಿದ್ದು, ಇದು ಭಕ್ತಿ, ಶಕ್ತಿ ಮತ್ತು ಏಕತೆಯನ್ನು ಸಂಕೇತಿಸಲು ಮೀಸಲಾಗಿರುವ ಸ್ಥಾಪನೆಯಾಗಿದೆ.
ಈ ವಿವಾದವು ಅಮೆರಿಕದಲ್ಲಿ ಧಾರ್ಮಿಕ ಬಹುತ್ವ, ವಲಸೆ, ಗುರುತು ಮತ್ತು ವೈವಿಧ್ಯಮಯ ನಂಬಿಕೆಗಳನ್ನು ಹೊಂದಿರುವ ಸಮುದಾಯಗಳು ಸಾರ್ವಜನಿಕ ಚಿಹ್ನೆಗಳನ್ನು ಹೇಗೆ ಪರಿಶೀಲಿಸುತ್ತವೆ ಮತ್ತು ಸ್ವೀಕರಿಸುತ್ತವೆ ಎಂಬುದರ ಕುರಿತು ವ್ಯಾಪಕ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಟೆಕ್ಸಾಸ್ ಮತ್ತು ಇತರೆಡೆಗಳಲ್ಲಿರುವ ಅನೇಕ ಹಿಂದೂಗಳಿಗೆ, ಹನುಮಾನ್ ಪ್ರತಿಮೆ ಕೇವಲ ಧಾರ್ಮಿಕ ಸಂಕೇತವಲ್ಲ, ಅದೊಂದು ಸಾಂಸ್ಕೃತಿಕ ಗುರುತಾಗಿದೆ.
ಇದನ್ನೂ ಓದಿ: Viral News: ವಿವಾಹಿತ ಪುರುಷನೊಂದಿಗೆ ಪ್ರೇಮ; ಪತ್ನಿಯ ಜೀವನಾಂಶಕ್ಕೆ 3.7 ಕೋಟಿ ರೂ. ನೀಡಿದ ಮಹಿಳೆ, ಆಮೇಲಾಗಿದ್ದೇ ರೋಚಕ