ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟೆಹ್ರಾನ್ ಮೇಲಿನ ಯಾವುದೇ ದಾಳಿ ನಮ್ಮ ವಿರುದ್ದದ ಸಂಪೂರ್ಣ ಯುದ್ಧ ಎಂದು ಪರಿಗಣಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಇರಾನ್ ಎಚ್ಚರಿಕೆ

ಮಧ್ಯಪ್ರಾಚ್ಯದ ಕಡೆಗೆ ಅಮೆರಿಕದ ಯುದ್ಧ ನೌಕೆಗಳ ದೊಡ್ಡ ಪಡೆ ಸಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಮರುದಿನ ಟೆಹ್ರಾನ್ ಮೇಲಿನ ಯಾವುದೇ ದಾಳಿ ನಮ್ಮ ವಿರುದ್ದದ ಸಂಪೂರ್ಣ ಯುದ್ಧ ಎಂದು ಪರಿಗಣಿಸುವುದಾಗಿ ಇರಾನ್ ಎಚ್ಚರಿಸಿದೆ. ಒಂದು ವೇಳೆ ದಾಳಿಯಾದರೆ ಹೆಚ್ಚು ಕಠಿಣವಾದ ರೀತಿಯಲ್ಲೇ ಉತ್ತರಿಸುತ್ತೇವೆ ಎಂದು ಅಯತೊಲ್ಲಾ ಅಲಿ ಖಮೇನಿ ಆಡಳಿತ ಎಚ್ಚರಿಕೆ ನೀಡಿದೆ.

ಸಂಗ್ರಹ ಚಿತ್ರ

ಇರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಮಿಲಿಟರಿ ಬೆದರಿಕೆ (military threat) ಒಡ್ಡಿದ ಬಳಿಕ ಇದಕ್ಕೆ ಕಠಿಣವಾಗಿ ಪ್ರತಿಕ್ರಿಯಿಸಿರುವುದಾಗಿ ಇರಾನ್ (Iran) ಎಚ್ಚರಿಕೆ ನೀಡಿದೆ. ಅಮೆರಿಕ ಪಡೆಗಳನ್ನು (American forces) ಹಿಮ್ಮೆಟಿಸಲು ತನ್ನ ಬಳಿ ಇರುವ ಎಲ್ಲವನ್ನೂ ಬಳಸುವುದಾಗಿ ಅಯತೊಲ್ಲಾ ಖಮೇನಿ (Ayatollah Khamenei) ಆಡಳಿತದ ಹಿರಿಯ ಇರಾನಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧ್ಯಪ್ರಾಚ್ಯದ (Middle East country) ಕಡೆಗೆ ಅಮೆರಿಕದ ಯುದ್ಧ ನೌಕೆಗಳ ದೊಡ್ಡ ಪಡೆ ಸಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಮರುದಿನ ಟೆಹ್ರಾನ್ ಮೇಲಿನ ಯಾವುದೇ ದಾಳಿ ನಮ್ಮ ವಿರುದ್ದದ ಸಂಪೂರ್ಣ ಯುದ್ಧ ಎಂದು ಪರಿಗಣಿಸುವುದಾಗಿ ಅವರು ಹೇಳಿದ್ದಾರೆ.

ಅಮೆರಿಕದ ಯುದ್ಧ ನೌಕೆಗಳ ದೊಡ್ಡ ಪಡೆ ಹಿಂಸಾಚಾರ ಪೀಡಿತ ಮಧ್ಯಪ್ರಾಚ್ಯ ದೇಶದ ಕಡೆಗೆ ಸಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ನ ಹಿರಿಯ ಅಧಿಕಾರಿ, ಟೆಹ್ರಾನ್ ಮೇಲಿನ ಯಾವುದೇ ದಾಳಿ ನಮ್ಮ ವಿರುದ್ಧದ ಸಂಪೂರ್ಣ ಯುದ್ಧ ಎಂದು ಪರಿಗಣಿಸಲಾಗುವುದು. ಅಮೆರಿಕದ ಮಿಲಿಟರಿ ಪಡೆಯನ್ನು ಹಿಮ್ಮೆಟ್ಟಿಸಲು ಅಯತೊಲ್ಲಾ ಖಮೇನಿ ಆಡಳಿತವು ತನ್ನ ಬಳಿ ಇರುವ ಎಲ್ಲವನ್ನೂ ಬಳಸಲಿದೆ ಎಂದು ತಿಳಿಸಿದ್ದಾರೆ.

ಪರಮಾಣು ಶಸ್ತ್ರಾಸ್ತ್ರ ಹೊಂದಲು ಇರಾನ್ ಎಂದಿಗೂ ಬಯಸಿರಲಿಲ್ಲ: ಅಲಿ ಖಮೇನಿ ಆಪ್ತನ ಸ್ಪಷ್ಟನೆ

ಈ ಬಾರಿ ನಾವು ಯಾವುದೇ ದಾಳಿಯನ್ನು ಸಂಪೂರ್ಣ ಯುದ್ಧವೆಂದು ಪರಿಗಣಿಸುತ್ತೇವೆ. ಇದನ್ನು ಸಂಪೂರ್ಣವಾಗಿ ಪರಿಹರಿಸಲು ಎಷ್ಟು ಸಾಧ್ಯವೋ ಅಷ್ಟು ಕಠಿಣವಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ ಎಂದರು.

ದೇಶಾದ್ಯಂತ ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಕಠಿಣ ಕ್ರಮ ಅನುಸರಿಸುತ್ತಿರುವ ಟೆಹ್ರಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಲಿಟರಿ ಬೆದರಿಕೆ ಒಡ್ಡಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಭಯಾನಕ ಎಚ್ಚರಿಕೆ ನೀಡಿದೆ. ಹೊಸ ವರ್ಷದ ಆರಂಭದಿಂದಲೂ ದೇಶಾದ್ಯಂತ ಖಮೇನಿ ಆಡಳಿತದ ವಿರುದ್ಧದ ಪ್ರತಿಭಟನೆಗಳು ನಡೆಯುತ್ತಿದ್ದು, 3,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಈ ನಡುವೆ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ವಿಮಾನವಾಹಕ ನೌಕೆ ಅಬ್ರಹಾಂ ಲಿಂಕನ್ ಮತ್ತು ಟೊಮಾಹಾಕ್ ಕ್ಷಿಪಣಿಗಳನ್ನು ಹೊಂದಿದ ಮೂರು ವಿಧ್ವಂಸಕ ಯುದ್ಧ ನೌಕೆಗಳು, ಯುಎಸ್ ವಾಯುಪಡೆಯು ೧೨ ಎಫ್-15ಇ ಫೈಟರ್ ಜೆಟ್‌ಗಳನ್ನು ಮಧ್ಯಪ್ರಾಚ್ಯ ದೇಶದ ಕಡೆಗೆ ಅಮೆರಿಕ ಕಳುಹಿಸಿಕೊಟ್ಟಿದೆ. ಹೀಗಾಗಿ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಬಹುದಾದ ಆತಂಕ ಹೆಚ್ಚಾಗಿದೆ ಎಂದು ಇರಾನ್ ಅಧಿಕಾರಿ ಹೇಳಿದ್ದಾರೆ.

ಇರಾನ್ ಎಚ್ಚರಿಕೆಯಲ್ಲಿದ್ದು, ಯಾವುದೇ ರೀತಿಯ ದಾಳಿಯಾದರೂ ಅದನ್ನು ಯುದ್ಧವೆಂದು ಪರಿಗಣಿಸಲಾಗುವುದು. ಇರಾನ್ ಮೇಲೆ ದಾಳಿ ಮಾಡಲು ಧೈರ್ಯ ಮಾಡುವ ಯಾರೇ ಆಗಲಿ ಅವರನ್ನು ಹಿಮ್ಮೆಟ್ಟಿಸಲಾಗುವುದು ಎಂದು ಅವರು ಹೇಳಿದರು.

ಹುಬ್ಬಳ್ಳಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮ: ಸಿಎಂ, ಡಿಸಿಎಂ ಆಗಮನಕ್ಕೂ ಮುನ್ನವೇ ಕುಸಿದುಬಿತ್ತು ಕಟೌಟ್‌ಗಳು

ಟ್ರಂಪ್ ಬೆದರಿಕೆ ಪ್ರತಿಕ್ರಿಯಿಸಿರುವ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಕಮಾಂಡರ್, ಬಂಧಿತ ಪ್ರತಿಭಟನಾಕಾರರನ್ನು ಗಲ್ಲಿಗೇರಿಸಲಾಗುವುದಿಲ್ಲ ಎಂದು ಟೆಹ್ರಾನ್ ಭರವಸೆ ನೀಡಿದ ಬಳಿಕವೂ ನೀಡಿದ ಟ್ರಂಪ್ ಮಿಲಿಟರಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ದಾಳಿಯಾದರೆ ಇರಾನ್ ಕೂಡ ಹಿಂದೆ ಸರಿಯುವುದಿಲ್ಲ. ದೇಶದ ನಾಯಕನ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಜಗತ್ತಿಗೆ ಬೆಂಕಿ ಹಚ್ಚುವುದಾಗಿ ಅಮೆರಿಕ ಮತ್ತು ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author