ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇರಾನ್ ಮೇಲೆ ಮತ್ತೆ ದಾಳಿ; ಮಧ್ಯಂತರ ಒಪ್ಪಂದ ಮುಗಿದಿದೆ ಎಂದ ಡೊನಾಲ್ಡ್ ಟ್ರಂಪ್

ಹೊರ್ಮುಜ್ ಜಲಸಂಧಿಯಲ್ಲಿ ಸರಕು ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಂತರ ಒಪ್ಪಂದ ಮುಗಿದಿದೆ ಎಂದು ಘೋಷಿಸಿದರು. ಇದರ ಬೆನ್ನಲ್ಲೇ ಅಮೆರಿಕ ಸೇನಾ ಪಡೆಗಳು ಇರಾನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದೆ. ಇದರಿಂದ ಇರಾನ್‌ನ ದಕ್ಷಿಣ ಕರಾವಳಿಯ ಹಲವಾರು ನಗರಗಳು ಕತ್ತಲಲ್ಲಿ ಮುಳುಗಿದವು.

ಸಂಗ್ರಹ ಚಿತ್ರ

ವಾಷಿಂಗ್ಟನ್: ಇರಾನ್ (Iran war) ಮೇಲೆ ಮತ್ತೆ ಅಮೆರಿಕ ಸೇನಾ (American military) ಪಡೆಯು ಹೊಸ ದಾಳಿಯನ್ನು (US Strikes) ಪ್ರಾರಂಭಿಸಿದೆ. ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಸಾಗುತ್ತಿದ್ದ ಸರಕು ಹಡಗುಗಳ ಮೇಲೆ ಇರಾನ್ ಗಾರ್ಡ್ ಗಳು ಮಂಗಳವಾರ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಅಮೆರಿಕ ಸೇನಾ ಪಡೆಯು ಇರಾನ್‌ನ ದಕ್ಷಿಣ ಕರಾವಳಿಯ ಹಲವಾರು ನಗರಗಳ ಮೇಲೆ ದಾಳಿ ನಡೆಸಿದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಯುದ್ಧ ಕೊನೆಗೊಳಿಸಲು ಮಧ್ಯಂತರ ಒಪ್ಪಂದ ಮುಗಿದಿದೆ ಎಂದು ಘೋಷಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಹೊಸ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಬುಧವಾರ ಹೇಳಿಕೆ ನೀಡಿರುವ ಯುಎಸ್ ಮಿಲಿಟರಿಯ ಮಧ್ಯಪ್ರಾಚ್ಯ ಕಮಾಂಡ್ ಸಿಇಎನ್ ಟಿಕಾಮ್ , ಹೊರ್ಮುಜ್ ಜಲಸಂಧಿ ದಾರಿಯನ್ನು ಎಲ್ಲ ಹಡಗುಗಳ ಸಂಚಾರಕ್ಕಾಗಿ ಮುಕ್ತವಾಗಿ ಇರಿಸುವ ಗುರಿಯನ್ನು ಇರಾನ್ ಹೊಂದಿತ್ತು. ಆದರೆ ಅದು ಅಲ್ಲಿ ಸಾಗುವ ಹಡಗುಗಳ ಮೇಲೆ ದಾಳಿ ನಡೆಸುತ್ತಿವೆ. ಇದರಿಂದ ಅವುಗಳ ರಕ್ಷಣೆ ಸಲುವಾಗಿ ನಾವು ಇರಾನ್ ಮೇಲೆ ದಾಳಿ ನಡೆಸುತ್ತಿರುವುದಾಗಿ ತಿಳಿಸಿದೆ.

ʼʼಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿʼʼ: ಪಶ್ಚಿಮ ಏಷ್ಯಾದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷಕ್ಕೆ ಭಾರತ ಆತಂಕ

ಹೊರ್ಮುಜ್ ಜಲ ಸಂಧಿಯನ್ನು ಮಂಗಳವಾರ ಮೂರು ಸರಕು ಹಡಗುಗಳು ದಾಟುತ್ತಿದ್ದಾಗ ಇರಾನ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್‌ನ ದಕ್ಷಿಣ ಕರಾವಳಿಯ ಹಲವಾರು ನಗರಗಳ ಮೇಲೆ ದಾಳಿ ನಡೆಸಲಾಗಿದೆ. ಹೊರ್ಮುಜ್ ಜಲ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಬೆದರಿಕೆ ಒಡ್ಡುವ ಇರಾನ್‌ನ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸಲು ಯುಎಸ್ ಸೆಂಟ್ರಲ್ ಕಮಾಂಡ್ ಪಡೆಗಳು ಇರಾನ್ ವಿರುದ್ಧ ಹೆಚ್ಚಿನ ದಾಳಿ ಪ್ರಾರಂಭಿಸಿವೆ ಎಂದು ಹೇಳಿದೆ.

ಸಾಮಾಜಿಕ ಮಾಧ್ಯಮ ಖಾತೆ ಟ್ರುತ್ ಸೋಶಿಯಲ್ ಈ ಕುರಿತು ಬರೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಂತಾರಾಷ್ಟ್ರೀಯ ಜಲ ಮಾರ್ಗದಲ್ಲಿ ಸರಕು ಸಾಗಣೆ, ನಾಗರಿಕರ ಪ್ರಯಾಣಕ್ಕೆ ಬೆದರಿಕೆಯೊಡ್ಡುವ ಅಕ್ರಮಣಕಾರರನ್ನು ಯುನೈಟೆಡ್ ಸ್ಟೇಟ್ಸ್ ಹೊಣೆಗಾರರನ್ನಾಗಿ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಬುಧವಾರ ಇರಾನ್ ಮೇಲೆ ಹೆಚ್ಚಿನ ದಾಳಿಗಳನ್ನು ನಡೆಸಲಾಗಿದೆ. ಮತ್ತೆ ಅವರು ಈ ರೀತಿ ಮಾಡಿದರೆ ಇನ್ನೂ ಕೆಟ್ಟದಾಗುತ್ತದೆ ಎಂದು ತಿಳಿಸಿದ್ದಾರೆ.

ಕಳೆದ ಫೆಬ್ರವರಿ 28ರಂದು ಇರಾನ್ ಮೇಲೆ ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಗಳು ವೈಮಾನಿಕ ದಾಳಿಯನ್ನು ಪ್ರಾರಂಭಿಸಿತ್ತು. ಯುದ್ಧ ಪ್ರಾರಂಭವಾಗುವ ಮೊದಲು ಜಾಗತಿಕ ತೈಲ ಪೂರೈಕೆಯ ಐದನೇ ಒಂದು ಭಾಗ ಹಾದುಹೋಗಿದ್ದ ಜಲಸಂಧಿಯ ಮೇಲೆ ಬಳಿಕ ಟೆಹರಾನ್ ನಿಯಂತ್ರಣ ಮಾಡುತ್ತಿದೆ. ಇದು ಈಗ ಜಾಗತಿಕ ಮಟ್ಟದ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ.

ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್‌ನ ಉನ್ನತ ಭದ್ರತಾ ಸಂಸ್ಥೆಯ ಮೂಲವೊಂದು ಶೀಘ್ರದಲ್ಲೇ ಅಮೆರಿಕದ ನೆಲೆಗಳ ಮೇಲೆ ಟೆಹರಾನ್ ಬೃಹತ್ ದಾಳಿ ನಡೆಸಲಿದೆ ಎಂದು ಹೇಳಿದೆ.

ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅವರ ಹಿರಿಯ ಸಲಹೆಗಾರರೊಬ್ಬರು ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಬರೆದಿದ್ದು, ಆಕ್ರಮಣಕಾರಿ ಶತ್ರು ಮತ್ತು ಅದರ ಸಹಚರರನ್ನು ತೀವ್ರವಾಗಿ ಶಿಕ್ಷಿಸಲಾಗುವುದು ಎಂದು ಹೇಳಿದ್ದಾರೆ.

ಕಳೆದ ಜೂನ್ 17 ರಂದು ಯುದ್ಧ ಕೊನೆಗೊಳಿಸುವ ಕುರಿತು ಸಹಿ ಹಾಕಿದ ತಿಳುವಳಿಕೆ ಒಪ್ಪಂದದ ಬಳಿಕ ಮತ್ತೆ ದಾಳಿ, ಪ್ರತಿದಾಳಿಗಳು ಆರಂಭವಾಗಿದ್ದು, ಮಧ್ಯಪ್ರಾಚ್ಯ ಭಾಗದಲ್ಲಿ ಆತಂಕವನ್ನು ಹೆಚ್ಚಿಸಿದೆ.

ಟರ್ಕಿಯಲ್ಲಿ ಬುಧವಾರ ನಡೆದ ನ್ಯಾಟೋ ಶೃಂಗಸಭೆಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಒಪ್ಪಂದ ಮುಗಿದಿದೆ ಎಂದು ನಾನು ಭಾವಿಸುತ್ತೇನೆ. ನಾನು ಅವರೊಂದಿಗೆ ವ್ಯವಹರಿಸಲು ಬಯಸುವುದಿಲ್ಲ. ಅವರು ಒಪ್ಪಂದ ಮಾಡಿಕೊಂಡರೆ ಅದು ಉಳಿಸಿಕೊಳ್ಳುತ್ತಾರೆ ಎಂಬುದು ಖಚಿತವಿಲ್ಲ. ಅವರು ತುಂಬಾ ಅಪ್ರಾಮಾಣಿಕರು ಎಂಬುದು ತಿಳಿಯಿತು. ಎಂದು ಹೇಳಿದ್ದಾರೆ.

ಪೂರ್ಣ ಪ್ರಮಾಣದ ಯುದ್ಧದ ಬಗ್ಗೆ ಯೋಚಿಸಿಲ್ಲ. ಆದರೆ ಅವರನ್ನು ಶಾಶ್ವತ ಒಪ್ಪಂದಕ್ಕೆ ಬರಲು ಮಾತುಕತೆಗಳು ಮುಂದುವರಿಯುತ್ತವೆಯೇ ಎಂಬುದರ ಬಗ್ಗೆಯೂ ಸ್ಪಷ್ಟವಾಗಿಲ್ಲ. ಏನೇ ನಡೆದರೂ ಇನ್ನು ಬೇಗನೆ ಮುಗಿಯುತ್ತದೆ. ತೈಲವನ್ನು ಸುರಕ್ಷಿತಗೊಳಿಸಲಾಗುತ್ತದೆ ಎಂದರು.

ಇರಾನ್ ಮೇಲೆ ಯುಎಸ್ ಸೇನಾ ಪಡೆಗಳು ದಾಳಿ ನಡೆಸಲು ಪ್ರಾರಂಭಿಸಿದ ಬಳಿಕ ತೈಲ ಬೆಲೆಗಳು ಬ್ಯಾರೆಲ್‌ಗೆ 1 ಡಾಲರ್ ಗಿಂತ ಹೆಚ್ಚು ಏರಿಕೆಯಾಗಿವೆ. ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 79.28 ಡಾಲರ್ ಆಗಿದೆ. ಕಳೆದ ಏಪ್ರಿಲ್ ಅಂತ್ಯದಲ್ಲಿ ಬ್ಯಾರೆಲ್‌ಗೆ 120 ಡಾಲರ್ ತಲುಪಿತ್ತು.

Viral Video: ''ಇದು ಕೇವಲ ಕಾರಲ್ಲ, ಹಲವು ವರ್ಷಗಳ ಕಠಿಣ ಪರಿಶ್ರಮ''; ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರ್‌ ನೋಡಿ ಮಾಲಕ ಭಾವುಕ

ಅಮೆರಿಕ ಸೇನಾ ಪಡೆಗಳು ಇರಾನ್‌ನ ದಕ್ಷಿಣ ಕರಾವಳಿಯ ಮೇಲೆ ದಾಳಿ ನಡೆಸಿದೆ. ಇದರಲ್ಲಿ ಇರಾನ್‌ನ ಅತಿದೊಡ್ಡ ಬಂದರು ಮತ್ತು ಹೊರ್ಮುಜ್ ಜಲ ಸಂಧಿಯಲ್ಲಿರುವ ಪ್ರಮುಖ ನೌಕಾಪಡೆ ಮತ್ತು ಕ್ರಾಂತಿಕಾರಿ ಗಾರ್ಡ್ ಸೌಲಭ್ಯಗಳ ನೆಲೆಯಾಗಿರುವ ಬಂದರ್ ಅಬ್ಬಾಸ್ ಹಾಗೂ ಪಾಕಿಸ್ತಾನದೊಂದಿಗಿನ ಇರಾನ್‌ನ ಗಡಿಯ ಬಳಿಯಿರುವ ನೆರೆಯ ಕರಾವಳಿ ನಗರಗಳಾದ ಕೊನಾರಕ್ ಮತ್ತು ಚಾಬಹಾರ್ ಸೇರಿವೆ. ದಾಳಿಯ ಬಳಿಕ ಸುತ್ತಮುತ್ತಲಿನ ನಗರಗಳ ವಿದ್ಯುತ್ ಕಡಿತಗೊಳಿಸಲಾಯಿತು. ಇರಾನ್‌ಶಹರ್‌ನಲ್ಲಿರುವ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಇರಾನ್‌ನ ಅಕ್ಕಾಲಾ ಪಟ್ಟಣದ ಬಳಿಯ ರೈಲ್ವೆ ಸೇತುವೆಗೆ ಹಾನಿಯಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ವಿದ್ಯಾ ಇರ್ವತ್ತೂರು

View all posts by this author