Viral Video: ''ಇದು ಕೇವಲ ಕಾರಲ್ಲ, ಹಲವು ವರ್ಷಗಳ ಕಠಿಣ ಪರಿಶ್ರಮ''; ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರ್ ನೋಡಿ ಮಾಲಕ ಭಾವುಕ
ವ್ಯಕ್ತಿಯೊಬ್ಬರು ತೀವ್ರ ಪ್ರವಾಹದ ನಡುವೆ ಕಾರನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟ ವಿಡಿಯೊ ವೈರಲ್ ಆಗುತ್ತಿದೆ. ಅತಿಯಾದ ನೀರಿನ ರಭಸದ ನಡುವೆ ತನ್ನ ಪ್ರಾಣವನ್ನು ಲೆಕ್ಕಿಸದೆ ಕಾರನ್ನು ರಕ್ಷಿಸಲು ಅವರು ಮುಂದಾಗಿದ್ದಾರೆ. ಈ ದೃಶ್ಯವು ಆತನಿಗಿದ್ದ ಕಾರಿನ ಮೇಲಿನ ಪ್ರೀತಿಯನ್ನು ಎದ್ದು ತೋರಿಸುವಂತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಪುಣೆಯ ಪ್ರವಾಹದ ನಡುವೆ ಪ್ರಾಣದ ಹಂಗು ತೊರೆದು ಕಾರನ್ನು ಉಳಿಸಿದ ಮಾಲಕ -
ಮುಂಬೈ, ಜು. 8: ಕೆಲವರಿಗೆ ತಾವು ಖರೀದಿಸಿದ ವಸ್ತುಗಳ ಮೇಲೆ ಕಾಳಜಿ ಇರುತ್ತದೆ. ಇದೀಗ ವ್ಯಕ್ತಿಯೊಬ್ಬರು ತೀವ್ರ ಪ್ರವಾಹದ ನಡುವೆ ಕಾರನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟ ವಿಡಿಯೊವೊಂದು ವೈರಲ್ (Viral News) ಆಗುತ್ತಿದೆ. ಪ್ರವಾಸದಲ್ಲಿ ಕೊಚ್ಚಿ ಹೋಗುತ್ತಿರುವ ಕಾರನ್ನು ಉಳಿಸಿಕೊಳ್ಳಲು ಆತ ತನ್ನ ಪ್ರಾಣವನ್ನು ಲೆಕ್ಕಿಸದೆ ಮುಂದಾಗಿದ್ದಾನೆ. ಈ ದೃಶ್ಯವು ಆತನಿಗಿದ್ದ ಕಾರಿನ ಮೇಲಿನ ಪ್ರೀತಿಯನ್ನು ಎದ್ದು ತೋರಿಸುವಂತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಈ ಘಟನೆ ಪುಣೆಯ ಪಿಂಪ್ಲೆ ಗುರವ್ ಎಂಬಲ್ಲಿ ನಡೆದಿದೆ. ಪ್ರವಾಹದ ನೀರಿನಲ್ಲಿ ಸಂಪೂರ್ಣವಾಗಿ ಕಾರ್ ಮುಳುಗಿ ಹೋಗುತ್ತಿದ್ದರೂ ಅದನ್ನು ಉಳಿಸಬೇಕೆಂದು ಜೀವದ ಹಂಗು ತೊರೆದು ಹೋರಾಟ ನಡೆಸಿದ್ದಾನೆ. ವಿಡಿಯೊದಲ್ಲಿ ಪ್ರವಾಹದಲ್ಲಿ ಸಂಪೂರ್ಣ ಮುಳುಗಿರುವ ಕಾರಿನ ಹಿಂಭಾಗವನ್ನು ಆ ವ್ಯಕ್ತಿ ಹಿಡಿದಿರುವುದನ್ನು ಕಾಣಬಹುದು.
ವಿಡಿಯೊ ನೋಡಿ:
ಈ ಭಾವುಕ ದೃಶ್ಯವು ಆ ವ್ಯಕ್ತಿಗೆ ತನ್ನ ವಾಹನದ ಮೇಲಿರುವ ಅಪಾರ ಪ್ರೀತಿ ಮತ್ತು ಕಾಳಜಿಯನ್ನು ಸಾರಿ ಹೇಳಿದೆ. ಕಾರ್ ಪ್ರವಾಹದಲ್ಲಿ ತೇಲುತ್ತಿದೆ. ಎದೆಯ ಆಳದವರೆಗೆ ಆತ ನೀರಿನಲ್ಲಿ ನಿಂತಿದ್ದ ರೂವಾಹನವನ್ನು ಬಿಡಲು ನಿರಾಕರಿಸಿದ್ದಾನೆ. ವಾಹನವು ದೂರ ಹೋಗುವುದನ್ನು ಅಥವಾ ಸಂಪೂರ್ಣವಾಗಿ ಮುಳುಗುವುದನ್ನು ತಡೆಯಲು ವಾಹನದ ಪಕ್ಕದಲ್ಲಿಯೇ ನಿಂತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ಮನುಷ್ಯರಿಗೆ ಮಾತ್ರ ಅಲ್ಲ, ಈಗ ಹುಲಿಗಳಿಗೂ 'ಇಂಟರ್ಮಿಟೆಂಟ್ ಫಾಸ್ಟಿಂಗ್'!
ಮೊದಲ ನೋಟಕ್ಕೆ ಆತ ಕೇವಲ ಕಾರಿನ ಟೈಲ್‌ಗೇಟ್ ಅನ್ನು ಮಾತ್ರ ಹಿಡಿದುಕೊಂಡಿದ್ದಾನೆ ಎನಿಸಿದರೂ ಸೂಕ್ಷ್ಮವಾಗಿ ನೋಡಿದಾಗ ಇಡೀ ಕಾರು ನೀರಿನಲ್ಲಿ ತೇಲುತ್ತಿದ್ದರೂ ಅದನ್ನು ತೇಲಿ ಹೋಗದಂತೆ ತಡೆಯಲು ಎದೆ ಕೊಟ್ಟು ನಿಂತಿರುವುದು ಗೊಚರಿಸುತ್ತದೆ. ಕೆಲವು ಕ್ಷಣಗಳ ನಂತರ, ಕಾರ್ ಹೊರ ತೆಗೆಯಲು ಜೆಸಿಬಿ ಧಾವಿಸಿತು. ಕೊನೆಗೂ ಕಾರನ್ನು ಎಚ್ಚರಿಕೆಯಿಂದ ಪ್ರವಾಹ ಪೀಡಿತ ಪ್ರದೇಶದಿಂದ ಹೊರತೆಗೆಯಲಾಯಿತು.
ಈ ಹೃದಯಸ್ಪರ್ಶಿ ವಿಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಕಾರ್ ಸಾಮಾನ್ಯವಾಗಿ ವರ್ಷಗಳ ಕಠಿಣ ಶ್ರಮದ ಫಲ. ಈ ಬಗ್ಗೆ ನೆಟ್ಟಿಗರು ತಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ''ಆ ಕಾರಿನ ಮೌಲ್ಯವೇನು ಎಂಬುದು ಕಷ್ಟಪಟ್ಟು ಖರೀದಿಸಿದ ಮಾಲಕನಿಗೆ ಮಾತ್ರ ಗೊತ್ತು'' ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಇವರ ಧೈರ್ಯಕ್ಕೆ ಮೆಚ್ಚಲೇ ಬೇಕು. ಬೇರೆ ಯಾರೇ ಇದ್ದರೂ ಕಾರನ್ನು ಉಳಿಸಿ ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲʼʼ ಎಂದು ಬರೆದುಕೊಂಡಿದ್ದಾರೆ.