ಟೆಹರಾನ್: ಹೊರ್ಮುಜ್ ಜಲಮಾರ್ಗದಲ್ಲಿ (Strait of Hormuz) ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Islamic Revolutionary Guard Corps) ಸರಕು ಸಾಗಣೆಯ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಅಮೆರಿಕನ್ ಪಡೆಗಳು (US Central Command) ಟೆಹರಾನಲ್ಲಿ (Tehran) ಮದುವೆ ಸಮಾರಂಭದ ಮೇಲೆ ದಾಳಿ ನಡೆಸಿದೆ. ಇದರಿಂದ ಒಂದು ಮಗು ಸೇರಿದಂತೆ ಸುಮಾರು ನಾಲ್ಕು ಮಾಡಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ದಾಳಿಗೆ ಪ್ರತಿಕ್ರಿಯಿಸಿರುವ ಇರಾನ್ ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ (Supreme Leader Mojatba Khamenei ) ಅವರು ಅಮೆರಿಕ ಈ ದಾಳಿಗೆ ಪ್ರತಿಯಾಗಿ ಮರೆಯಲಾಗದ ಪಾಠವನ್ನು ಕಲಿಯಲಿದೆ. ಖಂಡಿತಾ ಇದಕ್ಕಾಗಿ ಅಮೆರಿಕ ವಿಷಾದಿಸುತ್ತದೆ. ಅಮೆರಿಕ ಪಡೆಗಳಿಗೆ ಕಠಿಣ ಶಿಕ್ಷೆ ವಿಧಿಸಲು ಇರಾನ್ ಪಡೆಗಳು ಸಿದ್ಧವಾಗಿವೆ ಎಂದು ಹೇಳಿದ್ದಾರೆ.
ಹೊರ್ಮುಜ್ ಜಲಮಾರ್ಗದಲ್ಲಿ ಇರಾನ್ ಸರಕು ಸಾಗಣೆ ಹಡಗಿನ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಅಮೆರಿಕನ್ ಪಡೆಗಳು ಇರಾನ್ ಮೇಲೆ ರಾತ್ರೋರಾತ್ರಿ ದಾಳಿ ನಡೆಸಿರುವುದಾಗಿ ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಪ್ರಧಾನಿ ಮೋದಿ ಮತ್ತೆ ಸ್ವದೇಶಿ ಮಂತ್ರ : ವಿದೇಶದಲ್ಲಿ ಮದುವೆ, ಬಂಗಾರ ಖರೀದಿ ಬೇಡ
ಈ ದಾಳಿಯ ಸಂದರ್ಭದಲ್ಲಿ ಅಮೆರಿಕದ ಕ್ಷಿಪಣಿ ದಾಳಿಯ ತುಣುಕುಗಳು ದಕ್ಷಿಣ ಇರಾನ್‌ನ ಸಿರಿಕ್‌ನಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದ ಮನೆ ಮೇಲೆ ಬಿದ್ದಿದ್ದು, ಇದರಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಸೇನಾ ನೆಲೆಗಳಿರುವ ಬಹ್ರೇನ್, ಕುವೈತ್ ಮತ್ತು ಜೋರ್ಡಾನ್ ಮೇಲೆ ಇರಾನ್ ದಾಳಿ ನಡೆಸಲಿದೆ ಎಂದು ತಿಳಿಸಿದೆ.
ಇರಾನ್ ಮೇಲೆ ಅಮೆರಿಕನ್ ಪಡೆಗಳು ನೇರ ದಾಳಿ ನಡೆಸಿದ ಬಳಿಕ ಮೊದಲ ಬಾರಿಗೆ ಸಂದೇಶ ನೀಡಿರುವ ಇರಾನ್ ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ, ಇರಾನ್‌ನ ಸಶಸ್ತ್ರ ಪಡೆಗಳು ವಾಷಿಂಗ್ಟನ್‌ಗೆ ಮರೆಯಲಾಗದ ಪಾಠಗಳನ್ನು ಕಲಿಸಲಿದೆ. ಇದಕ್ಕಾಗಿ ವಾಷಿಂಗ್ಟನ್ ವಿಷಾದಿಸಲಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಐಆರ್ ಜಿಸಿ ವಕ್ತಾರ ಹೊಸೇನ್ ಮೊಹೆಬಿ ಅವರು ಪೋಸ್ಟ್ ಮಾಡಿದ್ದೂ, ಅಮೆರಿಕನ್ ಪಡೆಗಳಿಗೆ ಕಠಿಣ ಶಿಕ್ಷೆ ಕಾಯುತ್ತಿದೆ ಎಂದು ಹೇಳಿದ್ದಾರೆ.
ಇರಾನ್ ಮೇಲೆ ವಾಷಿಂಗ್ಟನ್ ಭಾನುವಾರ ಹೊಸ ದಾಳಿಗಳನ್ನು ನಡೆಸಿದ ಬಳಿಕ ಸಂಘರ್ಷ ತೀವ್ರಗೊಂಡಿದೆ. ಹಲವಾರು ವಾರಗಳ ಬಳಿಕ ಮೊದಲ ಬಾರಿಗೆ ತೀವ್ರ ರೀತಿಯ ದಾಳಿಗಳನ್ನು ನಡೆಸಲಾಗಿದೆ. ಇದಕ್ಕೆ ಪ್ರತಿಯಾಗಿ ಟೆಹರಾನ್ ಕೂಡ ಜೋರ್ಡಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಯುಎಸ್ ಪಡೆಗಳನ್ನು ಗುರಿಯಾಗಿಸಿಕೊಂಡು ಎರಡು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದೆ.
ಮತ್ತೆ ಮಂಗಳವಾರ ಯುಎಸ್ ದಾಳಿ ನಡೆಸಿದ್ದು, ಹೊರ್ಮುಜ್ ಜಲಸಂಧಿಯ ಉದ್ದಕ್ಕೂ ಮತ್ತು ಕೊಲ್ಲಿಯ ದ್ವೀಪದಲ್ಲಿ ಭಾರಿ ಸ್ಫೋಟಗಳು ಕೇಳಿಬಂದಿವೆ. ಯುಎಸ್ ಪಡೆಗಳು ದಕ್ಷಿಣ ಪ್ರಾಂತ್ಯದ ಕೆರ್ಮನ್‌ನಲ್ಲಿರುವ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿವೆ. ಸಿರಿಕ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದ ಹೊರತಾಗಿ ಚಬಹಾರ್ ಮತ್ತು ಕೊನಾರಕ್ ಕೌಂಟಿಗಳೊಳಗೆ ಕೂಡ ದಾಳಿ ನಡೆಸಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಯುಎಸ್ ಮಿಲಿಟರಿಯು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎನ್ನಲಾದ ಇರಾನ್ ವರದಿಗಳನ್ನು ನಿರಾಕರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್, ಐಆರ್‌ಜಿಸಿಯಂತೆ ಯುಎಸ್ ಮಿಲಿಟರಿ ಎಂದಿಗೂ ನಾಗರಿಕರನ್ನು ಗುರಿಯಾಗಿಸುವುದಿಲ್ಲ. ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಮತ್ತು ಈ ಪ್ರದೇಶಕ್ಕೆ ನಿಯೋಜಿಸಲಾದ ಅಮೆರಿಕನ್ ಸೇವಾ ಸದಸ್ಯರ ವಿರುದ್ಧ ಮೇಲೆ ಇರಾನ್ ರೆವಲ್ಯೂಷನರಿ ಗಾರ್ಡ್‌ಗಳು ದಾಳಿ ನಡೆಸಿರುವುದಾಗಿ ಅವರು ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇದಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮ ಖಾತೆ ಟ್ರುತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿ, ಇರಾನ್ ದಾಳಿಗೆ ಪ್ರತೀಕಾರ ತೀರಿಸಿಕೊಂಡರೆ ಅವರ ಮೇಲೆ ಮತ್ತೆ ಕಠಿಣ ಮತ್ತು ಉನ್ನತ ಮಟ್ಟದಲ್ಲಿ ದಾಳಿ ನಡೆಯಲಿದೆ. ಅದರ ಬಳಿಕ ಇರಾನ್ ಇಸ್ಲಾಮಿಕ್ ಗಣರಾಜ್ಯ ಉಳಿದಿರುವುದಿಲ್ಲ ಎಂದು ತಿಳಿಸಿದ್ದಾರೆ.
ಎಐ ತಂತ್ರಜ್ಞಾನ, ಸಂಶೋಧನೆಗೆ NCERT ಒತ್ತು ನೀಡಲಿ: ಸಚಿವ ಪ್ರಲ್ಹಾದ್ ಜೋಶಿ ಕರೆ
ಯುಎಸ್ ದಾಳಿಗೆ ಪ್ರತಿಕಾರವಾಗಿ ಇರಾನ್ ಜೋರ್ಡಾನ್‌ನಲ್ಲಿರುವ ಯುಎಸ್ ಮೆರೈನ್ ಕಾರ್ಪ್ಸ್ ಬೇಸ್ ಕ್ಯಾಂಪ್ ಟಿಟಿನ್ ಮೇಲೆ ದಾಳಿ ನಡೆಸಿದೆ, ಇದನ್ನು ತಡೆದಿರುವುದಾಗಿ ಜೋರ್ಡಾನ್ ಸೇನೆ ತಿಳಿಸಿದೆ. ಕುವೈತ್ ಮತ್ತು ಬಹ್ರೇನ್‌ನಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಾಗಿವೆ. ಬಹ್ರೇನ್‌ನಲ್ಲಿ, ಆಂತರಿಕ ಸಚಿವಾಲಯವು ಈ ಕುರಿತು ನಾಗರಿಕರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ.