ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಧಾನಿ ಮೋದಿ ಮತ್ತೆ ಸ್ವದೇಶಿ ಮಂತ್ರ :‌ ವಿದೇಶದಲ್ಲಿ ಮದುವೆ, ಬಂಗಾರ ಖರೀದಿ ಬೇಡ

ಭಾರತದ ಜಿಡಿಪಿ ಏಪ್ರಿಲ-ಜೂನ್ ತ್ರೈಮಾಸಿಕ ದಲ್ಲಿ ಶೇ.7.8ರಷ್ಟು ಅಸಾಧಾರಣ ಬೆಳವಣಿಗೆ ಸಾಧಿಸಿರುವು ದಕ್ಕೆ ಮೋದಿ ಅವರು ದೇಶದ ಜನತೆಯನ್ನು ಅಭಿನಂದಿಸಿದ್ದಾರೆ. ಜೊತೆಗೆ ಆತ್ಮನಿರ್ಭರ ಭಾರತ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ. ಪ್ರಸ್ತುತ ಅವರು ಕಿರ್ಗಿಸ್ತಾನ್ ಪ್ರವಾಸದಲ್ಲಿದ್ದಾರೆ.

ಪ್ರಧಾನಿ ಮೋದಿ ಮತ್ತೆ ಸ್ವದೇಶಿ ಮಂತ್ರ

-

Profile
Ashok Nayak Sep 2, 2026 8:44 AM

ದೇಶದ ಶೇ.7.8 ಜಿಡಿಪಿ ಪ್ರಗತಿಗೆ ಹರ್ಷ

ದುಸ್ಥಿತಿಯಲ್ಲೂ ದೇಶದ ಸಾಧನೆಗೆ ಖುಷ್

ದೆಹಲಿ: ಅಗತ್ಯ ಇದ್ದರಷ್ಟೇ ಚಿನ್ನವನ್ನು ಖರೀದಿಸಿ, ಮನರಂಜನೆಗಾಗಿಯೇ ವಿದೇಶಗಳಿಗೆ ಹೋಗ ಬೇಡಿ, ಹೊರದೇಶಗಳಲ್ಲಿ ಮದುವೆ ಬೇಡ. ಗರಿಷ್ಠ ಪ್ರಮಾಣದಲ್ಲಿ ದೇಶೀಯ ಉತ್ಪನ್ನಗಳನ್ನು ಬಳಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

ನೀಟ್ ಪರೀಕ್ಷೆಯಲ್ಲಿನ ಅಕ್ರಮ, ದೆಹಲಿಯ ಜಂತರ್ ಮಂತರ್ ನಲ್ಲಿ ಜೆನ್-ಝೀಗಳ ಪ್ರತಿಭ ಟನೆ ಸಂದರ್ಭದಲ್ಲಿ ರಾತ್ರಿ ವೇಳೆ ಸರಣಿ ವಿಡಿಯೋ ಮೂಲಕ ಜನರನ್ನುದ್ದೇಶಿಸಿ ಮಾತಾಡಿದ್ದ ಮೋದಿ, ಮಂಗಳವಾರ ಇನ್ಸ್ಟಾಗ್ರಾಮ್ ಬಳಸಿ ದೇಶದ ಆರ್ಥಿಕತೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಭಾರತದ ಜಿಡಿಪಿ ಏಪ್ರಿಲ್-ಜೂನ್ ತ್ರೈಮಾಸಿಕ ದಲ್ಲಿ ಶೇ.7.8ರಷ್ಟು ಅಸಾಧಾರಣ ಬೆಳವಣಿಗೆ ಸಾಧಿಸಿರುವುದಕ್ಕೆ ಮೋದಿ ಅವರು ದೇಶದ ಜನತೆಯನ್ನು ಅಭಿನಂದಿಸಿದ್ದಾರೆ. ಜೊತೆಗೆ ಆತ್ಮನಿರ್ಭರ ಭಾರತ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ. ಪ್ರಸ್ತುತ ಅವರು ಕಿರ್ಗಿಸ್ತಾನ್ ಪ್ರವಾಸದಲ್ಲಿದ್ದಾರೆ.

ಇದನ್ನೂ ಓದಿ: Modi-Putin: ಮೋದಿ- ಪುಟಿನ್ ಮಧ್ಯೆ ದ್ವಿಪಕ್ಷಿಯ ಒಪ್ಪಂದ; ವಿಷನ್ 2030 ಒಪ್ಪಂದಕ್ಕೆ ಸಹಿ

ದೇಶದ ಜನತೆಗೆ ಅನಂತ ಧನ್ಯವಾದಗಳು. ಶೇ.7.8ರಷ್ಟು ಜಿಡಿಪಿ ಬೆಳವಣಿಗೆಯು ದೇಶದಲ್ಲಿ ಸಂತಸ ಮೂಡಿಸಿದೆ. ದೇಶವಾಸಿಗಳ ಸಂಕಲ್ಪ ಶಕ್ತಿ ಮತ್ತು ಕಠಿಣ ಪರಿಶ್ರಮಕ್ಕೆ ನನ್ನ ಅಭಿನಂದನೆಗಳು ಎಂದಿದ್ದಾರೆ. ವಿಶ್ವಾದ್ಯಂತ ಪ್ರಕ್ಷುಬ್ಧ ವಾತಾವರಣವಿರುವ ಈ ಕಠಿಣ ಸಂದರ್ಭದಲ್ಲೂ ಭಾರತ ಈ ಬೃಹತ್ ಸಾಧನೆ ಮಾಡಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಇಡೀ ವಿಶ್ವವೇ ಯುದ್ಧದ ಕಾರ್ಮೋಡ ದಲ್ಲಿ ಮುಳುಗಿದೆ. ಸುತ್ತಲೂ ಯುದ್ಧದ ಸುದ್ದಿಗಳೇ ಕೇಳಿಬರುತ್ತಿವೆ ಮತ್ತು ಜಗತ್ತು ಬಿಕ್ಕಟ್ಟುಗಳಿಂದ ಸುತ್ತುವರಿದಿದೆ.

ಸರಕು ಪೂರೈಕೆ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. 2020ರ ಕೋವಿಡ್ ಸಾಂಕ್ರಾ ಮಿಕದ ದಿನಗಳಿಂದ ಇಂದಿನವರೆಗೂ ಜಗತ್ತಿನ ಎಲ್ಲಿಯೂ ಸ್ಥಿರತೆ ಕಾಣಿಸುತ್ತಿಲ್ಲ. ಆದಾಗ್ಯೂ, ಭಾರತವು ವೇಗದ ಗತಿಯಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು. ಖರೀದಿ ಅಥವಾ ಪ್ರವಾಸದ ಸಂದರ್ಭದಲ್ಲಿ ಸ್ವದೇಶಿ ವಸ್ತುಗಳು ಮತ್ತು ಸೇವೆಗಳಿಗೆ ಒತ್ತು ನೀಡುವಂತೆ ಪ್ರಧಾನಿ ನಾಗರಿಕರಿಗೆ ಕರೆ ನೀಡಿದರು. ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮಗಳಿಂದ ಭಾರತವನ್ನು ರಕ್ಷಿಸಲು ಕೆಲ ತಿಂಗಳು ಗಳ ಹಿಂದೆ ಮಾಡಿದ್ದ ಮನವಿ ಯನ್ನು ಅವರು ಮತ್ತೊಮ್ಮೆ ಪುನರುಚ್ಚರಿಸಿದರು.

ಪ್ರವಾಸೋದ್ಯಮಕ್ಕಾಗಿ ವಿದೇಶಗಳಿಗೆ ಹೋಗಬೇಡಿ. ವಿದೇಶಗಳಲ್ಲಿ ಅದ್ಧೂರಿ ಮದುವೆಗಳನ್ನು ತಪ್ಪಿಸಿ. ನಾವೆಲ್ಲರೂ ಭಾರತದಲ್ಲೇ ಮದುವೆ ಯಾಗುವ ಮಂತ್ರವನ್ನು ಪಠಿಸಬೇಕು. ಅಗತ್ಯವಿದ್ದರೆ ಮಾತ್ರ ಚಿನ್ನವನ್ನು ಖರೀದಿಸಿ. ನಾವು ಎಷ್ಟರ ಮಟ್ಟಿಗೆ ಸ್ಥಳೀಯ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುತ್ತೇವೆ ಯೋ, ಅಷ್ಟೇ ವೇಗವಾಗಿ ಭಾರತ ಅಭಿವೃದ್ಧಿ ಹೊಂದಲಿದೆ. ಸ್ವಾವಲಂಬನೆಗೆ ಇದೇ ರೀತಿ ಒತ್ತು ನೀಡಿದರೆ, ಸ್ವಾತಂತ್ರ್ಯದ 100ನೇ ವರ್ಷಕ್ಕೆ ಕಾಲಿಡುವ ವೇಳೆಗೆ ನಮ್ಮ ಯುವಜನತೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ಹಸ್ತಾಂತರಿಸ ಲಿದ್ದೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದರು.

ಮೋದಿಯನ್ನು ಅವಮಾನಿಸಲೆತ್ನಿಸಿ ಅಪಹಾಸ್ಯಕ್ಕೊಳಗಾದ ಪಾಕ್ ಪ್ರಧಾನಿ

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪದೇಪದೆ ಮುಖಭಂಗ ಅನುಭವಿಸುವುದನ್ನೇ ಹವ್ಯಾಸ ಮಾಡಿ ಕೊಂಡಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈಗ ಮತ್ತೊಮ್ಮೆ ನಗೆಪಾಟಲಿ ಗೀಡಾಗಿ ದ್ದಾರೆ. ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯ ಅಧಿಕೃತ ಸಾಮೂಹಿಕ ಚಿತ್ರದಿಂದ ಭಾರತದ ಪ್ರಧಾನಿ ಮೋದಿಯನ್ನೇ ಕತ್ತರಿಸಿ ಹಾಕಿದ್ದಾರೆ. ಮೋದಿಯನ್ನೇ ಕಾಣದಂತೆ ಮಾಡಿದ ಚಿತ್ರದಲ್ಲಿ ಪಾಕ್ ಪ್ರಧಾನಿ ಶರೀಫ್ ಅವರೇ ಕೇಂದ್ರದಲ್ಲಿ ನಿಂತಂತೆ ಕಾಣಿಸುತ್ತಿದೆ. ಶಿಷ್ಟಾಚಾರದ ಪ್ರಕಾರದ ಆತಿಥೇಯ ದೇಶದ ನಾಯಕರು ಮಧ್ಯದಲ್ಲಿ ನಿಲ್ಲುತ್ತಾರೆ.‌

ಉಗ್ರರಿಗೆ ಆಶ್ರಯ ನೀಡುವ ದೇಶಗಳನ್ನು ಸಹಿಸಲ್ಲ : ಮೋದಿ

ಕಿಡಿ ಬಿಷ್ಕೆಕ್: ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಭೆಯಲ್ಲಿ, ಪಾಕಿಸ್ತಾನದ ಉಗ್ರವಾದಕ್ಕೆ ಬೆಂಬಲ ನೀಡಬಾರದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ವಾಕ್ಪ್ರಹಾರ ನಡೆಸಿದ್ದಾರೆ. ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಎದುರೇ, ಆ ದೇಶದ ಪರ ನಿಲ್ಲಬೇಡಿ ಎಂಬ ಸಂದೇಶವನ್ನು ಜಗತ್ತಿನ ಇತರೆ ರಾಷ್ಟ್ರಗಳಿಗೆ ಮೋದಿ ರವಾನಿಸಿದ್ದಾರೆ. ಭಯೋತ್ಪಾದನೆಯ ಸಂಪೂರ್ಣ ವ್ಯವಸ್ಥೆಯನ್ನೇ ಕಿತ್ತೊಗೆಯುವ ಅಗತ್ಯವಿದೆ. ಈ ವಿಚಾರದಲ್ಲಿ ದ್ವಂದ್ವಕ್ಕೆ ಅವಕಾಶ ವಿಲ್ಲ. ಭಯೋತ್ಪಾದನೆಯನ್ನು ನೀತಿಯ ಸಾಧನವಾಗಿ ಬಳಸುವ ಮತ್ತು ಉಗ್ರರಿಗೆ ಆಶ್ರಯ ನೀಡುವ ರಾಷ್ಟ್ರಗಳ ವಿರುದ್ಧ ಕಠಿಣ ಸಂದೇಶ ರವಾನಿಸಬೇಕು ಎಂದಿದ್ದಾರೆ.