ವಾಷಿಂಗ್ಟನ್: ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಪ್ರಾಂಭವಾಗಿರುವ ಇಸ್ರೇಲ್, ಯುಎಸ್ ಮತ್ತು ಇರಾನ್ (iran war) ನಡುವಿನ ಸಂಘರ್ಷ್ ಶಾಂತಿ ಮಾತುಕತೆಯ (Peace Talks) ನಡುವೆಯೂ ಮುಂದುವರಿದಿದೆ. ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿದ್ದು, ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಾಕಿಸ್ತಾನ (Pakistan) ತನ್ನ ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸಿದೆ. ಈ ನಡುವೆಯೇ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಅಂತಾರಾಷ್ಟ್ರೀಯ ಸಮುದ್ರ ಸಂಚಾರಕ್ಕೆ ಬೆದರಿಕೆಯೊಡ್ಡುತ್ತಿದ್ದ ಇರಾನಿನ ಎರಡು ಡ್ರೋನ್ ಗಳನ್ನು ಹೊಡೆದುರುಳಿಸಿರುವುದಾಗಿ ಯುಎಸ್ ಸೆಂಟ್ರಲ್ ಕಮಾಂಡ್ (US Central Command) ತಿಳಿಸಿದೆ.
ಈ ಕುರಿತು ಭಾನುವಾರ ಸಾಮಾಜಿಕ ಮಾಧ್ಯಮದ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಯುಎಸ್ ಸೆಂಟ್ರಲ್ ಕಮಾಂಡ್, ಹೊರ್ಮುಜ್ ಜಲಸಂಧಿಯಲ್ಲಿ ಅಂತಾರಾಷ್ಟ್ರೀಯ ಸಮುದ್ರ ಸಂಚಾರಕ್ಕೆ ಬೆದರಿಕೆ ಒಡ್ಡುತ್ತಿದ್ದ ಎರಡು ಇರಾನಿನ ಡ್ರೋನ್ ಗಳನ್ನು ಅಮೆರಿಕ ಪಡೆಗಳು ತಡೆದು ನಾಶಪಡಿಸಿವೆ ಎಂದು ಹೇಳಿದೆ.
ಕಲಬುರಗಿಯಲ್ಲಿ ಭಾರಿ ಮಳೆಯ ಆರ್ಭಟ: ಸೇತುವೆ ಕುಸಿತ, ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ
ಅಮೆರಿಕನ್ ಪಡೆಗಳು ಮಧ್ಯಪ್ರಾಚ್ಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಯಕಟ್ಟಿನ ಭಾಗದಲ್ಲಿ ಅಂತಾರಾಷ್ಟ್ರೀಯ ಸರಕು ಸಾಗಣೆಗೆ ಪ್ರಮುಖ ದಾರಿಯಾಗಿರುವ ಹೊರ್ಮುಜ್ ಜಲಮಾರ್ಗದಲ್ಲಿ ಇರಾನಿನ ಎರಡು ಡ್ರೋನ್ ಗಳು ಏಕಮುಖ ದಾಳಿ ನಡೆಸಿದ್ದವು. ಇದನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಯಿತು ಎಂದು ತಿಳಿಸಿದೆ.
ಈ ಭಾಗದಲ್ಲಿ ಯುಎಸ್ ಪಡೆಗಳು ಹೆಚ್ಚಿನ ಎಚ್ಚರಿಕೆಯಲ್ಲಿವೆ. ಬೆದರಿಕೆಗಳಿಗೆ ಪ್ರತಿಕ್ರಿಯಿಸಲು ಸದಾ ಸಿದ್ಧವಾಗಿವೆ. ಇರಾನಿನ ಆಕ್ರಮಣದ ವಿರುದ್ಧ ಜಲ ಮಾರ್ಗದಲ್ಲಿ ರಕ್ಷಣೆ ನೀಡಲು ಸಿದ್ಧವಾಗಿವೆ.
ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು ಶನಿವಾರ ಟೆಹ್ರಾನ್‌ಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ನಖ್ವಿ ಅವರು ಇದು ಮೂರನೇ ಬಾರಿ ಇರಾನ್‌ಗೆ ಭೇಟಿ ನೀಡುತ್ತಿದ್ದಾರೆ. ಎರಡೂ ದೇಶಗಳ ನಡುವಿನ ಘರ್ಷಣೆಯನ್ನು ಕಡಿಮೆ ಮಾಡುವಲ್ಲಿ ಪಾಕಿಸ್ತಾನದ ಸಕ್ರಿಯ ಪಾತ್ರವನ್ನು ಇದು ಎತ್ತಿ ತೋರಿಸಿದೆ.
ನೀಟ್ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ? NAT ಹೇಳಿದ್ದೇನು?
ಇರಾನ್ ರಾಜಧಾನಿಗೆ ಶನಿವಾರ ಬಂದಿಳಿದ ನಖ್ವಿ ಅವರನ್ನು ಇರಾನಿನ ಆಂತರಿಕ ಸಚಿವ ಎಸ್ಕಂದರ್ ಮೊಮೆನಿ ಸ್ವಾಗತಿಸಿದರು. ಬಳಿಕ ಅವರು ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಸೇರಿದಂತೆ ಹಲವಾರು ಹಿರಿಯ ಇರಾನಿನ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.