ನೀಟ್ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ? NAT ಹೇಳಿದ್ದೇನು?
NEET-UG 2026 ಮರುಪರೀಕ್ಷಾ ಪ್ರಶ್ನೆಪತ್ರಿಕೆಯ ಸೋರಿಕೆ ಅಥವಾ ಮಾರಾಟದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸುದ್ದಿಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಳ್ಳಿ ಹಾಕಿದೆ. ಇಂತಹ ಸುದ್ದಿಗಳನ್ನು "ಸುಳ್ಳು" ಮತ್ತು "ಮೋಸದ" ಹೇಳಿಕೆಗಳು ಎಂದು ಕರೆದಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸುಳ್ಳು ಸುದ್ದಿಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: NEET-UG 2026 ಮರುಪರೀಕ್ಷಾ ಪ್ರಶ್ನೆಪತ್ರಿಕೆಯ ಸೋರಿಕೆ ಅಥವಾ ಮಾರಾಟದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸುದ್ದಿಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಳ್ಳಿ ಹಾಕಿದೆ. ಇಂತಹ ಸುದ್ದಿಗಳನ್ನು "ಸುಳ್ಳು" ಮತ್ತು "ಮೋಸದ" ಹೇಳಿಕೆಗಳು ಎಂದು ಕರೆದಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸುಳ್ಳು ಸುದ್ದಿಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. X ನಲ್ಲಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎನ್ ಟಿಎ, NEET-UG 2026 ಮರುಪರೀಕ್ಷಾ ಪತ್ರಿಕೆಯ "ಸೋರಿಕೆ", ಅಥವಾ "ಮಾರಾಟ" ಎಂದು ಹೇಳುವ ಸಂದೇಶಗಳು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ದಾರಿತಪ್ಪಿಸುವ ಗುರಿಯನ್ನು ಹೊಂದಿವೆ ಎಂದು ಸಂಸ್ಥೆ ಹೇಳಿದೆ.
"ಈ ಹೇಳಿಕೆಗಳು ಸುಳ್ಳು, ಮೋಸದ ಮತ್ತು ದಾರಿತಪ್ಪಿಸುವ ಉದ್ದೇಶವನ್ನು ಹೊಂದಿವೆ" ಎಂದು ಎನ್‌ಟಿಎ ಹೇಳಿದೆ, ನಕಲಿ ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡುವ ಮೂಲಕ ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳ ಆತಂಕವನ್ನು ಬಳಸಿಕೊಳ್ಳಲು ಪ್ರಯತ್ನಿಸುವ "ಸಂಘಟಿತ ವಂಚನೆ ದಂಧೆಗಳು" ಇಂತಹ ವಿಷಯವನ್ನು ಪ್ರಸಾರ ಮಾಡುತ್ತಿವೆ ಎಂದು ಸೇರಿಸಿದೆ. ನಕಲಿ 'ಪ್ರಶ್ನೆಪತ್ರಿಕೆಗಳನ್ನು' ಮಾರಾಟ ಮಾಡುವ ಮೂಲಕ ಹಣವನ್ನು ಸುಲಿಗೆ ಮಾಡುವುದು ಅವರ ಉದ್ದೇಶವಾಗಿದೆ ಮತ್ತು ಅಂತಹ ಪ್ರತಿಯೊಂದು ಹೇಳಿಕೆಗಳ ಪ್ರಸಾರ ಕಟ್ಟುಕಥೆಯಾಗಿದೆ" ಎಂದು ಸಂಸ್ಥೆ ಸೇರಿಸಿದೆ.
ಅಭ್ಯರ್ಥಿಗಳು ಮತ್ತು ಪೋಷಕರು ಇಂಥಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಅಥವಾ ಇಂಥಹ ಸಂದೇಶಗಳನ್ನು ಫಾರ್ವರ್ಡ್ ಮಾಡಬಾರದು ಮತ್ತು ಈ "ವಂಚನೆಯ ಮನವಿಗಳಿಗೆ" ಬಲಿಯಾಗಬಾರದು ಎಂದು ಎನ್ ಟಿಎ ಕರೆ ನೀಡಿದೆ. ಸಂಸ್ಥೆಯ ಪರಿಶೀಲಿಸಿದ ಚಾನೆಲ್‌ಗಳ ಮೂಲಕ ಹೊರಡಿಸಲಾದ ಅಧಿಕೃತ ಸಂವಹನಗಳನ್ನು ಮಾತ್ರ ಅವಲಂಬಿಸುವಂತೆಯೂ ವಿದ್ಯಾರ್ಥಿಗಳಿಗೆ ಎನ್‌ಟಿಎ ಹೇಳಿದೆ.
"ಎಲ್ಲಾ ಆಕಾಂಕ್ಷಿಗಳು ಈ ವದಂತಿಗಳನ್ನು ನಿರ್ಲಕ್ಷಿಸುವಂತೆ ಮತ್ತು ಎನ್‌ಟಿಎ ತನ್ನ ಪರಿಶೀಲಿಸಿದ ವೆಬ್‌ಸೈಟ್ ಮತ್ತು ಚಾನೆಲ್‌ಗಳ ಮೂಲಕ ನೀಡುವ ಅಧಿಕೃತ ಸಂವಹನವನ್ನು ಮಾತ್ರ ಅವಲಂಬಿಸುವಂತೆ ನಾವು ಒತ್ತಾಯಿಸುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.