ಹವಾಮಾನ ವೈಪರೀತ್ಯ: ಇಂಗ್ಲೆಂಡ್‌ನಲ್ಲಿ ಎರಡು ಏರ್ ಇಂಡಿಯಾ ವಿಮಾನಗಳಿಗೆ ಪರ್ಯಾಯ ವ್ಯವಸ್ಥೆ
ಮುಂಬೈ ಮತ್ತು ಅಮೃತಸರದಿಂದ ಯುಕೆಗೆ ಹೊರಟಿದ್ದ ಎರಡು ಏರ್ ಇಂಡಿಯಾ ವಿಮಾನಗಳಿಗೆ ನಿಗದಿತ ಸ್ಥಳಗಳಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದೇ ಇದ್ದುದರಿಂದ ಬೇರೆಡೆಗೆ ತೆರಳಿರುವ ಘಟನೆ ನಡೆದಿದೆ. ಹವಾಮಾನ ವೈಪರೀತ್ಯದಿಂದಾಗಿ ಎರಡು ಏರ್ ಇಂಡಿಯಾ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
(ಸಂಗ್ರಹ ಚಿತ್ರ) -
ನವದೆಹಲಿ: ಭಾರತದಿಂದ ಯುನೈಟೆಡ್ ಕಿಂಗಡಮ್ (India to UK) ಗೆ ತೆರಳಿದ ಎರಡು ಏರ್ ಇಂಡಿಯಾ ವಿಮಾನಗಳಿಗೆ (Air india flight) ಹವಾಮಾನ ವೈಪರೀತ್ಯದಿಂದಾಗಿ ನಿಗದಿತ ಸ್ಥಳದಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ವಿಮಾನಗಳು ಬೇರೆ ಕಡೆಗೆ ತಿರುಗಿಸಲಾಯಿತು. ಮುಂಬೈ (Mumbai) ಮತ್ತು ಅಮೃತಸರದಿಂದ (Amritsar) ಯುಕೆಗೆ ಹೊರಟಿದ್ದ ಎರಡು ಏರ್ ಇಂಡಿಯಾ ವಿಮಾನಗಳನ್ನು ಪ್ರತಿಕೂಲ ಹವಾಮಾನದಿಂದಾಗಿ ಯುಕೆಯಲ್ಲಿ ಬೇರೆ ಹತ್ತಿರದ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ ಎಂದು ಭಾರತೀಯ ವಿಮಾನಯಾನ ಸಂಸ್ಥೆ ಗುರುವಾರ ತಿಳಿಸಿದೆ.
ಮುಂಬೈನಿಂದ ಲಂಡನ್ ಹೀಥ್ರೂಗೆ ಮತ್ತು ಅಮೃತಸರದಿಂದ ಬರ್ಮಿಂಗ್ ಹ್ಯಾಮ್‌ಗೆ ತೆರಳಿದ್ದ ಏರ್ ಇಂಡಿಯಾದ ಎರಡು ವಿಮಾನಗಳು ಗುರುವಾರ ಭಾರತದಿಂದ ಹೊರಟಿದ್ದವು. ಪ್ರತಿಕೂಲ ಹವಾಮಾನದ ಕಾರಣದಿಂದ ಯುಕೆಯಲ್ಲಿ ಅವುಗಳನ್ನು ಬೇರೆಡೆಗೆ ತಿರುಗಿಸಲಾಯಿತು.
Bomb Threat: ಬೆಂಗಳೂರಿನ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ; ಸ್ಥಳದಲ್ಲಿ ಆತಂಕ
Airplanes struggled to land at London's Heathrow Airport due to heavy winds from Storm Gerrit on Wednesday. pic.twitter.com/Vu3HNKMNuy
— AccuWeather (@accuweather) December 28, 2023
ಮುಂಬೈನಿಂದ ಲಂಡನ್ ಹೀಥ್ರೂಗೆ ಹೊರಟಿದ್ದ ಎI131 ಬೋಯಿಂಗ್ 777 ವಿಮಾನವನ್ನು ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಲಂಡನ್ ನ ಗ್ಯಾಟ್ವಿಕ್‌ಗೆ ತಿರುಗಿಸಲಾಯಿತು. ಇದು ಕೆಲ ಕಾಲ ಹೀಥ್ರೂ ಮೇಲೆ ನಿಂತು ಲ್ಯಾಂಡಿಂಗ್ ಗೆ ಕಾಯುತ್ತಿತ್ತು. ಆದರೆ ಕೊನೆಗೆ ಗ್ಯಾಟ್ವಿಕ್‌ನಲ್ಲಿ ಅದಕ್ಕೆ ಲ್ಯಾಂಡಿಂಗ್ ಗೆ ಅವಕಾಶ ನೀಡಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಕೆಲಸದ ಒತ್ತಡ ತಾಳಲಾರದೆ ಕೋರ್ಟ್‌ನಿಂದ ಹಾರಿ ವಿಶೇಷ ಚೇತನ ಸಿಬ್ಬಂದಿ ಆತ್ಮಹತ್ಯೆ; ಡೆತ್ ನೋಟ್‌ನಲ್ಲಿ ಏನಿದೆ?
ಅಮೃತಸರದಿಂದ ಬರ್ಮಿಂಗ್ ಹ್ಯಾಮ್‌ಗೆ ಹೊರಟಿದ್ದ ಎI117 ಬೋಯಿಂಗ್ 787 ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ಗಮ್ಯಸ್ಥಾನ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದೆ ಅದನ್ನು ಲಂಡನ್ ನ ಹೀಥ್ರೂಗೆ ಕಳುಹಿಸಲಾಯಿತು. ಅಲ್ಲಿ ಅದನ್ನು ಲ್ಯಾಂಡಿಂಗ್ ಮಾಡಲಾಯಿತು ಎಂದು ಭಾರತೀಯ ವಿಮಾನಯಾನ ಸಂಸ್ಥೆ ತಿಳಿಸಿದೆ.