ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಧಾನಿ ತಾರಿಕ್ ರೆಹಮಾನ್ ಭಾರತಕ್ಕೆ ಭೇಟಿ ನೀಡುವ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಬಾಂಗ್ಲಾದೇಶ

Bangladesh PM’s Possible India Visit: ಪ್ರಧಾನಿ ತಾರಿಕ್ ರೆಹಮಾನ್ ಅವರ ಭಾರತ ಭೇಟಿಯ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ ಎಂದು ಬಾಂಗ್ಲಾದೇಶ ಹೇಳಿದೆ. ಯಾವುದೇ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ ಎಂದು ಭಾರತದ ಪ್ರಸ್ತಾವಿತ ಪ್ರವಾಸದ ಕುರಿತು ವಿದೇಶಾಂಗ ಖಾತೆ ರಾಜ್ಯ ಸಚಿವ ಹುಮಾಯೂನ್ ಕಬೀರ್ ಪ್ರತಿಕ್ರಿಯಿಸಿದ್ದಾರೆ.

ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ (ಸಂಗ್ರಹ ಚಿತ್ರ)

ಢಾಕಾ, ಸೆ. 2: ಪ್ರಧಾನಿ ತಾರಿಕ್ ರೆಹಮಾನ್ (Tarique Rahman) ಅವರ ಭಾರತ ಭೇಟಿಯ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ ಎಂದು ಬಾಂಗ್ಲಾದೇಶ (Bangladesh) ಹೇಳಿದೆ. ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರಿಗೆ ಆಶ್ರಯ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿರುವ ಬಾಂಗ್ಲಾದೇಶ ಪ್ರಧಾನಿ ಭೇಟಿಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸದಿರುವುದು ಚರ್ಚೆಗೆ ಕಾರಣವಾಗಿದೆ. ಆಗಸ್ಟ್ 5ರಂದು ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಶೇಖ್ ಹಸೀನಾ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಆಯೋಜನೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಅಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ತಾವು ಬೆಂಬಲಿಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು.

ಈ ಘಟನೆಗೆ ಬಾಂಗ್ಲಾದೇಶ ತೀವ್ರವಾಗಿ ಪ್ರತಿಕ್ರಿಯಿಸಿದ್ದು, “ಶೇಖ್ ಹಸೀನಾ ಅವರಿಗೆ ಮಾಧ್ಯಮಗಳೊಂದಿಗೆ ಬಹಿರಂಗವಾಗಿ ಸಂವಹನ ನಡೆಸಲು ಅವಕಾಶ ನೀಡುವುದು ನಮ್ಮ ಜನರ ಭಾವನೆಗಳಿಗೆ ಆಳವಾದ ಆಘಾತ ಉಂಟು ಮಾಡಿದೆ ಹಾಗೂ ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸೌಹಾರ್ದಯುತ ದ್ವಿಪಕ್ಷೀಯ ಸಂಬಂಧಗಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಿದೆ” ಎಂದು ಅದು ಹೇಳಿದೆ.

ಶೇಖ್ ಹಸೀನಾ ಗಡಿಪಾರು ಮಾಡುವವರೆಗೆ ಪ್ರಧಾನಿ ಭಾರತಕ್ಕೆ ಭೇಟಿ ನೀಡಲ್ಲ ಎಂದ ಬಾಂಗ್ಲಾದೇಶ

ಬಾಂಗ್ಲಾದೇಶದ ಪ್ರಧಾನಮಂತ್ರಿ ತಾರಿಕ್ ರೆಹಮಾನ್ ಅವರ ಆಪ್ತ ಸಹಾಯಕ ಹಾಗೂ ದೇಶದ ನೂತನ ವಿದೇಶಾಂಗ ಖಾತೆ ರಾಜ್ಯ ಸಚಿವ ಹುಮಾಯೂನ್ ಕಬೀರ್ ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ಇದನ್ನು ಉತ್ತಮ ಮತ್ತು ನಿರೀಕ್ಷಿತ ನಡೆ ಎಂದು ಕರೆದ ಅವರು, ಬಾಂಗ್ಲಾದೇಶದಿಂದ ಪಲಾಯನ ಮಾಡಿರುವ ಅಮಾನತುಗೊಂಡ ಅವಾಮಿ ಲೀಗ್‌ನ ಸದಸ್ಯರನ್ನು ಇದೇ ರೀತಿ ಎದುರಿಸಬೇಕು ಎಂದು ಹೇಳಿದರು.

ನಾವು ಯಾವುದೇ ಉಗ್ರಗಾಮಿಗಳಿಗೆ ಢಾಕಾದಲ್ಲಿ ಅವಕಾಶ ನೀಡುವುದಿಲ್ಲ. ಅದೇ ರೀತಿ ಬಾಂಗ್ಲಾದೇಶದಿಂದ ತಲೆಮರೆಸಿಕೊಂಡಿರುವ ಯಾವುದೇ ಉಗ್ರಗಾಮಿಗಳಿಗೆ ಭಾರತದ ಬೇರೆಲ್ಲೂ ಸ್ಥಳಾವಕಾಶ ನೀಡಬಾರದು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಬಾಂಗ್ಲಾದೇಶದ ಪ್ರಧಾನಮಂತ್ರಿ ತಾರಿಕ್ ರೆಹಮಾನ್ ಅವರ ಭಾರತದ ಪ್ರಸ್ತಾವಿತ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಹುಮಾಯೂನ್ ಕಬೀರ್, ಯಾವುದೇ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಆದರೆ ಪರಸ್ಪರ ಗೌರವ, ಪರಸ್ಪರ ಹಿತಾಸಕ್ತಿ ಮತ್ತು ಉಭಯ ದೇಶಗಳ ಪ್ರಧಾನ ಮಂತ್ರಿಗಳ ಸಮಯದ ಲಭ್ಯತೆಯ ಆಧಾರದ ಮೇಲೆ, ಖಂಡಿತವಾಗಿಯೂ ಸೂಕ್ತ ಸಮಯದಲ್ಲಿ ಈ ಭೇಟಿ ನಡೆಯಲಿದ್ದು, ನಾವು ದಿನಾಂಕವನ್ನು ನಿಗದಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ.