ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bangladesh Unrest: ಬಾಂಗ್ಲಾದಲ್ಲಿ ಮುಂದುವರಿದ ಹಿಂದೂ ನರಮೇಧ, 18 ದಿನಗಳಲ್ಲಿ 6ನೇ ಬಲಿ

ಬಾಂಗ್ಲಾದೇಶದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಹಿಂದೂಗಳ ಮೇಲಿನ ದೌರ್ಜನ್ಯ ಕ್ರೌರ್ಯ ಮುಂದುವರಿದಿದೆ. ಸೋಮವಾರ ಹಿಂದೂ ಯುವಕನೊಬ್ಬನನ್ನ ಗುಂಡಿಕ್ಕಿ ಕೊಲ್ಲಲಾಗಿದೆ. ಅದೇ ಸಮಯ ಮತ್ತೊಂದು ಕಡೆ ಹಿಂದೂ ವಿಧವೆಯೊಬ್ಬರ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದಿದ್ದಾರೆ.

ಬಾಂಗ್ಲಾದಲ್ಲಿ ಮುಂದುವರಿದ ಹಿಂದೂ ನರಮೇಧ, 18 ದಿನಗಳಲ್ಲಿ 6ನೇ ಬಲಿ

ಮೃತ ಮಣಿ ಚಕ್ರವರ್ತಿ -

ಹರೀಶ್‌ ಕೇರ
ಹರೀಶ್‌ ಕೇರ Jan 6, 2026 7:15 AM

ಢಾಕಾ, ಜ.06 : ಬಾಂಗ್ಲಾದೇಶದಲ್ಲಿ ಅಶಾಂತಿ (Bangladesh Unrest) ಮುಂದುವರಿದಿದ್ದು, ಮತ್ತೊಬ್ಬ ಹಿಂದೂ ಯುವಕನ (hindu killings) ಹತ್ಯೆಯಾಗಿದೆ. ಕೇವಲ 18 ದಿನಗಳಲ್ಲಿ ಹಿಂದೂ ಸಮುದಾಯದ ಸದಸ್ಯರ ಮೇಲೆ ನಡೆದ ಆರನೇ ಮಾರಕ ದಾಳಿ ಇದಾಗಿದೆ. ಸೋಮವಾರ ರಾತ್ರಿ ನರಸಿಂಗಡಿ ಜಿಲ್ಲೆಯ ಚಾರ್ಸಿಂದೂರ್ ಬಜಾರ್‌ನಲ್ಲಿ ದಿನಸಿ ವ್ಯಾಪಾರಿ ಮಣಿ ಚಕ್ರವರ್ತಿ ಅವರನ್ನು ಹತ್ಯೆ ಮಾಡಲಾಗಿದೆ.

ಸ್ಥಳೀಯ ಮೂಲಗಳ ಪ್ರಕಾರ, ಪಲಾಶ್ ಉಪಜಿಲ್ಲಾದ ಜನನಿಬಿಡ ಮಾರುಕಟ್ಟೆಯಲ್ಲಿ ಚಕ್ರವರ್ತಿ ತಮ್ಮ ಅಂಗಡಿಯನ್ನು ನಡೆಸುತ್ತಿದ್ದಾಗ ಗುರುತಿಸಲಾಗದ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ದಾರಿಯಲ್ಲಿ ಅವರು ಸಾವನ್ನಪ್ಪಿದರು.

ಬಾಂಗ್ಲಾದೇಶದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಹಿಂದೂಗಳ ಮೇಲಿನ ದೌರ್ಜನ್ಯ ಕ್ರೌರ್ಯ ಮುಂದುವರಿದಿದೆ. ಸೋಮವಾರ ಹಿಂದೂ ಯುವಕನೊಬ್ಬನನ್ನ ಗುಂಡಿಕ್ಕಿ ಕೊಲ್ಲಲಾಗಿದೆ. ಅದೇ ಸಮಯ ಮತ್ತೊಂದು ಕಡೆ ಹಿಂದೂ ವಿಧವೆಯೊಬ್ಬರ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದಿದ್ದಾರೆ.

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಹತ್ಯಾಕಾಂಡ; ಗುಂಡಿಟ್ಟು ಪತ್ರಕರ್ತನ ಕೊಲೆ

ಗುಂಡಿಕ್ಕಿ ಹಿಂದೂ ಯುವಕನ ಹತ್ಯೆ

ಭಾನುವಾರ ಸಂಜೆ 5:45ರ ಸುಮಾರಿಗೆ ಮತ್ತೊಬ್ಬ ಹಿಂದೂ ಯುವಕನನ್ನ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಮೃತನನ್ನ ರಾಣಾ ಪ್ರತಾಪ್ ಬೈರಾಗಿ (Rana Pratap Bairagi) ಎಂದು ಗುರುತಿಸಲಾಗಿದೆ. ಜೆಸ್ಸೋರ್‌ ಜಿಲ್ಲೆಯ ಮೊನಿರಾಂಪುರ ಉಪಜಿಲ್ಲೆಯಲ್ಲಿ ನೂರಾರು ಜನರ ಸಮ್ಮುಖದಲ್ಲೇ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.

ಹಿಂದೂ ವಿಧವೆ ಮೇಲೆ ಅತ್ಯಾಚಾರ

ಬಾಂಗ್ಲಾದೇಶದ ಜೆನೈದಾ ಜಿಲ್ಲೆಯ ಕಲಿಗಂಜ್‌ನಲ್ಲಿ ಇಬ್ಬರು ದುಷ್ಕರ್ಮಿಗಳು 40 ವರ್ಷದ ಹಿಂದೂ ವಿಧವೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ, ಅತ್ಯಾಚಾರದ ನಂತರ ಮರಕ್ಕೆ ಕಟ್ಟಿಹಾಕಿ, ಆಕೆಯ ಕೂದಲು ಕತ್ತರಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಶಾಹೀನ್ ಮತ್ತು ಆತನ ಸಹೋದರ ಹಸನ್ ಆರೋಪಿಗಳೆಂದು ಗುರುತಿಸಲಾಗಿದೆ.