ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶವನ್ನೇ ನಡುಗಿಸುತ್ತೇನೆ; ಭಾರತ ವಿರೋಧಿ ನಾಯಕ ಉಸ್ಮಾನ್‌ ಶರೀಫ್‌ ಹತ್ಯೆಗೂ ಮುನ್ನ ಪ್ರೇಯಸಿ ಬಳಿ ಹೇಳಿದ್ದ ಆರೋಪಿ ಫೈಸಲ್‌ ಕರಿಂ

ಭಾರತ ವಿರೋಧಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರನ್ನು ಹತ್ಯೆ ಮಾಡುವ ಹಿಂದಿನ ರಾತ್ರಿ ಗೆಳತಿ ಜೊತೆ ಮಾತನಾಡಿದ ಪ್ರಮುಖ ಆರೋಪಿ ಫೈಸಲ್ ಕರೀಮ್, ಬಾಂಗ್ಲಾದೇಶವನ್ನು ಸಂಪೂರ್ಣವಾಗಿ ನಡುಗಿಸುತ್ತೇನೆ ಎಂದು ಹೇಳಿದ್ದ ಎಂದು ಢಾಕಾ ಮೂಲದ ಮಾಧ್ಯಮವೊಂದು ವರದಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಫೈಸಲ್ ಕುಟುಂಬದವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಉಸ್ಮಾನ್ ಶರೀಫ್ ಹಾದಿ (ಸಂಗ್ರಹ ಚಿತ್ರ)

ಢಾಕಾ: ದೇಶವೇ ನಡುಗುವ ಹಾಗೆ ಮಾಡುತ್ತೇನೆ ಎಂದಿದ್ದ ಬಾಂಗ್ಲಾದೇಶದ (Bangladesh) ಯುವ ನಾಯಕ ಉಸ್ಮಾನ್ ಶರೀಫ್ ಹಾದಿ (Sharif Osman Hadi) ಹತ್ಯೆಯ ಪ್ರಮುಖ ಆರೋಪಿ. ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ (Sharif Osman Hadi murder) ಹಿಂದಿನ ದಿನ ರಾತ್ರಿ ಗೆಳತಿಗೆ ಕರೆ ಮಾಡಿದ್ದ ಪ್ರಮುಖ ಆರೋಪಿ ಫೈಸಲ್ ಕರೀಮ್, ನಾನು ಮಾಡುವ ಕಾರ್ಯದಿಂದ ಬಾಂಗ್ಲಾದೇಶವೇ ಬೆಚ್ಚಿ ಬೀಳಲಿದೆ ಎಂದಿದ್ದ ಎಂದು ಢಾಕಾದ (Dhaka) ಮಾಧ್ಯಮವೊಂದು ವರದಿ ಮಾಡಿದೆ. ಬಾಂಗ್ಲಾದೇಶದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಮೇಲೆ ದಾಳಿ ನಡೆದ ಬಳಿಕ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆದು ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು.

ಷರೀಫ್ ಉಸ್ಮಾನ್ ಹಾದಿ ಹತ್ಯೆಯ ಬಳಿಕ ಪ್ರತಿಭಟನಾಕಾರರು ಮಾಧ್ಯಮ ಸಂಸ್ಥೆಗಳು, ಸಾಂಸ್ಕೃತಿಕ ಕೇಂದ್ರಗಳು ಮತ್ತು ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ನಿವಾಸವನ್ನು ಕೂಡ ಸುಟ್ಟುಹಾಕಿದರು.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಮೊದಲ ಪತ್ನಿಗೆ 17 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

ಈ ನಡುವೆ ಷರೀಫ್ ಉಸ್ಮಾನ್ ಹಾದಿ ಹತ್ಯೆಯ ಪ್ರಮುಖ ಆರೋಪಿ ಫೈಸಲ್ ಕರೀಮ್, ಹಾದಿ ಅವರ ಹತ್ಯೆಯ ಹಿಂದಿನ ರಾತ್ರಿ ಗೆಳತಿಯೊಂದಿಗೆ ಮಾತನಾಡಿದ್ದು, ಇಡೀ ಬಾಂಗ್ಲಾದೇಶವನ್ನು ನಡುಗಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದ. ಇದಾಗಿ ಕೆಲವು ಗಂಟೆಗಳ ಬಳಿಕ ಆತ ಇತರ ಇಬ್ಬರೊಂದಿಗೆ ಸೇರಿ ಢಾಕಾದಲ್ಲಿ ಷರೀಫ್ ಉಸ್ಮಾನ್ ಹಾದಿ ಮೇಲೆ ಗುಂಡಿನ ದಾಳಿ ನಡೆಸಿದ್ದನು.

ಘಟನೆಯ ಮೊದಲೇ ಫೈಸಲ್ ತನ್ನ ಗೆಳತಿ ಮಾರಿಯಾಗೆ ವಿಷಯ ತಿಳಿಸಿದ್ದಾನೆ. ಸಹೇದಾ ಪರ್ವಿನ್ ಸಾಮಿಯಾ ಎಂಬ ಮಹಿಳೆಯನ್ನು ಫೈಸಲ್ ವಿವಾಹವಾಗಿದ್ದಾನೆ. ಸಾಮಿಯಾ ಸೇರಿದಂತೆ ಫೈಸಲ್ ಕುಟುಂಬ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಸಭ್ಯ ಉಡುಗೆ, ಸಮಯಪಾಲನೆ ಕಡ್ಡಾಯ: ಸರ್ಕಾರಿ ನೌಕರರಿಗೆ ಕಠಿಣ ನಿಯಮ ಜಾರಿ

ಷರೀಫ್ ಉಸ್ಮಾನ್ ಹಾದಿ ಮೇಲೆ ಡಿಸೆಂಬರ್ 12ರಂದು ಢಾಕಾದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಬಳಿಕ ತೀವ್ರವಾಗಿ ಗಾಯಗೊಂಡ ಅವರನ್ನು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಎವರ್‌ಕೇರ್ ಆಸ್ಪತ್ರೆಗೆ ಸೇರಿಸಲಾಯಿತು. ಅನಂತರ ಅಲ್ಲಿಂದ ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ಸಿಂಗಾಪುರ ಜನರಲ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಬಳಿಕ ಸಿಂಗಾಪುರದ ವಿದೇಶಾಂಗ ಸಚಿವಾಲಯವು ಅವರ ಸಾವನ್ನಪ್ಪಿರುವುದಾಗಿ ಘೋಷಿಸಿತ್ತು.

ವಿದ್ಯಾ ಇರ್ವತ್ತೂರು

View all posts by this author